IND vs ENG: 5 ವಿಕೆಟ್ ಉರುಳಿಸಿ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡ ಕುಲ್ದೀಪ್ ಯಾದವ್..!
IND vs ENG: ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದ ಆಂಗ್ಲರ ಬ್ಯಾಟಿಂಗ್ ಬೆನ್ನೇಲುಬು ಮುರಿಯುವಲ್ಲಿ ಪ್ರಮುಖ ಪಾತ್ರವಹಿಸಿದ ಟೀಂ ಇಂಡಿಯಾದ ರ್ವಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಾರೆ.
1 / 8
ಧರ್ಮಶಾಲಾದಲ್ಲಿ ಇಂದಿನಿಂದ ಆರಂಭವಾಗಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ದಿನದಾಟದ ಮೂರನೇ ಸೆಷನ್ ಆರಂಭದಲ್ಲೇ ತನ್ನೇಲ್ಲ ವಿಕೆಟ್ ಕಳೆದುಕೊಂಡು 218 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.
2 / 8
ತಂಡದ ಪರ ಆರಂಭಿಕ ಝಾಕ್ ಕ್ರೌಲಿ 79 ರನ್ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬಂದಿಲ್ಲ. 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಜಾನಿ ಬೈರ್ಸ್ಟೋವ್ ಬಾರಿಸಿದ 29ರನ್ಗಳೇ ತಂಡದ ಪರ ದಾಖಲಾದ ಎರಡನೇ ಅತ್ಯಧಿಕ ಮೊತ್ತವಾಗಿದೆ.
3 / 8
ಇನ್ನು ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದ ಆಂಗ್ಲರ ಬ್ಯಾಟಿಂಗ್ ಬೆನ್ನೇಲುಬು ಮುರಿಯುವಲ್ಲಿ ಪ್ರಮುಖ ಪಾತ್ರವಹಿಸಿದ ಟೀಂ ಇಂಡಿಯಾದ ರ್ವಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಾರೆ.
4 / 8
ಇದು ಕುಲ್ದೀಪ್ ಅವರ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆಯಾಗಿದೆ. ಹಾಗೆಯೇ ಕುಲ್ದೀಪ್ ಟೆಸ್ಟ್ ವೃತ್ತಿಜೀವನದಲ್ಲಿ ಆಡಿರುವ 12 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪೂರೈಸಿದರು. ಇದರೊಂದಿಗೆ ಭಾರತದ ಪರ ಅತಿ ವೇಗವಾಗಿ 50 ಟೆಸ್ಟ್ ವಿಕೆಟ್ ಪೂರೈಸಿದ ಬೌಲರ್ಗಳ ಪೈಕಿ ಜಂಟಿ ಐದನೇ ಸ್ಥಾನಕ್ಕೇರಿದ್ದಾರೆ.
5 / 8
ಭಾರತದ ಪರ ಟೆಸ್ಟ್ನಲ್ಲಿ ಅತಿ ವೇಗವಾಗಿ 50 ವಿಕೆಟ್ ಪೂರೈಸಿದ ಬೌಲರ್ಗಳ ಪೈಕಿ ಮೊದಲ ಸ್ಥಾನದಲ್ಲಿರುವ ಆರ್ ಅಶ್ವಿನ್ ಕೇವಲ 9 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
6 / 8
ಎರಡನೇ ಸ್ಥಾನದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಇದ್ದು, ಅವರು 10 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪೂರೈಸಿದ್ದರು.
7 / 8
ಮೂರನೇ ಸ್ಥಾನದಲ್ಲಿ ಮೂರು ಆಟಗಾರರಿದ್ದು, ನರೇಂದ್ರ ಹಿರ್ವಾಣಿ, ಹರ್ಭಜನ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 11 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪೂರ್ಣಗೊಳಿಸಿದ್ದರು.
8 / 8
ಇದೀಗ ಜಂಟಿಯಾಗಿ ಐದನೇ ಸ್ಥಾನಕ್ಕೇರಿರುವ ಕುಲ್ದೀಪ್ ಯಾದವ್ ಜೊತೆಗೆ ಎರಪಳ್ಳಿ ಪ್ರಸನ್ನ, ಶುಭಾಷ್ ಗುಪ್ತೆ, ಭಾಗವತ್ ಚಂದ್ರಶೇಖರ್, ಅಕ್ಷರ್ ಪಟೇಲ್ ಕೂಡ ಇದ್ದಾರೆ.
Published On - 2:49 pm, Thu, 7 March 24