
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂರನೇ ದಿನದಾಟದಂದು ಇಂಗ್ಲೆಂಡ್, ತಂಡದಲ್ಲಿರದ ಆಟಗಾರನನ್ನು ಮೈದಾನಕ್ಕಿಳಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಅಂದರೆ 15 ಸದಸ್ಯರ ತಂಡದಲ್ಲಿ ಇರದ ಆಟಗಾರನನ್ನು ಫೀಲ್ಡಿಂಗ್ಗೆ ಇಳಿಸಿದ್ದರು.

ಹೀಗೆ ಇಂಗ್ಲೆಂಡ್ ಪರ ಫೀಲ್ಡಿಂಗ್ ಮಾಡಿದ ಆಟಗಾರನ ಹೆಸರು ನಾಥನ್ ಬಾರ್ನ್ವೆಲ್. ತಂಡದಲ್ಲಿರದ ಆಟಗಾರನನ್ನು ಕಣಕ್ಕಿಳಿಸಲು ಮುಖ್ಯ ಕಾರಣ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಹೊಸ ಪ್ರಯೋಗ. ಇಸಿಬಿ ರಾಷ್ಟ್ರೀಯ ಪ್ಲೇಯರ್ಸ್ ಜೊತೆ ಬೆರೆಯಲು, ಅವರಿಂದ ಕಲಿಯಲು ಯುವ ಆಟಗಾರರಿಗೆ ಅನುವು ಮಾಡಿಕೊಡುತ್ತಿದೆ. ಅದರ ಭಾಗವಾಗಿ ಆಯಾ ಹೋಮ್ ಗ್ರೌಂಡ್ನ ಕೌಂಟಿ ತಂಡದ ಯುವ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.

ಅದರಂತೆ ಸರ್ರೆ ಕೌಂಟಿ ತಂಡದ ಭಾಗವಾಗಿರುವ ನಾಥನ್ ಬಾರ್ನ್ವೆಲ್ ಅವರನ್ನು ಓವಲ್ ಟೆಸ್ಟ್ಗೆ 12ನೇ ಆಟಗಾರನಾಗಿ ಪರಿಗಣಿಸಲಾಗಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದ 5ನೇ ದಿನದಾಟದಂದು ನಾಥನ್ ಬಾರ್ನ್ವೆಲ್ ಅವರನ್ನು ಬದಲಿ ಫೀಲ್ಡರ್ ಆಗಿ ಕಣಕ್ಕಿಳಿಸಲಾಗಿತ್ತು.

ಇನ್ನು ನಾಥನ್ ಬಾರ್ನ್ವೆಲ್ ಬದಲಿಯಾಗಿ ಕಣಕ್ಕಿಳಿದದ್ದು ಕ್ರಿಸ್ ವೋಕ್ಸ್ ಸ್ಥಾನದಲ್ಲಿ. ಈ ಪಂದ್ಯದ 2ನೇ ದಿನದಾಟದ ವೇಳೆ ಫೀಲ್ಡಿಂಗ್ ಮಾಡುವಾಗ ವೋಕ್ಸ್ ಅವರ ಭುಜಕ್ಕೆ ಗಂಭೀರವಾದ ಗಾಯವಾಗಿದೆ. ಹೀಗಾಗಿ ಅವರು ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ 22 ವರ್ಷದ ನಾಥನ್ ಬಾರ್ನ್ವೆಲ್ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ನಾಥನ್ ಬಾರ್ನ್ವೆಲ್ ಈವರೆಗೆ 9 ಪಂದ್ಯಗಳನ್ನಾಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್ನಲ್ಲಿ 8 ಮ್ಯಾಚ್ಗಳಲ್ಲಿ ಕಣಕ್ಕಿಳಿದಿರುವ ಬಾರ್ನ್ವೆಲ್ 7 ಇನಿಂಗ್ಸ್ಗಳಿಂದ 2 ವಿಕೆಟ್ ಪಡೆದಿದ್ದಾರೆ. ಹಾಗೆಯೇ 88 ರನ್ ಕಲೆಹಾಕಿದ್ದಾರೆ. ಇನ್ನು ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಒಂದು ಪಂದ್ಯವಾಡಿರುವ ಅವರು 1 ವಿಕೆಟ್ ಹಾಗೂ 22 ರನ್ ಕಲೆಹಾಕಿದ್ದಾರೆ.