IND vs SL: ಶ್ರೀಲಂಕಾ ಎದುರು ಭಾರತವೇ ಬಲಿಷ್ಠ; ಅಂಕಿ ಅಂಶ ಹೇಳುತ್ತಿದೆ ಟೀಂ ಇಂಡಿಯಾದ ಗೆಲುವಿನ ಕಥೆ
TV9 Web | Updated By: ಪೃಥ್ವಿಶಂಕರ
Updated on:
Jan 13, 2023 | 11:34 AM
IND vs SL: ವಾಸ್ತವವಾಗಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ 10ನೇ ಏಕದಿನ ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಭಾರತದಲ್ಲಿ ಉಭಯ ತಂಡಗಳ ನಡುವೆ ಇದುವರೆಗೆ 11 ಸರಣಿಗಳು ನಡೆದಿದ್ದು, ಇದರಲ್ಲಿ ಶ್ರೀಲಂಕಾ ಒಂದೇ ಒಂದು ಸರಣಿಯನ್ನು ಗೆದ್ದಿಲ್ಲ.
1 / 5
ಕೋಲ್ಕತ್ತಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 4 ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ ಸರಣಿ ಎತ್ತಿ ಹಿಡಿದಿದೆ. ಕೆಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ ಭಾರತ ಶ್ರೀಲಂಕಾ ನೀಡಿದ 216 ರನ್ ಗುರಿಯನ್ನು 6 ವಿಕೆಟ್ ಕಳೆದುಕೊಂಡು ಸಾಧಿಸಿತು. ಇದರೊಂದಿಗೆ ಭಾರತ ಸರಣಿ ಗೆದ್ದಿದ್ದಲ್ಲದೆ, ಶ್ರೀಲಂಕಾ ಮೇಲೆ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಿಕೊಂಡಿದೆ.
2 / 5
ವಾಸ್ತವವಾಗಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ 10ನೇ ಏಕದಿನ ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಭಾರತದಲ್ಲಿ ಉಭಯ ತಂಡಗಳ ನಡುವೆ ಇದುವರೆಗೆ 11 ಸರಣಿಗಳು ನಡೆದಿದ್ದು, ಇದರಲ್ಲಿ ಶ್ರೀಲಂಕಾ ಒಂದೇ ಒಂದು ಸರಣಿಯನ್ನು ಗೆದ್ದಿಲ್ಲ.
3 / 5
ಇದಲ್ಲದೇ ಶ್ರೀಲಂಕಾ ವಿರುದ್ಧ ಭಾರತ ಕಳೆದ 40 ವರ್ಷಗಳಿಂದ ಸಾಗುತ್ತಿರುವ ಯಶಸ್ಸಿನ ಓಟ 26ನೇ ಸರಣಿಗೆ ತಲುಪಿದೆ. ಭಾರತ ತಂಡ ಶ್ರೀಲಂಕಾದಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ.
4 / 5
ಅಷ್ಟೇ ಅಲ್ಲ, ಶ್ರೀಲಂಕಾ ವಿರುದ್ಧದ 95ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ವಿಶ್ವದಾಖಲೆಯನ್ನು ಸರಿಗಟ್ಟಿದೆ. ಇದುವರೆಗೆ ನ್ಯೂಜಿಲೆಂಡ್ ತಂಡವನ್ನು ಹಲವು ಬಾರಿ ಸೋಲಿಸಿರುವ ಆಸ್ಟ್ರೇಲಿಯಾದ ಹೆಸರಿನಲ್ಲಿ ಈ ದಾಖಲೆ ಇತ್ತು.
5 / 5
ಅದೇ ವೇಳೆ ಈ ಸೋಲಿನೊಂದಿಗೆ ಶ್ರೀಲಂಕಾ ಹೆಸರಿನಲ್ಲಿ ದಾಖಲೆಯೊಂದು ದಾಖಲಾಗಿದೆ. ಶ್ರೀಲಂಕಾ ಈಗ ಏಕದಿನ (437 ಪಂದ್ಯಗಳು) ಮತ್ತು ಟಿ20 (94 ಪಂದ್ಯಗಳು) ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡ ಎನಿಸಿಕೊಂಡಿದೆ.
Published On - 11:34 am, Fri, 13 January 23