IND vs BAN: 7ನೇ ವಿಕೆಟ್​ಗೆ ದಾಖಲೆಯ ಜೊತೆಯಾಟ; ಸಚಿನ್-ಜಹೀರ್ ದಾಖಲೆ ಉಡೀಸ್

Updated on: Sep 19, 2024 | 7:09 PM

R Ashwin-Ravindra Jadeja: ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೊತೆಯಾಗಿ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇಂದು ಕೂಡ ಅದೇ ಕೆಲಸವನ್ನು ಮಾಡಿರುವ ಈ ಜೋಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, 7ನೇ ವಿಕೆಟ್​ಗೆ ದಾಖಲೆಯ ಜೊತೆಯಾಟವನ್ನು ನಡೆಸುವುದರೊಂದಿಗೆ ದಿಗ್ಗಜರ ದಾಖಲೆಯನ್ನು ಪುಡಿಗಟ್ಟಿದೆ.

1 / 6
ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೊತೆಯಾಗಿ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇಂದು ಕೂಡ ಅದೇ ಕೆಲಸವನ್ನು ಮಾಡಿರುವ ಈ ಜೋಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, 7ನೇ ವಿಕೆಟ್​ಗೆ ದಾಖಲೆಯ ಜೊತೆಯಾಟವನ್ನು ನಡೆಸುವುದರೊಂದಿಗೆ ದಿಗ್ಗಜರ ದಾಖಲೆಯನ್ನು ಪುಡಿಗಟ್ಟಿದೆ.

ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೊತೆಯಾಗಿ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇಂದು ಕೂಡ ಅದೇ ಕೆಲಸವನ್ನು ಮಾಡಿರುವ ಈ ಜೋಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, 7ನೇ ವಿಕೆಟ್​ಗೆ ದಾಖಲೆಯ ಜೊತೆಯಾಟವನ್ನು ನಡೆಸುವುದರೊಂದಿಗೆ ದಿಗ್ಗಜರ ದಾಖಲೆಯನ್ನು ಪುಡಿಗಟ್ಟಿದೆ.

2 / 6

ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ಭಾರತ 144 ರನ್​ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 7ನೇ ವಿಕೆಟ್​ಗೆ ಜೊತೆಯಾದ ಅಶ್ವಿನ್ ಹಾಗೂ ಜಡೇಜಾ ಮುರಿಯದ ವಿಕೆಟ್​ಗೆ 195 ರನ್​ಗಳ ದಾಖಲೆಯ ಜೊತೆಯಾಟವನ್ನು ಕಟ್ಟಿದ್ದಾರೆ.

3 / 6

ಈ 195 ರನ್​ಗಳ ಜೊತೆಯಾಟದಲ್ಲಿ ಅಶ್ವಿನ್ ಪಾಲು ಅಜೇಯ 102 ರನ್​ಗಳಿದ್ದರೆ, ಜಡೇಜಾ ಪಾಲು ಅಜೇಯ 86 ರನ್​ಗಳಿವೆ. ಈ ಇಬ್ಬರು ಈ ಆಟಗಾರರು 7ನೇ ವಿಕೆಟ್​ಗೆ ಈ ಜೊತೆಯಾಟವನ್ನು ಕಟ್ಟುವ ಮೂಲಕ 2004 ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೇಗಿ ಜಹೀರ್ ಖಾನ್ ಜೊತೆಯಾಗಿ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

4 / 6

20 ವರ್ಷಗಳ ಹಿಂದೆ ಅಂದರೆ 2014 ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೇಗಿ ಜಹೀರ್ ಖಾನ್ ಇದೇ ಬಾಂಗ್ಲಾದೇಶ ವಿರುದ್ಧ ಡಾಕಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 10ನೇ ವಿಕೆಟ್​ಗೆ 133 ರನ್​ಗಳ ಜೊತೆಯಾಟ ಕಟ್ಟಿದ್ದರು. ಇದೀಗ 195 ರನ್​ಗಳ ಜೊತೆಯಾಟವನ್ನಾಡಿರುವ ಅಶ್ವಿನ್ ಹಾಗೂ ಜಡೇಜಾ ಬಾಂಗ್ಲಾದೇಶ ವಿರುದ್ಧ ಭಾರತದ ಪರ ಏಳನೇ ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ಮಾಡಿದ ದಾಖಲೆ ನಿರ್ಮಿಸಿದ್ದಾರೆ.

5 / 6

ಇದಲ್ಲದೆ ಈ ಜೋಡಿ 24 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶದ ವಿರುದ್ಧ 7ನೇ ವಿಕೆಟ್‌ಗೆ ಭಾರತ ದಾಖಲಿಸಿದ ಅತ್ಯಧಿಕ ರನ್ ಜೊತೆಯಾಟದ ದಾಖಲೆ ಸೌರವ್ ಗಂಗೂಲಿ ಮತ್ತು ಸುನಿಲ್ ಜೋಶಿ ಹೆಸರಿನಲ್ಲಿತ್ತು. ಈ ಇಬ್ಬರು 2000 ರಲ್ಲಿ ಢಾಕಾ ಟೆಸ್ಟ್ ಪಂದ್ಯದಲ್ಲಿ 121 ರನ್‌ಗಳ ಜೊತೆಯಾಟವನ್ನು ಮಾಡಿದ್ದರು. ಇದೀಗ ಆ ದಾಖಲೆ ಅಶ್ವಿನ್ ಮತ್ತು ಜಡೇಜಾ ಪಾಲಾಗಿದೆ.

6 / 6

ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೋಡಿ ಇನ್ನೂ ಅಜೇಯರಾಗಿ ಉಳಿದಿದೆ. ಹೀಗಾಗಿ ಎರಡನೇ ದಿನದ ಆಟದಲ್ಲಿ, ಈ ಇಬ್ಬರೂ ಆಟಗಾರರು ತಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ಅವಕಾಶ ಪಡೆದಿದ್ದಾರೆ. ಈ ಇಬ್ಬರು ಆಟಗಾರರು ಇದುವರೆಗೆ 227 ಎಸೆತಗಳನ್ನು ಎದುರಿಸಿ ಅಜೇಯ 195 ರನ್ ಜೊತೆಯಾಟ ನಡೆಸಿದ್ದಾರೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us