IND vs NZ: ಕೇವಲ 3 ರನ್ಗಳಿಗೆ 6 ವಿಕೆಟ್..! ಅರ್ಷದೀಪ್- ಸಿರಾಜ್ ಮಾರಕ ದಾಳಿಗೆ ಕಿವೀಸ್ ತತ್ತರ
TV9 Web | Updated By: ಪೃಥ್ವಿಶಂಕರ
Updated on:
Nov 22, 2022 | 3:11 PM
IND vs NZ: 146 ರನ್ಗಳಿಗೆ 4 ನೇ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ 149 ರನ್ ಆಗುವುದರೊಳಗೆ ತನ್ನ 9ನೇ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಬಿಗ್ ಟಾರ್ಗೆಟ್ ಸೆಟ್ ಮಾಡುವ ಸೂಚನೆ ನೀಡಿದ್ದ ಕಿವೀಸ್ ಅಂತಿಮವಾಗಿ 160 ರನ್ಗಳಿಗೆ ಆಲೌಟ್ ಆಯಿತು.
1 / 5
ನೇಪಿಯರ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಅವರಿಂದ ವಿಶೇಷ ಪ್ರದರ್ಶನ ಕಂಡುಬಂದಿದೆ. ಈ ವೇಗದ ಬೌಲರ್ಗಳು ಮೂರನೇ ಟಿ20ಯಲ್ಲಿ ತಲಾ 4 ವಿಕೆಟ್ ಪಡೆದು ಮಿಂಚಿದ್ದಾರೆ.
2 / 5
ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿ ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ಪ್ರಮುಖ ವಿಕೆಟ್ಗಳನ್ನು ಪಡೆದರು. ಸಿರಾಜ್ ಮಾರಕ ದಾಳಿಯಿಂದಾಗಿ ಕಿವೀಸ್ ತಂಡಕ್ಕೆ ದೊಡ್ಡ ಸ್ಕೋರ್ ತಲುಪಲು ಸಾಧ್ಯವಾಗಲಿಲ್ಲ.
3 / 5
ಇನ್ನು ಅರ್ಷದೀಪ್ ಸಿಂಗ್ ಅಲೆನ್, ಕಾನ್ವೇ, ಮಿಚೆಲ್, ಸೋದಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ತಮ್ಮ 4 ಓವರ್ ಕೋಟಾದಲ್ಲಿ ಅರ್ಷದೀಪ್ 37 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ ಉರುಳಿಸಿದರು.
4 / 5
ಮೊಹಮ್ಮದ್ ಸಿರಾಜ್ ಕೇವಲ 8 ಎಸೆತಗಳಲ್ಲಿ 3 ವಿಕೆಟ್ ಪಡೆದರು. 16ನೇ ಓವರ್‌ನ ಐದನೇ ಎಸೆತದಲ್ಲಿ ಕ್ರೀಸ್‌ನಲ್ಲಿದ್ದ ಸೆಟ್ ಬ್ಯಾಟ್ಸ್‌ಮನ್ ಫಿಲಿಪ್ಸ್ ಅವರ ಪ್ರಮುಖ ವಿಕೆಟ್ ಅನ್ನು ಸಿರಾಜ್ ಪಡೆದರು. ಇದರ ನಂತರ, ಅವರು ತಮ್ಮ ಕೊನೆಯ ಓವರ್‌ನಲ್ಲಿ ಜೇಮ್ಸ್ ನೀಶಮ್ ಮತ್ತು ಸ್ಯಾಂಟ್ನರ್ ಅವರ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
5 / 5
146 ರನ್ಗಳಿಗೆ 4 ನೇ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ 149 ರನ್ ಆಗುವುದರೊಳಗೆ ತನ್ನ 6ನೇ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಬಿಗ್ ಟಾರ್ಗೆಟ್ ಸೆಟ್ ಮಾಡುವ ಸೂಚನೆ ನೀಡಿದ್ದ ಕಿವೀಸ್ ಅಂತಿಮವಾಗಿ 160 ರನ್ಗಳಿಗೆ ಆಲೌಟ್ ಆಯಿತು.