Shubman Gill: ಬಾಬರ್ ಅಜಮ್ ದಾಖಲೆ ಉಡೀಸ್; ಏಕದಿನದಲ್ಲಿ ಶುಭ್ಮನ್ ಗಿಲ್ ನಂ.1..!
IND vs WI: ಈ ಪಂದ್ಯದಲ್ಲಿ 34 ರನ್ ಸಿಡಿಸುತ್ತಿದ್ದಂತೆ ಏಕದಿನದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಅನುಭವಿ ಆಟಗಾರರು ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.
1 / 10
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದೆ. ವಿಂಡೀಸ್ 6 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿದೆ. ಟೀಂ ಇಂಡಿಯಾವನ್ನು 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ಸೀಮಿತಗೊಳಿಸಿದ ವಿಂಡೀಸ್, ಆ ಬಳಿಕ 36.4 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ಸವಾಲನ್ನು ಪೂರ್ಣಗೊಳಿಸಿತು.
2 / 10
ಈ ಗೆಲುವಿನೊಂದಿಗೆ ವಿಂಡೀಸ್ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಉತ್ತಮ ಆರಂಭದ ಬಳಿಕ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳು ಕಳಪೆ ಪ್ರದರ್ಶನ ನೀಡಿದ್ದೆ ಸೋಲಿಗೆ ಕಾರಣವಾಯಿತು. ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ 90 ರನ್ ಜೊತೆಯಾಟ ತಂಡಕ್ಕೆ ಉತ್ತಮ ಆರಂಭ ನೀಡಿದರೂ ಉಳಿದ ಆಟಗಾರರು ಅದನ್ನು ಮುಂದುವರೆಸಲಿಲ್ಲ.
3 / 10
ಇನ್ನು ಈ ಪಂದ್ಯದಲ್ಲಿ 49 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್, 5 ಬೌಂಡರಿಗಳ ನೆರವಿನಿಂದ 39 ರನ್ ಕಲೆಹಾಕಿದರು. ಅಲ್ಲದೆ ಇದೇ ಪಂದ್ಯದಲ್ಲಿ 34 ರನ್ ಸಿಡಿಸುತ್ತಿದ್ದಂತೆ ಏಕದಿನದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಅನುಭವಿ ಆಟಗಾರರು ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.
4 / 10
ವಾಸ್ತವವಾಗಿ ಏಕದಿನ ಕ್ರಿಕೆಟ್ನ ಮೊದಲ 26 ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಈ ಹಿಂದೆ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಈ ದಾಖಲೆ ಮುರಿದಿರುವ ಗಿಲ್ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.
5 / 10
2019 ರಲ್ಲಿ ತಮ್ಮ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಶುಭ್ಮನ್ 26 ಇನ್ನಿಂಗ್ಸ್‌ಗಳಲ್ಲಿ 1352 ರನ್ ಕಲೆ ಹಾಕಿದ್ದಾರೆ. 61.45 ಸರಾಸರಿಯಲ್ಲಿ ರನ್ ಕಲೆಹಾಕಿರುವ ಗಿಲ್ ಖಾತೆಯಲ್ಲಿ 1 ದ್ವಿಶತಕ, 4 ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಶುಭ್ಮನ್ಗೂ ಮುನ್ನ ಈ ದಾಖಲೆ ಬರೆದಿದ್ದ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..
6 / 10
ಶುಭ್ಮನ್ ಗಿಲ್- 26 ಇನ್ನಿಂಗ್ಸ್, 1352 ರನ್
7 / 10
ಬಾಬರ್ ಅಜಮ್- 26 ಇನ್ನಿಂಗ್ಸ್, 1322 ರನ್
8 / 10
ಜೊನಾಥನ್ ಟ್ರಾಟ್- 26 ಇನ್ನಿಂಗ್ಸ್, 1303 ರನ್
9 / 10
ಫಾಖರ್ ಜಮಾನ್- 26 ಇನ್ನಿಂಗ್ಸ್, 1275 ರನ್
10 / 10
ರಾಸ್ಸೀ ವ್ಯಾನ್ ಡೆರ್ ದುಸ್ಸೆನ್- 26 ಇನ್ನಿಂಗ್ಸ್, 1267 ರನ್