IND vs WI: ಹ್ಯಾಟ್ರಿಕ್ ಅರ್ಧಶತಕ; ಟಿ20 ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ

|

Updated on: Dec 19, 2024 | 8:22 PM

Smriti Mandhana: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅಮೋಘ ಅರ್ಧಶತಕ ಸಿಡಿಸಿದ್ದಾರೆ. ವಿಂಡೀಸ್ ವಿರುದ್ಧದ ಈ ಸರಣಿಯಲ್ಲಿ ಸ್ಮೃತಿ ಅವರ ಸತತ ಮೂರನೇ ಅರ್ಧಶತಕ ಇದಾಗಿದೆ. ಈ ಮೂಲಕ ಸ್ಮೃತಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿರುವ ಮೊದಲ ಮಹಿಳಾ ಕ್ರಿಕೆಟರ್ ಎಂಬ ವಿಶ್ವದಾಖಲೆಗೆ ಕೊರಳೊಡ್ಡಿದ್ದಾರೆ.

1 / 6
ಭಾರತ ಮಹಿಳಾ ತಂಡದ ಅನುಭವಿ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿದ್ದಾರೆ. ಇದು ಈ ಸರಣಿಯಲ್ಲಿ ಸ್ಮೃತಿ ಅವರ ಸತತ ಮೂರನೇ ಅರ್ಧಶತಕವಾಗಿದೆ.

2 / 6
ವಿಂಡೀಸ್ ವಿರುದ್ಧ ಅರ್ಧಶತಕಗಳ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಸ್ಮೃತಿ ಇದೀಗ ಮಿಥಾಲಿ ರಾಜ್ ನಂತರ ಸತತ 3 ಅರ್ಧಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೇ ಈ ಅರ್ಧಶತಕದೊಂದಿಗೆ ಸ್ಮೃತಿ ವಿಶ್ವದಾಖಲೆಯನ್ನು ಮುರಿದಿದ್ದಾರೆ.

3 / 6
ವಾಸ್ತವವಾಗಿ ವಿಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಸ್ಮೃತಿ ಅರ್ಧಶತಕ ಬಾರಿಸಿದ್ದರು. ಇದು ಸ್ಮೃತಿ ಅವರ ವೃತ್ತಿ ಜೀವನದಲ್ಲಿ 29ನೇ ಅರ್ಧಶತಕವಾಗಿತ್ತು. ಈ ಮೂಲಕ ಸ್ಮೃತಿ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಆಲ್‌ರೌಂಡರ್‌ ಸುಜಿ ಬೇಟ್ಸ್‌ ಅವರ ಅರ್ಧಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು.

4 / 6
ಇದೀಗ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಸ್ಮೃತಿಗೆ ಇದು ಅವರ 30ನೇ ಟಿ20 ಅರ್ಧಶತಕವಾಗಿದೆ. ಈ ಮೂಲಕ ಸ್ಮೃತಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿರುವ ಮೊದಲ ಮಹಿಳಾ ಕ್ರಿಕೆಟರ್ ಎಂಬ ವಿಶ್ವದಾಖಲೆಗೆ ಕೊರಳೊಡ್ಡಿದ್ದಾರೆ.

5 / 6
ಇನ್ನು ಈ ಪಂದ್ಯದಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದಲ್ಲದೆ ಸ್ಮೃತಿ ಸತತ 7 ಎಸೆತಗಳಲ್ಲಿ 7 ಬೌಂಡರಿಗಳನ್ನು ಸಹ ಹೊಡೆದರು. ಭಾರತದ ಇನ್ನಿಂಗ್ಸ್​ನ ಮೂರು ಮತ್ತು ನಾಲ್ಕನೇ ಓವರ್‌ಗಳಲ್ಲಿ ಸತತ 7 ಬೌಂಡರಿ ಹೊಡೆಯುವ ಮೂಲಕ ಸ್ಮೃತಿ ಈ ಸಾಧನೆ ಮಾಡಿದರು.

6 / 6
ತಮ್ಮ ಅರ್ಧಶತಕದ ಇನ್ನಿಂಗ್ಸ್​ನಲ್ಲಿ ಇದುವರೆಗೆ 12 ಬೌಂಡರಿ ಹಾಗೂ 1 ಸಿಕ್ಸರ್ ಸಹ ಸಿಡಿಸಿದ್ದಾರೆ. ಈ 12 ಬೌಂಡರಿಗಳೊಂದಿಗೆ ಇದೀಗ ಸ್ಮೃತಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 500 ಬೌಂಡರಿಗಳನ್ನು ಸಹ ಪೂರೈಸಿದ್ದಾರೆ.