Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ 2nd T20I: ಲಕ್ನೋಕ್ಕೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು: ಎಕಾನ ಪಿಚ್ ಹೇಗಿದೆ?, ಯಾರಿಗೆ ಸಹಕಾರಿ?

India vs New Zealand 2nd T20I: ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯ ಇಂದು ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಶನಿವಾರ ಟೀಮ್ ಇಂಡಿಯಾ ಆಟಗಾರರು ಲಕ್ನೋಕ್ಕೆ ಬಂದಿಳಿದರು. ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗಿರುವ ಕಾರಣ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.

Vinay Bhat
|

Updated on:Jan 29, 2023 | 10:52 AM

ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯ ಇಂದು ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಶನಿವಾರ ಟೀಮ್ ಇಂಡಿಯಾ ಆಟಗಾರರು ಲಕ್ನೋಕ್ಕೆ ಬಂದಿಳಿದರು. ಟೀಮ್ ಇಂಡಿಯಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗಿರುವ ಕಾರಣ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.

1 / 8
ಮೊದಲ ಟಿ20 ಯಲ್ಲಿ ಭಾರತದ ಸ್ಪಿನ್ನರ್​ಗಳು ಬಿಟ್ಟರೆ ವೇಗಿಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಓಪನರ್​ಗಳು, ನಾಯಕ ಸೇರಿದಂತೆ ಸ್ಟಾರ್ ಬ್ಯಾಟರ್​ಗಳು ಮಿಂಚಲಿಲ್ಲ. 0-1 ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ.

2 / 8
ದ್ವಿತೀಯ ಟಿ20 ಪಂದ್ಯ ನಡೆಯಲಿರುವ ಬಿಆರ್‌ಎಸ್ಎಬಿವಿ ಎಕಾನ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ವಿಶೇಷವಾಗಿ ಇದು ಕಪ್ಪು ಮಣ್ಣು ಹಾಗೂ ಕೆಂಪು ಮಣ್ಣು ಎರಡರ ಪಿಚ್ಚನ್ನು ಕೂಡ ಹೊಂದಿದೆ. ಇಲ್ಲಿ ಆಡಿರುವ ಎಲ್ಲಾ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೂಡ ಮೊದಲು ಬ್ಯಾಟಿಂಗ್ ನಡೆಸಿರುವ ತಂಡಗಳು ಗೆಲುವು ಸಾಧಿಸಿದೆ. ವೇಗಿಗಳು ಹೆಚ್ಚಿನ ವಿಕೆಟ್ ಪಡೆದುಕೊಂಡಿದ್ದಾರೆ.

3 / 8
ಇಂದಿನ ಭಾರತ ನ್ಯೂಜಿಲೆಂಡ್ ದ್ವಿತೀಯ ಟಿ20 ಪಂದ್ಯಕ್ಕೆ ವರುಣನ ಕಾಟ ಇಲ್ಲ. ಹವಾಮಾನ ವರದಿ ಹೇಳುವ ಪ್ರಕಾರ, ಭಾನುವಾರ ಅತ್ಯಂತ ತಂಪಾದ ವಾತಾವರಣದಿಂದ ಕೂಡಿರಲಿದೆ. ಪಂದ್ಯ ನಡೆಯುವ ದಿನ ಇಲ್ಲಿ ಮಳೆ ಬರುವ ಮುನ್ಸೂಚನೆಯಿಲ್ಲ ಎಂದು ಹೇಳಲಾಗಿದೆ.

4 / 8
ಇಂದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬಹುದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ. 23 ವರ್ಷದ ಮುಂಬೈ ಬ್ಯಾಟರ್ ಪೃಥ್ವಿ ಶಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಶುಭ್​ಮನ್ ಗಿಲ್ ಅಥವಾ ರಾಹುಲ್ ತ್ರಿಪಾಠಿ ಇವರಿಗೆ ಜಾಗ ಬಿಟ್ಟು ಕೊಡಬೇಕಿದೆ.

5 / 8
ಮೊದಲ ಟಿ20ಯಲ್ಲಿ 4 ಓವರ್​ಗೆ ಬರೋಬ್ಬರಿ 51 ರನ್ ನೀಡಿ ಬೌಲಿಂಗ್ ಸಾಕಷ್ಟು ದುಬಾರಿ ಆಗಿದ್ದ ಅರ್ಶ್​ದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್​ನಿಂದ ಸ್ಥಾನ ಕಳೆದುಕೊಳ್ಳಬಹುದು. ಇವರ ಜಾಗಕ್ಕೆ ಹೊಸ ಮುಖ ಮುಖೇಶ್ ಕುಮಾರ್​ಗೆ ಮಣೆ ಹಾಕಬಹುದು.

6 / 8
ಭಾರತ ಹಾಗೂ ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯವು ಸಂಜೆ 07:00 ಗಂಟೆಗೆ ಪ್ರಾರಂಭವಾಗುತ್ತದೆ. 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಬಹುತೇಕ ಚಾನೆಲ್‌ಗಳಲ್ಲಿ ಭಾರತ-ನ್ಯೂಜಿಲೆಂಡ್ ದ್ವಿತೀಯ ಟಿ20 ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

7 / 8
ಭಾರತ ಸಂಭಾವ್ಯ ಪ್ಲೇಯಿಂಗ್ XI: ಶುಭ್​ಮನ್ ಗಿಲ್, ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ) ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

8 / 8

Published On - 10:52 am, Sun, 29 January 23

Follow us
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ

ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ

ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ

ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ

ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ

ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ

ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್

ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!

ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಸರ್ಕಾರದ ಬಳಿ ಹಣ ಇಲ್ಲ: ಜೋಶಿ