IND vs IRE: ದ್ರಾವಿಡ್​ಗೆ ವಿಶ್ರಾಂತಿ; ಐರ್ಲೆಂಡ್ ಪ್ರವಾಸಕ್ಕೆ ಹಂಗಾಮಿ ಮುಖ್ಯ ಕೋಚ್ ಆಯ್ಕೆ

Updated on: Jul 17, 2023 | 9:12 AM

IND vs IRE T20 Series: ಭಾರತ ಮತ್ತು ಐರ್ಲೆಂಡ್ ನಡುವಿನ ಎಲ್ಲಾ ಮೂರು ಟಿ20 ಪಂದ್ಯಗಳು ಡಬ್ಲಿನ್‌ನಲ್ಲಿ ಆಗಸ್ಟ್ 18, 20 ಮತ್ತು 23 ರಂದು ಐರ್ಲೆಂಡ್‌ನಲ್ಲಿ ನಡೆಯಲಿವೆ.

1 / 7
ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ, ಕೆರಿಬಿಯನ್ನರ ವಿರುದ್ಧ ಮೂರು ಮಾದರಿಯ ಕ್ರಿಕೆಟ್​ನ ಸರಣಿಯನ್ನು ಆಡುತ್ತಿದೆ. ಇದರಲ್ಲಿ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿಯೂ ಸೇರಿದೆ.

ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ, ಕೆರಿಬಿಯನ್ನರ ವಿರುದ್ಧ ಮೂರು ಮಾದರಿಯ ಕ್ರಿಕೆಟ್​ನ ಸರಣಿಯನ್ನು ಆಡುತ್ತಿದೆ. ಇದರಲ್ಲಿ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿಯೂ ಸೇರಿದೆ.

2 / 7

ಟಿ20 ಸರಣಿಯೊಂದಿಗೆ ವಿಂಡೀಸ್ ಪ್ರವಾಸ ಮುಗಿಸಲಿರುವ ಟೀಂ ಇಂಡಿಯಾ ಆ ಬಳಿಕ ಐರ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಅವರು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

3 / 7

IND vs IRE 3rd T20I

4 / 7

ಆಯ್ಕೆದಾರರು ಐರ್ಲೆಂಡ್ ಸರಣಿಗೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಪ್ರವಾಸದಲ್ಲಿ ಎರಡನೇ ಶ್ರೇಣಿಯ ಟೀಂ ಇಂಡಿಯಾವನ್ನು ಮುನ್ನಡೆಸುತ್ತಾರೆ ಎಂದು ವರದಿಯಾಗಿದೆ. ಇವರೊಂದಿಗೆ ತಂಡದ ಮುಖ್ಯ ಕೋಚ್ ಸೇರಿದಂತೆ ಸಹಾಯಕ ಸಿಬ್ಬಂದಿಗಳು ಬದಲಾಗಲಿದ್ದಾರೆ ಎಂದು ವರದಿಯಾಗಿದೆ.

5 / 7

ಕ್ರಿಕ್‌ಬಝ್‌ ವರದಿಯ ಪ್ರಕಾರ, ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ ತಂಡವು ಐರ್ಲೆಂಡ್‌ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿರುವುದಿಲ್ಲ ಎಂದು ವರದಿ ಮಾಡಿದೆ.

6 / 7

ಹೀಗಾಗಿ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರು ವಿವಿಎಸ್ ಲಕ್ಷ್ಮಣ್ ಅವರು ರಾಹುಲ್ ದ್ರಾವಿಡ್ ಬದಲಿಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

7 / 7

ಹಾಗೆಯೇ ಸಿತಾಂಶು ಕೊಟಕ್, ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್ ಕೋಚ್‌ಗಳು), ಟ್ರಾಯ್ ಕೂಲಿ ಮತ್ತು ಸಾಯಿರಾಜ್ ಬಹುತುಲೆ (ಬೌಲಿಂಗ್ ಕೋಚ್‌ಗಳು) ಐರ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡದ ಹಂಗಾಮಿ ತರಬೇತುದಾರಾಗುವ ಸಾಧ್ಯತೆಗಳಿವೆ.

Loading...
Unable to load recommendations.
Follow Us