IND vs AUS: ಅಡಿಲೇಡ್‌ನಲ್ಲಿ ಹೊಸ ಇತಿಹಾಸ ಬರೆಯುವ ತವಕದಲ್ಲಿ ಕಿಂಗ್ ಕೊಹ್ಲಿ
Virat Kohli: ಅಡಿಲೇಡ್‌ನಲ್ಲಿ ನಡೆಯಲ್ಲಿರುವ ಹಗಲು-ರಾತ್ರಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ 43 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ಅಂತರಾಷ್ಟ್ರೀಯ ರನ್ ಪೂರೈಸುತ್ತಾರೆ. ವಿಶೇಷವೆಂದರೆ ಅಡಿಲೇಡ್ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಆಟಗಾರ ವಿರಾಟ್ ಆಗಲಿದ್ದಾರೆ. ಅಂದರೆ ವಿರಾಟ್ ಬಿಟ್ಟರೆ ಯಾವ ವಿದೇಶಿ ಆಟಗಾರನೂ ಆಸ್ಟ್ರೇಲಿಯಾದ ಈ ನೆಲದಲ್ಲಿ ಇಷ್ಟು ರನ್ ಗಳಿಸಿಲ್ಲ.
1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ಅಡಿಲೇಡ್‌ನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಡಿಸೆಂಬರ್ 6 ರಂದು ನಡೆಯಲಿರುವ ಈ ಪಂದ್ಯ ಹಗಲು-ರಾತ್ರಿ ನಡೆಯಲಿದೆ. ಅಂದರೆ, ಈ ಪಂದ್ಯದಲ್ಲಿ ಕೆಂಪು ಚೆಂಡಿನ ಬದಲು ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುವುದು.
2 / 6
ಇನ್ನು ಈ ಪಂದ್ಯ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ತುಂಬಾ ವಿಶೇಷವಾಗಿದ್ದು, ಈ ಪಂದ್ಯದಲ್ಲಿ ಕೊಹ್ಲಿಗೆ ದೊಡ್ಡ ದಾಖಲೆ ನಿರ್ಮಿಸುವ ಅವಕಾಶವಿದೆ. ಇದುವರೆಗೆ ಅಡಿಲೇಡ್ ನೆಲದಲ್ಲಿ ಯಾವುದೇ ಆಟಗಾರನು ಮಾಡಲು ಸಾಧ್ಯವಾಗದ ದಾಖಲೆಯನ್ನು ಕೊಹ್ಲಿ ಬರೆಯುವ ಸಾಧ್ಯತೆ ಇದೆ.
3 / 6
ಇದಕ್ಕೆ ಪೂರಕವಾಗಿ ಅಡಿಲೇಡ್ ಮೈದಾನ ಕೊಹ್ಲಿಯ ನೆಚ್ಚಿನ ಮೈದಾನವಾಗಿದ್ದು, ಈ ಪಿಚ್ನಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಡಿಲೇಡ್ ಓವಲ್ ಮೈದಾನದಲ್ಲಿ ವಿರಾಟ್ ಇದುವರೆಗೆ 11 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 73.61 ಸರಾಸರಿಯಲ್ಲಿ 957 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳೂ ಸೇರಿವೆ.
4 / 6
ಈ ಹಗಲು-ರಾತ್ರಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ 43 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ಅಂತರಾಷ್ಟ್ರೀಯ ರನ್ ಪೂರೈಸುತ್ತಾರೆ. ವಿಶೇಷವೆಂದರೆ ಅಡಿಲೇಡ್ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಆಟಗಾರ ವಿರಾಟ್ ಆಗಲಿದ್ದಾರೆ. ಅಂದರೆ ವಿರಾಟ್ ಬಿಟ್ಟರೆ ಯಾವ ವಿದೇಶಿ ಆಟಗಾರನೂ ಆಸ್ಟ್ರೇಲಿಯಾದ ಈ ನೆಲದಲ್ಲಿ ಇಷ್ಟು ರನ್ ಗಳಿಸಿಲ್ಲ.
5 / 6
ಕೊಹ್ಲಿ ಹೊರತುಪಡಿಸಿ ಬ್ರಿಯಾನ್ ಲಾರಾ ಈ ಮೈದಾನದಲ್ಲಿ 940 ರನ್ ಗಳಿಸಿದ್ದರು. ಆದರೆ, ನಾವು ಟೆಸ್ಟ್ ಸ್ವರೂಪದ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 63.62 ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು ಒಂದು ಅರ್ಧ ಶತಕ ಸೇರಿದೆ.
6 / 6
ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ರನ್ ಗಳಿಸಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 143 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 100 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅವರು 16 ತಿಂಗಳ ಹಿಂದೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದರು. ಅಂದಿನಿಂದ ಕೊಹ್ಲಿ ಬ್ಯಾಟ್ ಟೆಸ್ಟ್ ಶತಕದ ಬರ ಎದುರಿಸುತ್ತಿತ್ತು.