IND vs ENG: ಈ ವಿಚಾರದಲ್ಲಿ ಶುಭ್ಮನ್ ಗಿಲ್ಗೆ ಇದು ಚೊಚ್ಚಲ ಟೆಸ್ಟ್ ಶತಕ
Shubman Gill: ಗಿಲ್ ಮೊದಲೆರಡು ಶತಕಗಳನ್ನು ಆರಂಭಿಕರಾಗಿ ಕಣಕ್ಕಿಳಿದು ಸಿಡಿಸಿದ್ದರು. ಇದೀಗ ಟೀಂ ಇಂಡಿಯಾದಲ್ಲಿ ಮೂರನೇ ಕ್ರಮಾಂಕದ ಜವಬ್ದಾರಿ ಹೊತ್ತಿರುವ ಗಿಲ್ಗೆ ಇದು ಚೊಚ್ಚಲ ಟೆಸ್ಟ್ ಶತಕವಾಗಿದೆ. ಈ ಮೂಲಕ 2017 ರ ನಂತರ ಭಾರತದ ಆಟಗಾರನೊಬ್ಬ ಭಾರತದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.
1 / 7
ವಿಶಾಖಪಟ್ಟಣಂನ ವೈಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ಟೆಸ್ಟ್ ತಂಡದಿಂದ ಹೊರಬೀಳುವ ಆತಂಕದಲ್ಲಿದ್ದ ಗಿಲ್ಗೆ ಪುನರ್ಜನ್ಮ ಸಿಕ್ಕಂತ್ತಾಗಿದೆ.
2 / 7
ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಗಿಲ್, ತಮ್ಮ ಇನ್ನಿಂಗ್ಸ್ನಲ್ಲಿ 147 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 104 ರನ್ಗಳ ಇನ್ನಿಂಗ್ಸ್ ಆಡಿದರು.
3 / 7
ಬರೋಬ್ಬರಿ 11 ತಿಂಗಳ ನಂತರ ಟೆಸ್ಟ್ ಮಾದರಿಯಲ್ಲಿ ಶತಕದ ಇನ್ನಿಂಗ್ಸ್ ಆಡಿರುವ ಗಿಲ್, ಕಳೆದ 13 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಅರ್ಧಶತಕ ಇನ್ನಿಂಗ್ಸ್ ಆಡಿರಲಿಲ್ಲ. ಆದರೆ ಇದೀಗ ಗಿಲ್ ಈ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದ್ದಾರೆ.
4 / 7
ಇದು ಟೆಸ್ಟ್‌ನಲ್ಲಿ ಶುಭ್ಮನ್ ಗಿಲ್ ಅವರ ಮೂರನೇ ಶತಕವಾಗಿದ್ದು, ಇದಕ್ಕೂ ಮುನ್ನ 2023ರ ಮಾರ್ಚ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅದಕ್ಕೂ ಮೊದಲು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗಿಲ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ದರು.
5 / 7
ಆದರೆ ಗಿಲ್ ಮೊದಲೆರಡು ಶತಕಗಳನ್ನು ಆರಂಭಿಕರಾಗಿ ಕಣಕ್ಕಿಳಿದು ಸಿಡಿಸಿದ್ದರು. ಇದೀಗ ಟೀಂ ಇಂಡಿಯಾದಲ್ಲಿ ಮೂರನೇ ಕ್ರಮಾಂಕದ ಜವಬ್ದಾರಿ ಹೊತ್ತಿರುವ ಗಿಲ್ಗೆ ಇದು ಚೊಚ್ಚಲ ಟೆಸ್ಟ್ ಶತಕವಾಗಿದೆ. ಈ ಮೂಲಕ 2017 ರ ನಂತರ ಭಾರತದ ಆಟಗಾರನೊಬ್ಬ ಭಾರತದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.
6 / 7
ಶುಭ್ಮನ್ ಗಿಲ್ಗೂ ಮೊದಲು ಭಾರತ ಟೆಸ್ಟ್ ತಂಡದಲ್ಲಿ ಮೂರನೇ ಕ್ರಮಾಂಕದ ಜೀವಾಳವಾಗಿದ್ದ ಚೇತೇಶ್ಚರ್ ಪೂಜಾರ 2017 ರ ನವೆಂಬರ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಶತಕದ ಇನ್ನಿಂಗ್ಸ್ ಆಡಿ ದಾಖಲೆ ಬರೆದಿದ್ದರು.
7 / 7
ಪಂದ್ಯದ ವಿಚಾರಕ್ಕೆ ಬರುವುದಾದರೆ.. 255 ರನ್ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸಿರುವ ಭಾರತ ಇದರೊಂದಿಗೆ ಇಂಗ್ಲೆಂಡ್ಗೆ 399 ರನ್ಗಳ ಗೆಲುವಿನ ಗುರಿ ನೀಡಿದೆ. ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 67 ರನ್ ಕಲೆಹಾಕಿದೆ.