ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!

ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 15, 2023 | 8:36 PM

ಏಕದಿನ ವಿಶ್ವಕಪ್​ಗೆ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಶುರುವಾಗಲಿರುವ ಕ್ರಿಕೆಟ್ ಮಹಾಸಮರಕ್ಕಾಗಿ ಶೀಘ್ರದಲ್ಲೇ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗುತ್ತದೆ. ಆದರೆ ಈ ಬಾರಿ ತಂಡದಲ್ಲಿ 7 ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.

1 / 9
ಅಂದರೆ 2019 ರ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ 7 ಆಟಗಾರರು ಈ ಬಾರಿ ಸ್ಥಾನ ಪಡೆಯುವುದಿಲ್ಲ. ಇವರಲ್ಲಿ ಓರ್ವ ಆಟಗಾರ ನಿವೃತ್ತಿ ಘೋಷಿಸಿದರೆ, 6 ಆಟಗಾರರು ರೇಸ್​ನಿಂದ ಹೊರಬಿದ್ದಿದ್ದಾರೆ. ಹಾಗಿದ್ರೆ 2019 ರಲ್ಲಿ ಕಣಕ್ಕಿಳಿದು ಈ ಬಾರಿ ಅವಕಾಶ ವಂಚಿತರಾಗಲಿರುವ 7 ಆಟಗಾರರು ಯಾರೆಲ್ಲಾ ಎಂದು ನೋಡೋಣ...

2 / 9
1- ಮಹೇಂದ್ರ ಸಿಂಗ್ ಧೋನಿ: 2019 ರಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಕಾಣಿಸಿಕೊಂಡಿದ್ದ ಧೋನಿ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಅವರು ಈ ಬಾರಿಯ ಏಕದಿನ ವಿಶ್ವಕಪ್​ ತಂಡದಲ್ಲಿ ಇರುವುದಿಲ್ಲ.

3 / 9
2- ಶಿಖರ್ ಧವನ್: ಕಳೆದ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ 2 ಪಂದ್ಯಗಳನ್ನಾಡಿದ್ದ ಧವನ್ ಒಟ್ಟು 125 ರನ್ ಬಾರಿಸಿದ್ದರು. ಆದರೆ ಗಾಯದ ಕಾರಣ ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ಇನ್ನು ಈ ಬಾರಿ 37 ವರ್ಷದ ಧವನ್ ಅವರನ್ನು ಆಯ್ಕೆಗೆ ಪರಿಗಣಿಸುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.

4 / 9
3- ವಿಜಯ್ ಶಂಕರ್: 2019ರ ಏಕದಿನ ವಿಶ್ವಕಪ್​ ತಂಡಕ್ಕೆ ಅಚ್ಚರಿಯ ಆಯ್ಕೆಯಾಗಿದ್ದ ವಿಜಯ್ ಶಂಕರ್​ 3 ಇನಿಂಗ್ಸ್​ಗಳಲ್ಲಿ ಕೇವಲ 58 ರನ್​ ಕಲೆಹಾಕಿದ್ದರು. ಇದಾದ ಬಳಿಕ ತಂಡದಿಂದ ಹೊರಬಿದ್ದ ಶಂಕರ್​ಗೆ ಈಗಾಗಲೇ ಟೀಮ್ ಇಂಡಿಯಾ ಬಾಗಿಲು ಬಂದ್ ಆಗಿದೆ.

5 / 9
4- ಕೇದರ್ ಜಾಧವ್: 2019 ರ ಏಕದಿನ ವಿಶ್ವಕಪ್​ನ ಮತ್ತೊಂದು ಅಚ್ಚರಿಯ ಆಯ್ಕೆ ಎಂದರೆ ಕೇದರ್ ಜಾಧವ್. 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜಾಧವ್ ಕಲೆಹಾಕಿದ್ದು ಕೇವಲ 80 ರನ್ ಮಾತ್ರ. ಅಲ್ಲದೆ ಆ ವಿಶ್ವಕಪ್​ ಬಳಿಕ ಜಾಧವ್ ಅವರನ್ನು ಕೂಡ ಟೀಮ್ ಇಂಡಿಯಾದಿಂದ ಕೈ ಬಿಡಲಾಗಿದೆ.

6 / 9
5- ಭುವನೇಶ್ವರ್ ಕುಮಾರ್: ಕಳೆದ ಬಾರಿಯ ಏಕದಿನ ವಿಶ್ವಕಪ್​ನಲ್ಲಿ 6 ಪಂದ್ಯಗಳನ್ನಾಡಿದ್ದ ವೇಗಿ ಭುವನೇಶ್ವರ್ ಕುಮಾರ್ 10 ವಿಕೆಟ್ ಪಡೆದಿದ್ದರು. ಆದರೆ ಪ್ರಸ್ತುತ ಏಕದಿನ ತಂಡದಲ್ಲಿ ಅವರಿಗೆ ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ 2023 ರ ಏಕದಿನ ವಿಶ್ವಕಪ್ ತಂಡದಲ್ಲಿ ಭುವಿಗೂ ಚಾನ್ಸ್ ಸಿಗುವುದಿಲ್ಲ ಎನ್ನಬಹುದು.

7 / 9
6- ರಿಷಭ್ ಪಂತ್: 2019 ರ ಏಕದಿನ ವಿಶ್ವಕಪ್​ನಲ್ಲಿ 4 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ಪಂತ್ ಒಟ್ಟು 116 ರನ್ ಕಲೆಹಾಕಿದ್ದರು. 2022 ರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್ ಇನ್ನೂ ಕೂಡ ಚೇತರಿಸಿಕೊಳ್ಳದ ಕಾರಣ ಈ ಬಾರಿ ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ.

8 / 9
7- ದಿನೇಶ್ ಕಾರ್ತಿಕ್: 2019 ರ ಏಕದಿನ ವಿಶ್ವಕಪ್​ನಲ್ಲಿ 2 ಇನಿಂಗ್ಸ್ ಆಡಿದ್ದ ದಿನೇಶ್ ಕಾರ್ತಿಕ್ ಕಲೆಹಾಕಿದ್ದು ಕೇವಲ 14 ರನ್ ಮಾತ್ರ. ಇದಾದ ಬಳಿಕ ತಂಡದಿಂದ ಹೊರಬಿದ್ದಿದ್ದ ಡಿಕೆ ಆ ಬಳಿಕ ಟಿ20 ವಿಶ್ವಕಪ್ ಟೀಮ್​ನಲ್ಲಿ ಸ್ಥಾನ ಪಡೆದಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ಈ ಬಾರಿ ದಿನೇಶ್ ಕಾರ್ತಿಕ್​ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗುವುದಿಲ್ಲ ಎನ್ನಬಹುದು.

9 / 9
Follow us
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ