Australia vs India, 4th Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಕೊನೆಯ ದಿನದಾಟಕ್ಕೆ ಕಾಲಿಟ್ಟಿದೆ. ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ 340 ರನ್ಗಳನ್ನು ಕಲೆಹಾಕಿದರೆ ಗೆಲುವು ದಾಖಲಿಸಬಹುದು. ಅತ್ತ ಆಸ್ಟ್ರೇಲಿಯಾ ತಂಡ ಗೆಲ್ಲಬೇಕಿದ್ದರೆ 10 ವಿಕೆಟ್ಗಳನ್ನು ಪಡೆಯಲೇಬೇಕು. ಹೀಗಾಗಿ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಫೈನಲ್ ಡೇ ಫೈಟ್ ಆಗಿ ಮಾರ್ಪಟ್ಟಿದೆ.