Ravindra Jadeja: ಯುವರಾಜ್ ಸಿಂಗ್ ನಂತರ ಈ ಸಾಧನೆ ಮಾಡಿದ 2ನೇ ಭಾರತೀಯ ರವೀಂದ್ರ ಜಡೇಜಾ..!
Ravindra Jadeja: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ವಿಶ್ವಕಪ್ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 243 ರನ್‌ಗಳ ಜಯ ಸಾಧಿಸಿದೆ. ಟೀಂ ಇಂಡಿಯಾದ ಈ ಗೆಲುವಿಗಾಗಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಪ್ರಮುಖ ಕೊಡುಗೆ ನೀಡಿದರು.
1 / 8
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ವಿಶ್ವಕಪ್ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 243 ರನ್‌ಗಳ ಜಯ ಸಾಧಿಸಿದೆ. ಟೀಂ ಇಂಡಿಯಾದ ಈ ಗೆಲುವಿಗಾಗಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಪ್ರಮುಖ ಕೊಡುಗೆ ನೀಡಿದರು.
2 / 8
ಮೊದಲು ಬ್ಯಾಟಿಂಗ್ನಲ್ಲಿ ಕೇವಲ 15 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸಿದ ಜಡೇಜಾ, ನಂತರ 327 ರನ್ ಬೆನ್ನಟ್ಟಿದ ಪ್ರೋಟಿಸ್ ತಂಡವನ್ನು 83 ರನ್ಗೆ ಆಲೌಟ್ ಮಾಡುವಲ್ಲಿ ಐದು ವಿಕೆಟ್ಗಳ ಕೊಡುಗೆ ನೀಡಿದರು.
3 / 8
ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಐದು ವಿಕೆಟ್ ಉರುಳಿಸಿದ ಎರಡನೇ ಭಾರತೀಯ ಸ್ಪಿನ್ನರ್ ಎನಿಸಿಕೊಂಡರು.
4 / 8
ಈ ಪಂದ್ಯದಲ್ಲಿ ಮೊದಲು ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರನ್ನು ವಜಾಗೊಳಿಸಿದ ಜಡೇಜಾ, ನಂತರ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ಅವರ ವಿಕೆಟ್ ಉರುಳಿಸಿದರು.
5 / 8
ಈ ಪಂದ್ಯದಲ್ಲಿ ತಮ್ಮ ಖೋಟಾದ ಒಂಬತ್ತು ಓವರ್ ಬೌಲ್ ಮಾಡಿದ ಜಡೇಜಾ ಒಂದು ಮೇಡನ್ ಸೇರಿದಂತೆ 33 ರನ್‌ಗಳನ್ನು ಬಿಟ್ಟುಕೊಟ್ಟರು.
6 / 8
ಜಡೇಜಾಗೂ ಮೊದಲು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಈ ಸಾಧನೆ ಮಾಡಿದ ಏಕೈಕ ಭಾರತೀಯ ಸ್ಪಿನ್ನರ್. ಅವರು 2011 ರ ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಐದು ವಿಕೆಟ್ ಉರುಳಿಸಿದ್ದರು.
7 / 8
ಜಡೇಜಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಡೇಜಾಗೂ ಮೊದಲು ಸುನಿಲ್ ಜೋಶಿ ಮತ್ತು ಯುಜುವೇಂದ್ರ ಚಹಾಲ್ ಮಾತ್ರ ಈ ದಾಖಲೆ ಮಾಡಿದ್ದರು.
8 / 8
ಒಟ್ಟಾರೆಯಾಗಿ, ಜಡೇಜಾ ಏಕದಿನ ವಿಶ್ವಕಪ್‌ನಲ್ಲಿ ಐದು ವಿಕೆಟ್ ಕಬಳಿಸಿದ ಏಳನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅನಿಲ್ ಕುಂಬ್ಳೆ ನಂತರ ಈಡನ್ ಗಾರ್ಡನ್ಸ್‌ನಲ್ಲಿ ಏಕದಿನದಲ್ಲಿ ಐದು ವಿಕೆಟ್ ಪಡೆದ ಎರಡನೇ ಭಾರತೀಯ ಎನಿಸಿಕೊಂಡರು.