David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ

| Updated By: ಝಾಹಿರ್ ಯೂಸುಫ್

Updated on: Oct 05, 2022 | 11:55 AM

T20 Records: ಕೊನೆಯಲ್ಲಿ ಎದುರಿಸಿದ 5 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್​ನೊಂದಿಗೆ ಡೇವಿಡ್ ಮಿಲ್ಲರ್ 19 ರನ್ ಸಿಡಿಸಿದ್ದರು. ಈ ಸಿಡಿಲಬ್ಬರದ ಫಿನಿಶಿಂಗ್ ಮೂಲಕ ಸೌತ್ ಆಫ್ರಿಕಾ ತಂಡವು 227 ರನ್​ ಕಲೆಹಾಕಿತು.

1 / 6
ಭಾರತ-ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯದಲ್ಲೂ ಡೇವಿಡ್ ಮಿಲ್ಲರ್ ಆರ್ಭಟಿಸಿದ್ದಾರೆ. ಅಂತಿಮ ಓವರ್​ ವೇಳೆ ಕಣಕ್ಕಿಳಿದ ಮಿಲ್ಲರ್ ಟೀಮ್ ಇಂಡಿಯಾ ವೇಗಿ ದೀಪಕ್ ಚಹರ್ ಪಾಲಿಗೆ ಕಿಲ್ಲರ್ ಆಗಿ ಪರಿಣಮಿಸಿದ್ದರು.

2 / 6
ಕೊನೆಯಲ್ಲಿ ಎದುರಿಸಿದ 5 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್​ನೊಂದಿಗೆ ಡೇವಿಡ್ ಮಿಲ್ಲರ್ 19 ರನ್ ಸಿಡಿಸಿದ್ದರು. ಈ ಸಿಡಿಲಬ್ಬರದ ಫಿನಿಶಿಂಗ್ ಮೂಲಕ ಸೌತ್ ಆಫ್ರಿಕಾ ತಂಡವು 227 ರನ್​ ಕಲೆಹಾಕಿತು.

3 / 6
ವಿಶೇಷ ಎಂದರೆ ಈ ಮೂರು ಸಿಕ್ಸ್​ನೊಂದಿಗೆ ಡೇವಿಡ್ ಮಿಲ್ಲರ್ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

4 / 6
ಕ್ರಿಕೆಟ್ ಅಂಗಳದ ಶ್ರೇಷ್ಠ ಫಿನಿಶರ್ ಎನಿಸಿಕೊಂಡಿದ್ದ ಧೋನಿ ಟಿ20 ಕ್ರಿಕೆಟ್​ನಲ್ಲಿ ಕೊನೆಯ 5 ಓವರ್​ಗಳಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಹೊಂದಿದ್ದರು. ಅಂದರೆ ಟಿ20 ಕ್ರಿಕೆಟ್​ನಲ್ಲಿ ಅಂತಿಮ 5 ಓವರ್​ಗಳ ವೇಳೆ ಬ್ಯಾಟ್ ಬೀಸಿ 1000 ರನ್ ಪೂರೈಸಿದ ವಿಶ್ವದ ಏಕೈಕ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆ ಧೋನಿ ಹೆಸರಿನಲ್ಲಿತ್ತು.

5 / 6
ಆದರೀಗ ಧೋನಿಯ ದಾಖಲೆಯನ್ನು ಉಡೀಸ್ ಮಾಡಿರುವ ಡೇವಿಡ್ ಮಿಲ್ಲರ್, ಟಿ20 ಕ್ರಿಕೆಟ್​ನಲ್ಲಿ ಅಂತಿಮ 5 ಓವರ್​ಗಳ ವೇಳೆ ಬ್ಯಾಟ್ ಬೀಸಿ ಒಟ್ಟು 1102 ರನ್​ ಬಾರಿಸಿದ್ದಾರೆ.

6 / 6
ಈ ಮೂಲಕ ಮಹೇಂದ್ರ ಸಿಂಗ್ ಧೋನಿ (1014 ರನ್) ಹೆಸರಿನಲ್ಲಿದ್ದ ವಿಶೇಷ ಡೆತ್ ಓವರ್ ದಾಖಲೆಯನ್ನು ಡೇವಿಡ್ ಮಿಲ್ಲರ್ ಧೂಳೀಪಟ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.