- Kannada News Photo gallery Cricket photos IND vs WI Virat Kohli To Join Elite List Set To Play His 500th International Match against west indies
Virat Kohli: 500ನೇ ಅಂತಾರಾಷ್ಟ್ರೀಯ ಪಂದ್ಯ; ಕಿಂಗ್ ಕೊಹ್ಲಿ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ..!
IND vs WI 2nd Test: ವಾಸ್ತವವಾಗಿ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯ ಕಿಂಗ್ ಕೊಹ್ಲಿ ವೃತ್ತಿ ಬದುಕಿನ 500 ನೇ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.
Updated on: Jul 17, 2023 | 8:06 AM

ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾ, ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 141 ರನ್ಗಳ ಗೆಲುವು ಸಾಧಿಸಿದೆ. ಇದೀಗ ಎರಡನೇ ಟೆಸ್ಟ್ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ತವಕದಲ್ಲಿ ರೋಹಿತ್ ಪಡೆ ಇದೆ.

ಇದೀಗ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಜುಲೈ 20 ರಂದು ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಆರಂಭವಾಗಲಿದೆ. ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಕಿಂಗ್ ಕೊಹ್ಲಿ ಹೊಸ ದಾಖಲೆಯೊಂದನ್ನು ಬರೆಯುವ ಹೊಸ್ತಿಲಿನಲ್ಲಿದ್ದಾರೆ.

ವಾಸ್ತವವಾಗಿ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯ ಕಿಂಗ್ ಕೊಹ್ಲಿ ವೃತ್ತಿ ಬದುಕಿನ 500 ನೇ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ. ಇದರೊಂದಿಗೆ 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಕೆಲವೇ ಕೆಲವು ಆಟಗಾರರಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರಾಗಲಿದ್ದಾರೆ.

ಮೂರು ಮಾದರಿಯ ಕ್ರಿಕೆಟ್ನಲ್ಲೂ ಕಣಕ್ಕಿಳಿದಿರುವ ಕೊಹ್ಲಿ ಇದುವರೆಗೆ 110 ಟೆಸ್ಟ್, 274 ಏಕದಿನ ಹಾಗೂ 115 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಕಣಕ್ಕಿಳಿಯುತ್ತಿದ್ದಂತೆ 500 ಪಂದ್ಯಗಳನ್ನಾಡಿದ ಸಾಧನೆ ಬರೆಯಲ್ಲಿರುವ ಕೊಹ್ಲಿ, ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆಯಲ್ಲಿದ್ದಾರೆ.

ಹಾಗೆಯೇ ಟೀಂ ಇಂಡಿಯಾ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ 4ನೇ ಆಟಗಾರ ಎಂಬ ಖ್ಯಾತಿಗೂ ಕೊಹ್ಲಿ ಭಾಜನರಾಗಲಿದ್ದಾರೆ. ಇನ್ನು ಕೊಹ್ಲಿಗೂ ಮುನ್ನ ಈ ಸಾಧನೆ ಮಾಡಿದ ಭಾರತದ ಉಳಿದ ಮೂವರು ಬ್ಯಾಟರ್ಗಳು ಯಾರು ಎಂಬುದನ್ನು ನೋಡುವುದಾದರೆ.

ಸಚಿನ್ ತೆಂಡೂಲ್ಕರ್ 664 ಪಂದ್ಯ

ಎಂಎಸ್ ಧೋನಿ 538 ಪಂದ್ಯ

ರಾಹುಲ್ ದ್ರಾವಿಡ್ 509 ಪಂದ್ಯ



















