ಕೊಹ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ 21 ನೇ ರನ್ ಬಾರಿಸಿದ ತಕ್ಷಣ ಟೆಸ್ಟ್ ಕ್ರಿಕೆಟ್‌ನಲ್ಲಿ 8500 ರನ್‌ಗಳನ್ನು ಪೂರೈಸಿದರು. ಬಳಿಕ ಅವರ ಬ್ಯಾಟ್ನಿಂದ 25ನೇ ರನ್ ಹೊರಬಿದ್ದ ಕೂಡಲೇ ಅನುಭವಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಹಿಂದಿಕ್ಕಿದರು. ವಾಸ್ತವವಾಗಿ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 8503 ರನ್ ಕಲೆಹಾಕಿದ್ದು, ಇದೀಗ ಕೊಹ್ಲಿ, ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.