- Kannada News Photo gallery Cricket photos Arshdeep Singh 3 Wickets Away From 1st India To Take 100 Wickets In T20Is
ಅರ್ಷದೀಪ್ ಸಿಂಗ್ ಮುಂದಿದೆ ಮೂರಲ್ಲಿ ನೂರು ವಿಕೆಟ್ ದಾಖಲೆ
Arshdeep Singh: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಟಿಮ್ ಸೌಥಿ ಹೆಸರಿನಲ್ಲಿದೆ. ಆದರೆ ನೂರು ವಿಕೆಟ್ ಸಾಧಕರ ಪಟ್ಟಿಯಲ್ಲಿ ಭಾರತದ ಯಾವುದೇ ಬೌಲರ್ ಇಲ್ಲ. ಇದೀಗ ಈ ವಿಶೇಷ ದಾಖಲೆಯ ಪಟ್ಟಿಗೆ ಎಂಟ್ರಿ ಕೊಡಲು ಅರ್ಷದೀಪ್ ಸಿಂಗ್ಗೆ ಕೇವಲ ಮೂರು ವಿಕೆಟ್ಗಳ ಅವಶ್ಯಕತೆಯಿದೆ.
Updated on: Jan 25, 2025 | 11:45 AM

ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅರ್ಷದೀಪ್ 3 ವಿಕೆಟ್ ಕಬಳಿಸಿದರೆ, ಹೊಸ ಇತಿಹಾಸ ನಿರ್ಮಾಣವಾಗುವುದು ಖಚಿತ. ಅದು ಕೂಡ 100 ವಿಕೆಟ್ಗಳೊಂದಿಗೆ..!

ಹೌದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ನೂರು ವಿಕೆಟ್ಗಳ ಸಾಧನೆ ಮಾಡಲು ಅರ್ಷದೀಪ್ ಸಿಂಗ್ಗೆ ಕೇವಲ 3 ವಿಕೆಟ್ಗಳ ಅಗತ್ಯತೆಯಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂರು ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಈ ದಾಖಲೆಯೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂರು ವಿಕೆಟ್ಗಳ ಸಾಧನೆ ಮಾಡಿದ ವಿಶ್ವದ 21ನೇ ಬೌಲರ್ ಎಂಬ ಹೆಗ್ಗಳಿಕೆಗೂ ಅರ್ಷದೀಪ್ ಸಿಂಗ್ ಪಾತ್ರರಾಗಲಿದ್ದಾರೆ. ಹೀಗಾಗಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತದ ಎಡಗೈ ವೇಗಿಯಿಂದ ಭರ್ಜರಿ ದಾಖಲೆ ನಿರೀಕ್ಷಿಸಬಹುದು.

ಸದ್ಯ ಅರ್ಷದೀಪ್ ಸಿಂಗ್ 61 ಟಿ20 ಪಂದ್ಯಗಳ ಮೂಲಕ 97 ವಿಕೆಟ್ ಕಬಳಿಸಿದ್ದಾರೆ. ವಿಶೇಷ ಎಂದರೆ ಅರ್ಷದೀಪ್ ಕೇವಲ 1737 ಎಸೆತಗಳ ಮೂಲಕ ಈ ಸಾಧನೆ ಮಾಡಿದ್ದಾರೆ. ಇದೀಗ 2 ಸಾವಿರಕ್ಕಿಂತ ಕಡಿಮೆ ಎಸೆತಗಳ ಮೂಲಕ 100 ವಿಕೆಟ್ ಕಬಳಿಸಿದ ದಾಖಲೆ ಬರೆಯಲು ಕೇವಲ 3 ವಿಕೆಟ್ಗಳ ಅವಶ್ಯಕತೆಯಿದೆ.

ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಟಿಮ್ ಸೌಥಿ ಹೆಸರಿನಲ್ಲಿದೆ. ನ್ಯೂಝಿಲೆಂಡ್ ಪರ 123 ಇನಿಂಗ್ಸ್ಗಳಲ್ಲಿ 2753 ಎಸೆತಗಳನ್ನು ಎಸೆದಿರುವ ಸೌಥಿ ಒಟ್ಟು 164 ವಿಕೆಟ್ ಕಬಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.



















