- Kannada News Photo gallery Cricket photos India vs Pakistan Asia Cup 2023 Super 4 reserve day Match will begin at 3pm IST
Asia Cup 2023: ಭಾರತ-ಪಾಕಿಸ್ತಾನ ಮೀಸಲು ದಿನದಾಟ ಇಂದು ಎಷ್ಟು ಗಂಟೆಗೆ ಆರಂಭ?
India vs Pakistan Reserve Day Match Timings: ಏಷ್ಯಾಕಪ್ 2023 ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಮೀಸಲು ದಿನದಾಟದ ಪಂದ್ಯ ನಿನ್ನೆ ಎಷ್ಟು ಓವರ್ಗೆ ನಿಲ್ಲಿಸಲಾಗಿತ್ತೊ ಅಲ್ಲಿಂದಲೇ ಮುಂದುವರೆಯಲಿದೆ. ಅಂದರೆ ಭಾರತ 24.1 ಓವರ್ಗಳಿಂದ ಬ್ಯಾಟಿಂಗ್ ಮುಂದುವರೆಸಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಎಷ್ಟು ಗಂಟೆಗೆ ಶುರುವಾಗಲಿದೆ?.
Updated on: Sep 11, 2023 | 7:23 AM

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ಏಷ್ಯಾಕಪ್ 2023 ರಲ್ಲಿ ಆಯೋಜಿಸಿದ್ದ ಸೂಪರ್-4 ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಮಳೆಯಿಂದಾಗಿ ಪೂರ್ಣಗೊಳ್ಳಲಿಲ್ಲ. ಹೀಗಾಗಿ ಇಂದು (ಸೆ. 11) ಮೀಸಲು ದಿನದಾಟ ನಡೆಯಲಿದೆ. ಹಾಗಾದರೆ, ಇಂದು ಇಂಡೋ-ಪಾಕ್ ಮೀಸಲು ದಿನದಾಟ ಎಷ್ಟು ಗಂಟೆಗೆ ಆರಂಭವಾಗಲಿದೆ ನೋಡೋಣ.

ಭಾರತ ಹಾಗೂ ಪಾಕಿಸ್ತಾನ ನಡುವಣ ಮೀಸಲು ದಿನದಾಟದ ಪಂದ್ಯ ನಿನ್ನೆ ಎಷ್ಟು ಓವರ್ಗೆ ನಿಲ್ಲಿಸಲಾಗಿತ್ತೊ ಅಲ್ಲಿಂದಲೇ ಮುಂದುವರೆಯಲಿದೆ. ಅಂದರೆ ಭಾರತ 24.1 ಓವರ್ಗಳಿಂದ ಬ್ಯಾಟಿಂಗ್ ಮುಂದುವರೆಸಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ.

ಇದು ಮೀಸಲು ದಿನದ ಪಂದ್ಯ ಆಗಿರುವುದರಿಂದ ಭಾನುವಾರದ ಪಂದ್ಯದ ರೀತಿಯಲ್ಲೇ ಸಾಗಲಿದೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ನಲ್ಲಿ, ಬೌಲಿಂಗ್ನಲ್ಲಿ, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವಂತಿಲ್ಲ. ಭಾರತ ಪರ ಕೊಹ್ಲಿ ಹಾಗೂ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಎರಡೂ ಇನ್ನಿಂಗ್ಸ್ಗಳಲ್ಲಿ ಕನಿಷ್ಠ 20 ಓವರ್ಗಳನ್ನು ಬೌಲ್ ಮಾಡಬೇಕಾಗುತ್ತದೆ.

ಭಾನುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಶುರುಮಾಡಿದ ಭಾರತಕ್ಕೆ ಓಪನರ್ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸ್ಫೋಟಕ ಆರಂಭ ಒದಗಿಸಿದರು. ರೋಹಿತ್-ಗಿಲ್ ಪಾಕ್ ಬೌಲರ್ಗಳ ಬೆವರಿಳಿಸಿ ಭರ್ಜರಿಯಾಗಿ ಬ್ಯಾಟ್ ಬೀಸಿದರು.

ಗಿಲ್ ಬ್ಯಾಟ್ನಿಂದ 37 ಎಸೆತಗಳಲ್ಲಿ ಅರ್ಧಶತಕ ಮೂಡಿಬಂದರೆ, ರೋಹಿತ್ ಶರ್ಮಾ 42 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಅಲ್ಲದೆ 16.3 ಓವರ್ಗಳಲ್ಲಿ 121 ರನ್ಗಳ ಜೊತೆಯಾಟವಾಡಿದರು. ರೋಹಿತ್ ಶರ್ಮಾ 49 ಎಸೆತಗಳಲ್ಲಿ (4 ಸಿಕ್ಸ್, 6 ಫೋರ್) 56 ರನ್ ಮತ್ತು ಗಿಲ್ 52 ಎಸೆತಗಳಲ್ಲಿ (10 ಫೋರ್) 58 ರನ್ ಬಾರಿಸಿ ಔಟಾದರು.

ಮೂರನೇ ವಿಕೆಟ್ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಂಡದ ಮೊತ್ತಕ್ಕೆ 24 ರನ್ ಸೇರಿಸಿದರು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆಗ ಟೀಮ್ ಇಂಡಿಯಾ 24.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತ್ತು. ಎಷ್ಟುಹೊತ್ತು ಕಾದರೂ ಮಳೆ ನಿಲ್ಲದ ಕಾರಣ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

ಪಾಕಿಸ್ತಾನ ಪ್ಲೇಯಿಂಗ್ XI: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಆಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.









