ಕಿಂಗ್ ಕೊಹ್ಲಿಯ 12 ವರ್ಷದ ಹಿಂದಿನ ದಾಖಲೆಯನ್ನು ಸರಿಗಟ್ಟಿದ ಕೆಎಲ್ ರಾಹುಲ್..!

|

Updated on: Sep 11, 2023 | 10:32 AM

KL Rahul: ಏಷ್ಯಾಕಪ್ ಟೂರ್ನಿಯ ಸೂಪರ್ 4 ಸುತ್ತಿನ ಭಾಗವಾಗಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೆಎಲ್ ರಾಹುಲ್ ಅಪರೂಪದ ಮೈಲುಗಲ್ಲು ತಲುಪಿದ್ದಾರೆ. ಇಂಜುರಿಯಿಂದ ಚೇತರಿಸಿಕೊಂಡು ಕಣಕ್ಕಿಳಿದ ರಾಹುಲ್, ಕಿಂಗ್​ ಕೊಹ್ಲಿಯ 12 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ.

1 / 8
ಏಷ್ಯಾಕಪ್ ಟೂರ್ನಿಯ ಸೂಪರ್ 4 ಸುತ್ತಿನ ಭಾಗವಾಗಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೆಎಲ್ ರಾಹುಲ್ ಅಪರೂಪದ ಮೈಲುಗಲ್ಲು ತಲುಪಿದ್ದಾರೆ. ಇಂಜುರಿಯಿಂದ ಚೇತರಿಸಿಕೊಂಡು ಕಣಕ್ಕಿಳಿದ ರಾಹುಲ್, ಕಿಂಗ್​ ಕೊಹ್ಲಿಯ 12 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ.

2 / 8
ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಗಿಲ್ ವಿಕೆಟ್​ ಬಳಿಕ ರಾಹುಲ್ ಅಜೇಯ 17 ರನ್​ಗಳಿಸುವ ಮೂಲಕ ಟೀಂ ಇಂಡಿಯಾ ಪರ ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ 2000 ರನ್ ಪೂರೈಸಿದ ಮೂರನೇ ಆಟಗಾರನೆನಿಸಿಕೊಂಡಿದ್ದಾರೆ.

3 / 8
ಇನ್ನು ರಾಹುಲ್ ಈ ಮೈಲಿಗಲ್ಲನ್ನು ಸ್ಥಾಪಿಸಲು 53 ಏಕದಿನ ಇನ್ನಿಂಗ್ಸ್​ಗಳನ್ನು ತೆಗೆದುಕೊಂಡಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ 12 ವರ್ಷಗಳ ಹಿಂದೆ ಇಷ್ಟೇ ಸಂಖ್ಯೆಯ ಇನ್ನಿಂಗ್ಸ್​ಗಳಲ್ಲಿ ಈ  ಸಾಧನೆ ಮಾಡಿದರು.

4 / 8
ಅತಿ ಕಡಿಮೆ ಏಕದಿನ ಇನ್ನಿಂಗ್ಸ್​ಗಳಲ್ಲಿ 2000 ರನ್ ಪೂರೈಸಿದ ಭಾರತೀಯರ ಪೈಕಿ ಮಾಜಿ ಆರಂಭಿಕ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ. ಧವನ್ ಕೇವಲ 48 ಇನ್ನಿಂಗ್ಸ್​ಗಳಲ್ಲಿ ಈ ದಾಖಲೆ ನಿಮ್ಮಿಸಿದ್ದರು.

5 / 8
ಎರಡನೇ ಸ್ಥಾನದಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರರಾದ ನವಜೋತ್ ಸಿಧು ಮತ್ತು ಸೌರವ್ ಗಂಗೂಲಿ ಇದ್ದು, ಈ ಇಬ್ಬರು 52 ಏಕದಿನ ಇನ್ನಿಂಗ್ಸ್​ಗಳಲ್ಲಿ 2000 ರನ್ ಪೂರೈಸಿದ್ದರು.

6 / 8
ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಲಾಗಿದ್ದು, ಈ ಪಂದ್ಯವನ್ನು ಮೀಸಲು ದಿನದಂದು ಅಂದರೆ ಇಂದು ಪೂರ್ಣಗೊಳಿಸಲಾಗುತ್ತದೆ. ಪ್ರಸ್ತುತ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, 2 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿದೆ.

7 / 8
ತಂಡದ ಪರ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅರ್ಧಶತಕ ಸಿಡಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ರೋಹಿತ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 56 ರನ್ ಸಿಡಿಸಿದರೆ, ಗಿಲ್ 52 ಎಸೆತಗಳಲ್ಲಿ 10 ಬೌಂಡರಿ ಸಹಿತ 58 ರನ್ ಬಾರಿಸಿದರು.

8 / 8
ಇನ್ನು ಮೀಸಲು ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 17 ಮತ್ತು 8 ರನ್ ಬಾರಿಸಿದ್ದಾರೆ. ಪಾಕ್ ಬೌಲರ್‌ಗಳ ಪೈಕಿ ಶಾಹೀನ್ ಅಫ್ರಿದಿ ಮತ್ತು ಶಾದಾಬ್ ಖಾನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ