IND vs ENG: ಟಿ20 ಸರಣಿಯಿಂದ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಔಟ್..!
IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ ಕೇವಲ ಒಂದು ಪಂದ್ಯ ಮಾತ್ರ ನಡೆದಿದ್ದು, ಆತಿಥೇಯ ಭಾರತ ತಂಡಕ್ಕೆ ಆರಂಭದಲ್ಲೇ ಕೆಟ್ಟ ಸುದ್ದಿ ಬಂದಿದೆ. ಈಗಾಗಲೇ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೆ, ಇದೀಗ ತಂಡದ ಸ್ಟಾರ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ.
1 / 6
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾಕ್ಕೆ ಈ ಸರಣಿಯ ನಡುವೆಯೇ ಒಂದರ ಮೇಲೆ ಒಂದರಂತೆ ಆಘಾತ ಎದುರಾಗಿದೆ. ಈಗಾಗಲೇ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಫಿಟ್‌ನೆಸ್ ಪ್ರಶ್ನೆಗೆ ಒಳಗಾಗಿದ್ದರೆ, ಯುವ ಆರಂಭಿಕ ಅಭಿಷೇಕ್ ಶರ್ಮಾ ಎರಡನೇ ಟಿ20 ಪಂದ್ಯಕ್ಕೂ ಒಂದು ದಿನ ಮೊದಲು ಅಭ್ಯಾಸದಲ್ಲಿ ಗಾಯಗೊಂಡಿದ್ದರು. ಆದಾಗ್ಯೂ ಅವರು ತಂಡದಲ್ಲಿರುವುದು ಕೊಂಚ ನಿರಾಳ ತಂದಿದೆ.
2 / 6
ಇದೀಗ ಸೂರ್ಯಕುಮಾರ್ ಯಾದವ್ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯದಿಂದಾಗಿ ರೆಡ್ಡಿ ಸರಣಿಯ ಭಾಗವಾಗುವುದಿಲ್ಲ. ಅವರ ಸ್ಥಾನದಲ್ಲಿ ಎರಡು ದಿನಗಳಲ್ಲಿ ಎರಡು ಬಾರಿ ಖಾತೆ ತೆರೆಯಲು ವಿಫಲರಾದ ಆಟಗಾರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಆಟಗಾರ ಮತ್ತ್ಯಾರು ಅಲ್ಲ, ಟಿ20 ವಿಶ್ವಕಪ್ ತಂಡದಲ್ಲಿದ್ದ ಶಿವಂ ದುಬೆ.
3 / 6
ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಈ ಆಘಾತ ಎದುರಾಗಿದ್ದು, ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಸೈಡ್ ಸ್ಟ್ರೈನ್ ಇದೆ. ಈ ಕಾರಣದಿಂದಾಗಿ ಅವರಿಗೆ ಮುಂದಿನ ಕೆಲವು ವಾರಗಳವರೆಗೆ ವಿಶ್ರಾಂತಿಯ ಅವಶ್ಯಕತೆ ಇದ್ದು, ಈ ಸರಣಿಯಲ್ಲಿ ಉಳಿದ ಪಂದ್ಯಗಳಲ್ಲಿ ಅವರು ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
4 / 6
ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಮುಂಬೈನ ಬ್ಯಾಟಿಂಗ್ ಆಲ್ ರೌಂಡರ್ ಶಿವಂ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ದುಬೆ ಅವರು ಜನವರಿ 25ರ ಶನಿವಾರ, ಅಂದರೆ ಎರಡನೇ ಟಿ20 ಪಂದ್ಯದ ದಿನ ಮುಂಬೈನಲ್ಲಿ ರಣಜಿ ಟ್ರೋಫಿ ಪಂದ್ಯ ಆಡುತ್ತಿದ್ದ ಕಾರಣ ಎರಡನೇ ಟಿ20 ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನವರಿ 28ರಂದು ನಡೆಯಲಿರುವ ಮೂರನೇ ಟಿ20ಯಿಂದ ತಂಡಕ್ಕೆ ಲಭ್ಯರಾಗಲಿದ್ದಾರೆ.
5 / 6
ಕಳೆದ 2 ದಿನಗಳಲ್ಲಿ ರಣಜಿ ಟ್ರೋಫಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 0 ರನ್‌ಗೆ ಔಟಾಗಿದ್ದರೂ ದುಬೆ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ದುಬೆ ಈ ಹಿಂದೆ ಟೀಂ ಇಂಡಿಯಾದ ಭಾಗವಾಗಿದ್ದರು ಮತ್ತು 2024 ರ ಟಿ20 ವಿಶ್ವಕಪ್‌ನ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ನಂತರ, ಅವರು ಜಿಂಬಾಬ್ವೆ ಪ್ರವಾಸದಲ್ಲಿ ತಂಡದೊಂದಿಗೆ ಇದ್ದರು ಆದರೆ ಬಾಂಗ್ಲಾದೇಶ ವಿರುದ್ಧದ ಟಿ 20 ಸರಣಿಯ ಮೊದಲು ಅವರು ಬೆನ್ನುನೋವಿಗೆ ಒಳಗಾಗಿದ್ದರು.
6 / 6
ಈ ಕಾರಣದಿಂದಾಗಿ ಅವರು ಮುಂದಿನ ಕೆಲವು ವಾರಗಳ ಕಾಲ ಕ್ರಿಕೆಟ್ ಆಕ್ಷನ್‌ನಿಂದ ದೂರ ಉಳಿದಿದ್ದರು. ಸ್ವಲ್ಪ ಸಮಯದ ಪುನರ್ವಸತಿ ನಂತರ, ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಿಂದ ಕ್ರಿಕೆಟ್ಗೆ ಮರಳಿದ್ದರು. ದುಬೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆರಂಭದಲ್ಲಿ ಸ್ಥಾನ ಪಡೆಯದಿದ್ದರೂ, ಇದೀಗ ಮತ್ತೊಮ್ಮೆ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ.