IND vs IRE: ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಇತಿಹಾಸ ಸೃಷ್ಟಿಸಲ್ಲಿದ್ದಾರೆ ಯಾರ್ಕರ್ ಕಿಂಗ್ ಬುಮ್ರಾ..!
Jasprit Bumrah: ಇಂಜುರಿಗೆ ತುತ್ತಾಗಿ ಬರೋಬ್ಬರಿ 11 ತಿಂಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದ ಬುಮ್ರಾ ಇದೀಗ ಐರ್ಲೆಂಡ್ ವಿರುದ್ಧ ಅಖಾಡಕ್ಕಿಳಿಯುತ್ತಿದ್ದು, ತಮ್ಮ ನಾಯಕತ್ವದ ಮೊದಲ ಸರಣಿಯಲ್ಲೇ ತಮ್ಮ ಹೆಸರನ್ನು ಇತಿಹಾಸದ ಪುಸ್ತಕಗಳಲ್ಲಿ ದಾಖಲಿಸಲಿದ್ದಾರೆ.
1 / 8
ಶುಕ್ರವಾರದಿಂದ ಅಂದರೆ, ಆಗಸ್ಟ್ 18 ರಿಂದ ಭಾರತ ಹಾಗೂ ಐರ್ಲೆಂಡ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಬುಮ್ರಾ ನಾಯಕತ್ವದಲ್ಲಿ ಭಾರತ ಯುವ ಪಡೆ ಈ ಸರಣಿಗಾಗಿ ಈಗಾಗಲೇ ಐರ್ಲೆಂಡ್ಗೆ ತೆರಳಿದೆ.
2 / 8
ಪ್ರಸ್ತುತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಉಪನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕ ಸಾಮಾನ್ಯ ಆಟಗಾರರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಅಲ್ಲದೆ ಅನೇಕ ಹಿರಿಯರು ಗೈರುಹಾಜರಾದ ಕಾರಣ, ಆಯ್ಕೆಗಾರರು ಬುಮ್ರಾಗೆ ನಾಯಕತ್ವವನ್ನ ಹಸ್ತಾಂತರಿಸಿದ್ದಾರೆ.
3 / 8
ಇಂಜುರಿಗೆ ತುತ್ತಾಗಿ ಬರೋಬ್ಬರಿ 11 ತಿಂಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದ ಬುಮ್ರಾ ಇದೀಗ ಐರ್ಲೆಂಡ್ ವಿರುದ್ಧ ಅಖಾಡಕ್ಕಿಳಿಯುತ್ತಿದ್ದು, ತಮ್ಮ ನಾಯಕತ್ವದ ಮೊದಲ ಸರಣಿಯಲ್ಲೇ ತಮ್ಮ ಹೆಸರನ್ನು ಇತಿಹಾಸದ ಪುಸ್ತಕಗಳಲ್ಲಿ ದಾಖಲಿಸಲಿದ್ದಾರೆ.
4 / 8
ವಾಸ್ತವವಾಗಿ ಭಾರತ ಇದುವರೆಗೆ ಟಿ20ಯಲ್ಲಿ 10 ನಾಯಕರನ್ನು ಕಂಡಿದೆ. ಇವರಲ್ಲಿ 9 ಮಂದಿ ಮುಂಚೂಣಿಯ ಬ್ಯಾಟರ್‌ಗಳಾಗಿದ್ದರೆ, ಪಾಂಡ್ಯ ಈ ಪಟ್ಟಿಯಲ್ಲಿರುವ ಏಕೈಕ ಆಲ್‌ರೌಂಡರ್ ಆಗಿದ್ದಾರೆ. ಇದೀಗ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲ್ಲಿರುವ ಬುಮ್ರಾ ಚುಟುಕು ಮಾದರಿಯಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ.
5 / 8
ಇನ್ನು ಟಿ20 ಮಾದರಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ನಾಯಕರನ್ನು ನೋಡುವುದಾದರೆ, ಈ ಮಾದರಿಯಲ್ಲಿ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದ ಶ್ರೇಯ ವೀರೇಂದ್ರ ಸೆಹ್ವಾಗ್ ಅವರಿಗೆ ಸಲ್ಲುತ್ತದೆ.
6 / 8
ಸೆಹ್ವಾಗ್ ಬಳಿಕ 2007 ಟಿ20 ವಿಶ್ವಕಪ್ಗೆ ತಂಡದ ನಾಯಕತ್ವವನ್ನು ಎಂಎಸ್ ಧೋನಿಗೆ ಹಸ್ತಾಂತರಿಸಲಾಯಿತು. ಅಂದಿನಿಂದ 2016 ರವರೆಗೆ ಧೋನಿ ಟಿ20 ತಂಡವನ್ನು ಮುನ್ನಡೆಸಿದರು. ಈ ನಡುವೆ ಸುರೇಶ್ ರೈನಾ ಮತ್ತು ಅಜಿಂಕ್ಯ ರಹಾನೆ ಕೂಡ ಕೆಲವು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
7 / 8
ಬಳಿಕ 2017 ರಲ್ಲಿ, ವಿರಾಟ್ ಕೊಹ್ಲಿ ಅವರನ್ನು ಭಾರತದ ಪೂರ್ಣ ಸಮಯದ ವೈಟ್-ಬಾಲ್ ನಾಯಕನಾಗಿ ಆಯ್ಕೆ ಮಾಡಲಾಯಿತು. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಕೂಡ ತಂಡವನ್ನು ಮುನ್ನಡೆಸಿದ್ದರು. 2022ರಲ್ಲಿ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಕೂಡ ಟೀಂ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಪಡೆದಿದ್ದರು.
8 / 8
ಈ ವಾರದ ಕೊನೆಯಲ್ಲಿ ಬುಮ್ರಾ ಭಾರತದ 11 ನೇ ಟಿ20 ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. 2022 ರಲ್ಲಿ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿದ್ದ ಬುಮ್ರಾ, ಕಪಿಲ್ ದೇವ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಮೊದಲ ವೇಗಿ ಎನಿಸಿಕೊಂಡಿದ್ದರು.