IND vs WI: ಪೆವಿಲಿಯನ್ ಪರೇಡ್ ನಡುವೆಯೂ ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಸಂಜು ಸ್ಯಾಮ್ಸನ್
Sanju Samson: ಅದರಲ್ಲೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬಂದ ಪುಟ್ಟ ಹೋದ ಪುಟ್ಟ ಎಂಬ ಮಾತಿಗೆ ತಕ್ಕಂತ ಆಟವಾಡಿದ ಸಂಜು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಆಡಿದ ಐದು ಪಂದ್ಯಗಳಲ್ಲಿ ಅಲ್ಪ ರನ್ ಕಲೆಹಾಕುವಲ್ಲಿ ಯಶಸ್ವಿಯಾದ ಸಂಜು ಟಿ20 ಮಾದರಿಯಲ್ಲಿ 6000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.
1 / 9
ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಸೋತ ಟೀಂ ಇಂಡಿಯಾ ಟಿ20 ಸರಣಿಯನ್ನು ಕಳೆದುಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದ ವೈಫಲ್ಯವೇ ತಂಡದ ಸೋಲಿಗೆ ಕಾರಣವಾಯ್ತು. ಅದರಲ್ಲೂ ಪ್ರಮುಖವಾಗಿ ತಂಡದ ಅಗ್ರಕ್ರಮಾಂಕದ ಪೆವಿಲಿಯನ್ ಪರೇಡ್ ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ನೂಕಿತು.
2 / 9
ಅದರಲ್ಲೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬಂದ ಪುಟ್ಟ ಹೋದ ಪುಟ್ಟ ಎಂಬ ಮಾತಿಗೆ ತಕ್ಕಂತ ಆಟವಾಡಿದ ಸಂಜು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಆಡಿದ ಐದು ಪಂದ್ಯಗಳಲ್ಲಿ ಅಲ್ಪ ರನ್ ಕಲೆಹಾಕುವಲ್ಲಿ ಯಶಸ್ವಿಯಾದ ಸಂಜು ಟಿ20 ಮಾದರಿಯಲ್ಲಿ 6000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.
3 / 9
ವಾಸ್ತವವಾಗಿ ಸಂಜು ಈ ಮೈಲಿಗಲ್ಲು ತಲುಪಲು ಸರಣಿ ಆರಂಭಕ್ಕೂ ಮೊದಲು ಕೇವಲ 21 ರನ್‌ಗಳ ಅಗತ್ಯವಿತ್ತು. ಮೊದಲ ಎರಡು ಪಂದ್ಯಗಳಲ್ಲಿ 12 ಮತ್ತು 7 ರನ್ ಗಳಿಸಿದ್ದ ಸಂಜು 5ನೇ ಟಿ20ಯಲ್ಲಿ ಕೇವಲ 13 ರನ್ ಬಾರಿಸಿ ಟಿ20 ಕ್ರಿಕೆಟ್ನಲ್ಲಿ 6000 ರನ್ ಪೂರೈಸಿದವರ ಪಟ್ಟಿಗೆ ಸೇರ್ಪಡೆಗೊಂಡರು.
4 / 9
ಈ ಮೂಲಕ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 13ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ 14,562 ಟಿ20 ರನ್ ಕಲೆಹಾಕಿರುವ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ.
5 / 9
ಇನ್ನು ಚುಟುಕು ಮಾದರಿಯಲ್ಲಿ 6000 ಕ್ಕೂ ಅಧಿಕ ರನ್ ಕಲೆಹಾಕಿದ ಟೀಂ ಇಂಡಿಯಾ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 11965 ಬಾರಿಸಿದ್ದಾರೆ.
6 / 9
ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 11035 ರನ್ ಕಲೆಹಾಕಿದ್ದಾರೆ.
7 / 9
9645 ರನ್ ಬಾರಿಸಿರುವ ಶಿಖರ್ ಧವನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
8 / 9
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, 8654 ರನ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
9 / 9
ಹಾಗೆಯೇ ಕನ್ನಡಿಗ ರಾಬಿನ್ ಉತ್ತಪ್ಪ 7272 ರನ್ ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ.