IND vs PAK: ರೋಹಿತ್ ಶರ್ಮಾ ‘ಮಿಷನ್ 89’: ಹೀಗಾದ್ರೆ ಪಾಕ್ಗೆ ಸೋಲು ಖಚಿತ..!
TV9 Web | Updated By: ಝಾಹಿರ್ ಯೂಸುಫ್
Updated on:
Aug 25, 2022 | 12:55 PM
IND vs PAK: ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಆಗಸ್ಟ್ 28 ರಂದು ನಡೆಯಲಿದೆ. ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
1 / 5
ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಆಗಸ್ಟ್ 28 ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಈಗಾಗಲೇ ಟೀಮ್ ಇಂಡಿಯಾ ಭರ್ಜರಿ ಸಿದ್ದತೆಯಲ್ಲಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಆರಂಭಿಕರಾಗಿ ಆಡಲಿರುವ ಹಿಟ್ಮ್ಯಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಪಾಕ್ ತಂಡಕ್ಕೆ ಸೋಲು ಖಚಿತ ಎನ್ನಬಹುದು. ಮತ್ತೊಂದೆಡೆ ಹೊಸ ದಾಖಲೆ ಕೂಡ ರೋಹಿತ್ ಶರ್ಮಾ ಪಾಲಾಗಲಿದೆ. ಅದರಂತೆ ಮಿಷನ್ 89 ಯೋಜನೆಯೊಂದಿಗೆ ಹಿಟ್ಮ್ಯಾನ್ ಕಣಕ್ಕಿಳಿಯಲಿದ್ದಾರೆ. ಏನಿದು ಮಿಷನ್ 89...?
2 / 5
ಮಿಷನ್ 89 ರೋಹಿತ್ ಶರ್ಮಾ ಮುಂದಿರುವ ಟಾರ್ಗೆಟ್. ಅಂದರೆ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಹಿಟ್ಮ್ಯಾನ್ 89 ರನ್ ಬಾರಿಸಿದರೆ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಇದೀಗ ಅದೇ ಟಾರ್ಗೆಟ್ನಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದರೆ ಅತ್ತ ಪಾಕ್ ವಿರುದ್ದ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಬಹುದು. ಅಲ್ಲದೆ ಈ ಮೂಲಕ ಗೆಲ್ಲುವ ಅವಕಾಶವನ್ನು ಸೃಷ್ಟಿಸಿಕೊಳ್ಳಬಹುದು.
3 / 5
ಪ್ರಸ್ತುತ, ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಅವರು 23 ಪಂದ್ಯಗಳಲ್ಲಿ 2 ಶತಕ ಮತ್ತು 7 ಅರ್ಧ ಶತಕಗಳೊಂದಿಗೆ 971 ರನ್ ಗಳಿಸಿದ್ದಾರೆ.
4 / 5
27 ಪಂದ್ಯಗಳಲ್ಲಿ 1 ಶತಕ ಮತ್ತು 7 ಅರ್ಧಶತಕಗಳೊಂದಿಗೆ 883 ರನ್ ಗಳಿಸಿರುವ ರೋಹಿತ್ ಶರ್ಮಾ ಭಾರತೀಯ ರನ್ ಸರದಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕ್ ವಿರುದ್ದದ ಪಂದ್ಯದಲ್ಲಿ 89 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ ಸಚಿನ್ ಅವರ ದಾಖಲೆಯನ್ನು ಹಿಂದಿಕ್ಕಬಹುದು.
5 / 5
ಇನ್ನು ಶ್ರೀಲಂಕಾದ ಸನತ್ ಜಯಸೂರ್ಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜಯಸೂರ್ಯ 1220 ರನ್ಗಳಿಸಿದರೆ, ಶ್ರೀಲಂಕಾದ ಕುಮಾರ ಸಂಗಕ್ಕಾರ 1075 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಪ್ರಸ್ತುತ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.