R Ashwin Records: 12 ವಿಕೆಟ್ ಕಬಳಿಸಿ ಈ 6 ದಾಖಲೆ ಬರೆದ ಅಶ್ವಿನ್..!
IND vs WI 1st Test: ಮೊದಲ ಇನಿಂಗ್ಸ್‌ನಲ್ಲಿ 24.3 ಓವರ್‌ಗಳಲ್ಲಿ ಕೇವಲ 60 ರನ್‌ಗಳಿಗೆ 5 ವಿಕೆಟ್ ಪಡೆದಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್‌ನಲ್ಲಿ 71 ರನ್‌ಗಳಿಗೆ 7 ವಿಕೆಟ್ ಪಡೆದರು.
1 / 8
ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಡೊಮಿನಿಕಾ ಟೆಸ್ಟ್‌ನಲ್ಲಿ ವಿಂಡೀಸ್ ವಿರುದ್ಧ ಪಂದ್ಯದುದ್ದಕ್ಕೂ ಪಾರುಪತ್ಯ ಸಾಧಿಸಿದ ಭಾರತ ಕೇವಲ ಮೂರು ದಿನಗಳಲ್ಲಿ ಇನ್ನಿಂಗ್ಸ್ ಮತ್ತು 141 ರನ್‌ಗಳ ಗೆಲುವು ಸಾಧಿಸಿತು.
2 / 8
ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ 150 ರನ್‌ಗಳಿಗೆ ಉತ್ತರವಾಗಿ, ಭಾರತ 5 ವಿಕೆಟ್‌ಗೆ 421 ರನ್ ಕಲೆಹಾಕುವ ಮೂಲಕ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೆರಿಬಿಯನ್ ತಂಡಕ್ಕೆ ಕಂಟಕವಾಗಿದ್ದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಎರಡನೇ ಇನ್ನಿಂಗ್ಸ್‌ನಲ್ಲೂ ವಿಂಡೀಸ್ ತಂಡವನ್ನು ಕೇವಲ 130 ಕ್ಕೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
3 / 8
ಮೊದಲ ಇನಿಂಗ್ಸ್‌ನಲ್ಲಿ 24.3 ಓವರ್‌ಗಳಲ್ಲಿ ಕೇವಲ 60 ರನ್‌ಗಳಿಗೆ 5 ವಿಕೆಟ್ ಪಡೆದಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್‌ನಲ್ಲಿ 71 ರನ್‌ಗಳಿಗೆ 7 ವಿಕೆಟ್ ಪಡೆದರು. ಒಟ್ಟಾರೆ ಈ ಪಂದ್ಯದಲ್ಲಿ ಅಶ್ವಿನ್ 12 ವಿಕೆಟ್ ಕಬಳಿಸಿದ್ದು, ಇದರೊಂದಿಗೆ ಹಲವು ದಾಖಲೆಗಳನ್ನು ಪುಡಿಗಟ್ಟಿದರು.
4 / 8
ಆರ್ ಅಶ್ವಿನ್ ವೆಸ್ಟ್ ಇಂಡೀಸ್‌ನಲ್ಲಿ ಒಂದೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ 5 ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.
5 / 8
ಆರ್ ಅಶ್ವಿನ್ 23ನೇ ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ ಕೊನೆಯ ವಿಕೆಟ್ ಉರುಳಿಸಿದ್ದು ವಿಶ್ವದಾಖಲೆಯಾಗಿದ್ದು, ಈ ವಿಚಾರದಲ್ಲಿ ಶೇನ್ ವಾರ್ನ್ ದಾಖಲೆಯನ್ನು ಅಶ್ವಿನ್ ಪುಡಿಗಟ್ಟಿದರು.
6 / 8
ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ 6 ಬಾರಿ ಐದು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಅಶ್ವಿನ್, ಈ ವಿಚಾರದಲ್ಲಿ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
7 / 8
12 ವಿಕೆಟ್ ಉರುಳಿಸುವುದರೊಂದಿಗೆ ಅಶ್ವಿನ್ 8ನೇ ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದು, ಈ ವಿಚಾರದಲ್ಲಿ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊನೆಯ ಟೆಸ್ಟ್‌ನಲ್ಲೂ ಅಶ್ವಿನ್ 10 ವಿಕೆಟ್ ಪಡೆದರೆ, ಈ ವಿಷಯದಲ್ಲಿ ಈ ಸಾಧನೆ ಮಾಡಿದ ಭಾರತದ ನಂಬರ್ 1 ಬೌಲರ್ ಆಗಲಿದ್ದಾರೆ.
8 / 8
131 ರನ್ ನೀಡಿ 12 ವಿಕೆಟ್ ಕಬಳಿಸಿರುವುದು ವಿದೇಶಿ ನೆಲದಲ್ಲಿ ಅಶ್ವಿನ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅಲ್ಲದೆ ಇನ್ನಿಂಗ್ಸ್‌ವೊಂದರಲ್ಲಿ 71 ರನ್ ನೀಡಿ 7 ವಿಕೆಟ್‌ಗಳನ್ನು ಕಬಳಿಸಿದ್ದು ವಿದೇಶಿ ನೆಲದಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.