IND vs ENG: ಮೊದಲ ದಿನವೇ ಮೂರು ದಾಖಲೆ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್..!
Yashasvi Jaiswal: ತಂಡದ ಪರ ದಿನವಿಡೀ ಬ್ಯಾಟಿಂಗ್ ಮಾಡಿದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದು 179 ರನ್ ಕಲೆಹಾಕಿದ್ದಾರೆ. ಈ ಮೂಲಕ ಭಾರತದಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಬರೆದಿರುವ ಜೈಸ್ವಾಲ್ ಮೊದಲ ದಿನದಾಟದಲ್ಲಿ ಬರೋಬ್ಬರಿ 3 ದಾಖಲೆಗಳನ್ನು ಸೃಷ್ಟಿಸಿದ್ದಾರೆ.
1 / 9
ಭಾರತ ಮತ್ತು ಇಂಗ್ಲೆಂಡ್ ನಡುವೆ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ದಿನದಾಟದ ಮೊದಲ ಇನ್ನಿಂಗ್ಸ್ನಲ್ಲಿ 93 ಓವರ್ ಬ್ಯಾಟಿಂಗ್ ಮಾಡಿರುವ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿದೆ.
2 / 9
ತಂಡದ ಪರ ದಿನವಿಡೀ ಬ್ಯಾಟಿಂಗ್ ಮಾಡಿದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದು 179 ರನ್ ಕಲೆಹಾಕಿದ್ದಾರೆ. ಈ ಮೂಲಕ ಭಾರತದಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಬರೆದಿರುವ ಜೈಸ್ವಾಲ್ ಮೊದಲ ದಿನದಾಟದಲ್ಲಿ ಬರೋಬ್ಬರಿ 3 ದಾಖಲೆಗಳನ್ನು ಸೃಷ್ಟಿಸಿದ್ದಾರೆ.
3 / 9
ಮೊದಲ ದಿನದಾಟದಲ್ಲಿ ಅಜೇಯ 179 ರನ್ ಕಲೆಹಾಕಿರುವ ಜೈಸ್ವಾಲ್, ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನ ಮೊದಲ ದಿನದಾಟದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಭಾರತದ 6ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
4 / 9
ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿರುವ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, 2004 ರಲ್ಲಿ ಪಾಕಿಸ್ತಾನದ ವಿರುದ್ಧ 228 ರನ್ ಕಲೆಹಾಕಿದ್ದರೆ, ಅದಕ್ಕೂ ಮುನ್ನ ಅಂದರೆ 2003 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 195 ರನ್ ಬಾರಿಸಿದ್ದರು.
5 / 9
ಹಾಗೆಯೇ ಶತಕದ ಇನ್ನಿಂಗ್ಸ್ ಆಡುವ ಮೂಲಕ ಜೈಸ್ವಾಲ್ ಮೊದಲ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 500 ಪ್ಲಸ್ ರನ್ ಗಳಿಸಿದ 8ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
6 / 9
ಜೈಸ್ವಾಲ್ಗೂ ಮುನ್ನ ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಶಿಖರ್ ಧವನ್, ದಿನೇಶ್ ಕಾರ್ತಿಕ್ ಮೊದಲ 10 ಇನ್ನಿಂಗ್ಸ್‌ಗಳಲ್ಲಿ 500 ಕ್ಕೂ ಅಧಿಕ ರನ್ ಬಾರಿಸಿದ ಸಾಧನೆ ಮಾಡಿದ್ದರು.
7 / 9
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಒಂದೇ ದಿನದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಭಾರತೀಯ ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್ ಜಂಟಿಯಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
8 / 9
ಜೈಸ್ವಾಲ್ಗೂ ಮುನ್ನ ಇಂಗ್ಲೆಂಡ್ ವಿರುದ್ಧ 2016 ರಲ್ಲಿ 232 ರನ್ ಕಲೆಹಾಕಿದ್ದ ಕನ್ನಡಿಗ ಕರುಣ್ ನಾಯರ್ ಮೊದಲ ಸ್ಥಾನದಲ್ಲಿದ್ದರೆ, ಜಂಟಿ ಎರಡನೇ ಸ್ಥಾನದಲ್ಲಿ 1979 ರಲ್ಲಿ 179 ರನ್ ಸಿಡಿಸಿದ್ದ ಸುನಿಲ್ ಗವಾಸ್ಕರ್ ಇದ್ದಾರೆ.
9 / 9
ಇದೀಗ ಬರೋಬ್ಬರಿ 45 ವರ್ಷಗಳ ನಂತರ ಅಂದರೆ 2024 ರಲ್ಲಿ, ಯಶಸ್ವಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಒಂದು ದಿನದಲ್ಲಿ ಅಜೇಯ 179 ರನ್ ಗಳಿಸುವ ಮೂಲಕ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.