IND vs SL: ಮೈದಾನಕ್ಕೆ ನುಗ್ಗಿ ಕೊಹ್ಲಿಯ ಕಾಲು ಹಿಡಿದ ಯುವಕ; ಎಲ್ಲರ ಹೃದಯ ಗೆದ್ದ ಸೂರ್ಯ; ಫೋಟೋ ನೋಡಿ

| Updated By: ಪೃಥ್ವಿಶಂಕರ

Updated on: Jan 16, 2023 | 10:46 AM

Virat Kohli: ಈ ಯುವಕ ಕೊಹ್ಲಿಯನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ, ಅವರೊಂದಿಗೆ ಫೋಟೋ ತೆಗೆದುಕೊಳ್ಳುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾನೆ

1 / 5
ಜನವರಿ 15 ಭಾನುವಾರ ವಿರಾಟ್ ಕೊಹ್ಲಿಗೆ ವಿಶೇಷ ದಿನವಾಗಿತ್ತು. ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ 166 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಆದರೆ ಈ ದಿನ ಹಲವು ಅಭಿಮಾನಿಗಳಿಗೆ ಕೊಹ್ಲಿಗಿಂತ ವಿಶೇಷವಾಗಿತ್ತು. ತನ್ನ ನೆಚ್ಚಿನ ಆಟಗಾರ ಮೈದಾನದಲ್ಲಿ ಅಬ್ಬರಿಸುವುದನ್ನು ನೋಡಿ ಕಣ್ತುಂಬಿಕೊಳ್ಳುವ ಅವಕಾಶವನ್ನು ಸಾವಿರಾರು ಅಭಿಮಾನಿಗಳು ಪಡೆದರು. ಈ ಪೈಕಿ ಒಬ್ಬ ಅಭಿಮಾನಿಗೆ ಮಾತ್ರ ಕೊಹ್ಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅದೃಷ್ಟ ಖುಲಾಯಿಸಿದೆ.

2 / 5
ಶ್ರೀಲಂಕಾ ವಿರುದ್ಧ ಭಾರತ 317 ರನ್‌ಗಳ ಜಯ ಸಾಧಿಸಿದ ಬಳಿಕ ಕೊಹ್ಲಿ ಸೇರಿದಂತೆ ಹಲವು ಭಾರತೀಯ ಆಟಗಾರರು ಮೈದಾನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕನೊಬ್ಬ ಮೈದಾನಕ್ಕೆ ಓಡಿ ಬಂದಿದ್ದಾನೆ.

3 / 5
ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿದ್ದ ಆತ ನೇರವಾಗಿ ಕೊಹ್ಲಿ ಬಳಿಗೆ ಹೋಗಿ ಅವರ ಪಾದಗಳನ್ನು ಮುಟ್ಟಲು ಯತ್ನಿಸಿದ್ದಾನೆ.

4 / 5
ಬಳಿಕ ಈ ಯುವಕ ಕೊಹ್ಲಿಯನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ, ಕೊಹ್ಲಿಯೊಂದಿಗೆ ಫೋಟೋ ತೆಗೆದುಕೊಳ್ಳುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾನೆ

5 / 5
ಕೊಹ್ಲಿ ಕೂಡ ಆತನನ್ನು ನಿರಾಸೆಗೊಳಿಸದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ನಡುವೆ ಸೂರ್ಯಕುಮಾರ್ ಯಾದವ್ ತಮ್ಮ ಸರಳತೆಯಿಂದ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಸ್ವತಃ ಸೂರ್ಯ, ಕೊಹ್ಲಿ ಬಳಿಗೆ ಹೋಗಿ ಕೊಹ್ಲಿಯೊಂದಿಗೆ ಆ ಯುವ ಅಭಿಮಾನಿಯ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.

Published On - 10:46 am, Mon, 16 January 23