IND vs SA: ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ ಭಾರತದ ಏಕೈಕ ಬೌಲರ್ ಅರ್ಷದೀಪ್ ಸಿಂಗ್..!

|

Updated on: Dec 17, 2023 | 5:38 PM

IND vs SA: ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

1 / 8
ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2 / 8
ಅರ್ಷದೀಪ್ ಸಿಂಗ್ ಈ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಭಾರತದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಷದೀಪ್ ಪಾತ್ರರಾಗಿದ್ದಾರೆ.

3 / 8
ಈ ಮೊದಲು, ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ ತಂಡದ ವಿರುದ್ಧ ಆಡುವಾಗ ಯಾವುದೇ ಭಾರತೀಯ ವೇಗದ ಬೌಲರ್ ಈ ಸಾಧನೆ ಮಾಡಿರಲಿಲ್ಲ. ಪಂದ್ಯದಲ್ಲಿ ಅರ್ಷದೀಪ್ 10 ಓವರ್ ಬೌಲ್ ಮಾಡಿ 37 ರನ್ ನೀಡಿ 5 ವಿಕೆಟ್ ಪಡೆದರು.

4 / 8
ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಹೊರತಾಗಿ ಅವೇಶ್ ಖಾನ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು.

5 / 8
ಅಂದಹಾಗೆ, ಅರ್ಷದೀಪ್ ದಕ್ಷಿಣ ಆಫ್ರಿಕಾದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಆಗಿದ್ದಾರೆ.

6 / 8
ಅರ್ಷದೀಪ್​ಗೂ ಮುನ್ನ ಆಶಿಶ್ ನೆಹ್ರಾ 2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಪಡೆದಿದ್ದರೆ, 2018ರಲ್ಲಿ ಸೆಂಚುರಿಯನ್‌ನಲ್ಲಿ ಆಫ್ರಿಕಾ ತಂಡದ ವಿರುದ್ಧ ಯುಜುವೇಂದ್ರ ಚಾಹಲ್ 5 ವಿಕೆಟ್ ಪಡೆದಿದ್ದರು.

7 / 8
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಆದರೆ ಅರ್ಷದೀಪ್ ಮತ್ತು ಅವೇಶ್ ವಿಧ್ವಂಸಕತೆಯನ್ನು ಸೃಷ್ಟಿಸಿ ಆಫ್ರಿಕನ್ ಬ್ಯಾಟ್ಸ್‌ಮನ್‌ಗಳನ್ನು ದಂಗುಬಡಿಸಿದರು.

8 / 8
ಭಾರತದ ಇಬ್ಬರೂ ಬೌಲರ್‌ಗಳು ಆರಂಭದಿಂದಲೂ ಅಪಾಯಕಾರಿ ಬೌಲಿಂಗ್‌ ಮಾಡಿ ಇಡೀ ಆಫ್ರಿಕಾ ತಂಡವನ್ನು 116 ರನ್​ಗಳಿಗೆ ಆಲೌಟ್ ಮಾಡಿದರು. ಭಾರತದ ಪರ ಅರ್ಷದೀಪ್ 5, ಅವೇಶ್ ಖಾನ್ 4 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು.