2 ಸಾವಿರಕ್ಕೆ ಖರೀದಿಸಿ 22 ಸಾವಿರಕ್ಕೆ ಮಾರಾಟ..! ಗಗನಕ್ಕೇರಿದ ಭಾರತ- ಪಾಕ್ ಪಂದ್ಯದ ಟಿಕೆಟ್ ಬೆಲೆ

|

Updated on: Oct 13, 2023 | 7:57 AM

IND vs PAK Tickets Resale Price: ಈ ಉಭಯ ತಂಡಗಳ ಕಾಳಗವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಅಭಿಮಾನಿಗಳಿಗೆ ಟಿಕೆಟ್‌ ಖರೀದಿಸುವುದು ಕಷ್ಟಕರವಾಗಿದೆ. ಅದರಲ್ಲೂ ಕಾಳ ಸಂತೆಯಲ್ಲಿ ಈ ಟಿಕೆಟ್ ಬೆಲೆ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.

1 / 8
ಈ ಬಾರಿಯ ಏಕದಿನ ವಿಶ್ವಕಪ್​ನ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಪಂದ್ಯವು ಅಕ್ಟೋಬರ್ 14 ರ ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಬಿಸಿಸಿಐ ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದೆ.

2 / 8
ಈ ಉಭಯ ತಂಡಗಳ ಕಾಳಗವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಅಭಿಮಾನಿಗಳಿಗೆ ಟಿಕೆಟ್‌ ಖರೀದಿಸುವುದು ಕಷ್ಟಕರವಾಗಿದೆ. ಅದರಲ್ಲೂ ಕಾಳ ಸಂತೆಯಲ್ಲಿ ಈ ಟಿಕೆಟ್ ಬೆಲೆ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.

3 / 8
ವಿಶ್ವಕಪ್​ನ ಅಧಿಕೃತ ಟಿಕೆಟ್ ಪಾಲುದಾರ ಬುಕ್‌ಮೈಶೋನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳನ್ನು ವಾರಗಳ ಹಿಂದೆ ಮಾರಾಟ ಮಾಡಲಾಗಿತ್ತು. ಟಿಕೆಟ್‌ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದ್ದವು. ಹೀಗಾಗಿ ಟಿಕೆಟ್ ಸಿಗದೆ ಅಭಿಮಾನಿಗಳು ನಿರಾಸೆಗೊಂಡಿದ್ದರು.

4 / 8
ಭಾರತ- ಪಾಕಿಸ್ತಾನ ಪಂದ್ಯದ ಬೇಸ್ ಲೆವೆಲ್ ಟಿಕೆಟ್‌ಗಳನ್ನು ರೂ 2200 ಕ್ಕೆ ಮಾರಾಟ ಮಾಡಲಾಗಿದೆ. ಲಾಂಜ್ ಮತ್ತು ಉನ್ನತ ಮಟ್ಟದ ಟಿಕೆಟ್‌ಗಳು ಸುಮಾರು ರೂ 15,000 ಕ್ಕೆ ಮಾರಾಟವಾಗಿವೆ. ಈ ಬೆಲೆ ನೀಡಿ ಖರೀದಿಸಲು ಅಭಿಮಾನಿಗಳು ಮುಂದಾಗಿದ್ದರೂ ಅವರಿಗೆ ಟಿಕೆಟ್ ಸಿಗುತ್ತಿಲ್ಲ.

5 / 8
ಹೀಗಾಗಿ ಕಾಳಸಂತೆಯಲ್ಲಿ ಟಿಕೆಟ್ ಖರೀದಿಸಲು ಅಭಿಮಾನಿಗಳು ಮುಂದಾಗುತ್ತಿದ್ದಾರೆ. ಇನ್ನು ಈ ಪಂದ್ಯದ ಟಿಕೆಟ್​ಗಳನ್ನು ಕೆಲವರು ಮರು ಮಾರಾಟ ಮಾಡುತ್ತಿದ್ದು, ಅವರಿಗೆ 10 ಪಟ್ಟು ಅಧಿಕ ಹಣ ಸಿಗುತ್ತಿದೆ ಎಂದು ವರದಿಯಾಗಿದೆ.

6 / 8
ಬ್ಲೂಮ್‌ಬರ್ಗ್ ಮಾಡಿರುವ ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಈ ಪಂದ್ಯದ ತನ್ನ ಟಿಕೆಟ್ ಅನ್ನು ಮೂಲ ಬೆಲೆಗಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಿದ್ದಾನೆ ಎಂದು ವರದಿ ಮಾಡಿದೆ. ಟಿಕೆಟ್‌ಗಳ ಮಾರಾಟದ ಸಮಯದಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಅನ್ನು ಆ ವ್ಯಕ್ತಿ 2200 ರೂ.ಗೆ ಖರೀದಿಸಿದ್ದ.

7 / 8
ಆದರೆ ಪಂದ್ಯಕ್ಕೆ ಕೇವಲ ಎರಡು ದಿನಗಳ ಮೊದಲು ಆತ ಪಂದ್ಯದ ಟಿಕೆಟ್ ಅನ್ನು ಮರುಮಾರಾಟ ಮಾಡಿದ್ದು, ಆ ಟಿಕೆಟ್‌ನ ಮರುಮಾರಾಟ ಮೌಲ್ಯವು 22,000 ರೂ. ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅಂದರೆ 2200 ರೂ.ಗೆ ಟಿಕೆಟ್ ಖರೀದಿಸಿದ ವ್ಯಕ್ತಿ ಅದೇ ಟಿಕೆಟ್ ಅನ್ನು 22,000 ರೂಗೆ ಮರು ಮಾರಾಟ ಮಾಡಿದ್ದಾನೆ.

8 / 8
ಈ ಬಂಪರ್ ಬೆಲೆ ಪಡೆದ ವ್ಯಕ್ತಿ ನಿಖಿಲ್ ವಾಧ್ವಾನಿ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಮಾತನಾಡಿರುವ ಅವರು, ಭಾರತ- ಪಾಕ್ ಪಂದ್ಯದ ಟಿಕೆಟ್​ಗಿರುವ ಬೇಡಿಕೆಯನ್ನು ನೋಡಿ ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಣವನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ.