ಅಂಪೈರ್​ಗಳೊಂದಿಗೆ ಫಿಕ್ಸಿಂಗ್​ ಮಾಡ್ತಿದ್ರು: CSK​ ವಿರುದ್ಧ ಗಂಭೀರ ಆರೋಪ

IPL CSK: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸ್ಪಾಟ್ ಫಿಕ್ಸಿಂಗ್ ಕಾರಣದಿಂದಾಗಿ ಸಿಎಸ್​​ಕೆ ಫ್ರಾಂಚೈಸಿಯು 2 ವರ್ಷಗಳ ನಿಷೇಧಕ್ಕೆ ಒಳಗಾಗಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಂಪೈರ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.

ಝಾಹಿರ್ ಯೂಸುಫ್
|

Updated on: Nov 28, 2024 | 8:53 AM

ಇಂಡಿಯನ್ ಪ್ರೀಮಿಯರ್ ಲೀಗ್​​ನ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಅದು ಸಹ ಪಂದ್ಯ ಗೆಲ್ಲಲು ಅಂಪೈರ್​​​ಗಳನ್ನ ಫಿಕ್ಸ್​ ಮಾಡುತ್ತಿದ್ದರು ಎಂಬ ಗಂಭೀರ ಆರೋಪ. ಈ ಆರೋಪ ಮಾಡಿದ್ದು ಮತ್ಯಾರೂ ಅಲ್ಲ, ಐಪಿಎಲ್​​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ.

1 / 6
ಈ ಬಗ್ಗೆ ಪೋಡ್​​ಕಾಸ್ಟ್​ವೊಂದಲ್ಲಿ ಮಾತನಾಡಿದ ಲಲಿತ್ ಮೋದಿ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಅವರು ಸಿಎಸ್​​ಕೆ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್​​ಗಳನ್ನು ನೇಮಿಸುತ್ತಿದ್ದರು. ಮೊದಲು ನಾನು ಈ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಸಿಎಸ್​​ಕೆ ಪಂದ್ಯಗಳಿಗೆಲ್ಲಾ ಚೈನ್ನೈನ ಅಂಪೈರ್​​​ಗಳೇ ಇರುತ್ತಿದ್ದರು. ಇದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ.

2 / 6
ಸಿಎಸ್​​ಕೆ ಪರ ತೀರ್ಪು ಬರಲೆಂದು ತಮಗೆ ಬೇಕಾದ ಅಂಪೈರ್​​ಗಳನ್ನು ನೇಮಿಸುತ್ತಿದ್ದರು. ಈ ಮೂಲಕ ಫಿಕ್ಸಿಂಗ್ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಷಯವನ್ನು  ಬಹಿರಂಗಪಡಿಸಲು ನಾನು ಪ್ರಯತ್ನಿಸಿದೆ. ಈ ವೇಳೆ ಅವರು ನನ್ನ ವಿರುದ್ಧ ನಿಂತರು. ಅಂದು ಎನ್ ಶ್ರೀನಿವಾಸನ್ ಅವರು ಬಿಸಿಸಿಐ ಕಾರ್ಯದರ್ಶಿಯಾಗಿದ್ದರು.

3 / 6
ನಾನು ಸಿಎಸ್​​ಕೆ ಫ್ರಾಂಚೈಸಿಯ ಕಳ್ಳಾಟವನ್ನು ಬೆಳಕಿಗೆ ತಂದಿದ್ದರಿಂದ ಅವರು ನನ್ನ ಕಡು ವಿರೋಧಿಯಾದರು. ಹೀಗಾಗಿ ನನ್ನ ವಿರುದ್ಧ ಭ್ರಷ್ಟಚಾರದ ಅರೋಪಳನ್ನು ಹೊರಿಸಿದರು. ಈಗಲೂ ಖಚಿತವಾಗಿ ಹೇಳಬಲ್ಲೆ ಚೆನ್ನೈ ಸೂಪರ್ ಕಿಂಗ್ಸ್ ಅಂಪೈರ್​ಗಳನ್ನೇ ಫಿಕ್ಸ್ ಮಾಡಿಕೊಳ್ಳುತ್ತಿದ್ದದ್ದು ನಿಜ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

4 / 6
ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್​​ನ ಮಾಜಿ ಅಧ್ಯಕ್ಷರ ಆರೋಪವು ಭಾರೀ ಚರ್ಚೆಗೆ ಕಾರಣವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಚಾಂಪಿಯನ್ ಪಟ್ಟದ ಮೇಲೆಯೇ ಪ್ರಶ್ನೆಗಳೆದ್ದಿವೆ. ಏಕೆಂದರೆ ಸಿಎಸ್​​​ಕೆ ಫ್ರಾಂಚೈಸಿ ಈ ಹಿಂದೆ 2 ವರ್ಷಗಳ ಕಾಲ ನಿಷೇಧಕ್ಕೊಳಗಾಗಿತ್ತು.

5 / 6
ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಗಳ ಕಾರಣದಿಂದಾಗಿ 2016 ಮತ್ತು 2017 ರ ಐಪಿಎಲ್​​ನಿಂದ ಸಿಎಸ್​​ಕೆ ಫ್ರಾಂಚೈಸಿಯನ್ನು ಬ್ಯಾನ್ ಮಾಡಲಾಗಿತ್ತು. ಇದೀಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೇಲೆ ಅಂಪೈರ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದು, ಈ ಗಂಭೀರ ಆರೋಪದ ಬಗ್ಗೆ ಸಿಎಸ್​​ಕೆ ಏನು ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

6 / 6
Follow us
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ

‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?

‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ

ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್

ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!

ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ

ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?

ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ

"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ