IND vs WI: ಸಿಕ್ಸರ್ಗಳ ಶತಕವೀರ; ಸೂರ್ಯ ಸ್ಫೋಟಕ್ಕೆ ಹಳೆಯ ದಾಖಲೆಗಳೆಲ್ಲ ಉಡೀಸ್..!
Suryakumar Yadav: ಸೂರ್ಯಕುಮಾರ್ ಯಾದವ್ ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್ ಸಿಡಿಸುವ ಮೂಲಕ ತಮ್ಮ ಹಳೆಯ ಫಾರ್ಮ್ ಕಂಡುಕೊಂಡಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.
1 / 10
ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್ ಸಿಡಿಸುವ ಮೂಲಕ ತಮ್ಮ ಹಳೆಯ ಫಾರ್ಮ್ ಕಂಡುಕೊಂಡಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.
2 / 10
ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಸೂರ್ಯ, ಮೂರನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಇನ್ನಿಂಗ್ಸ್‌ನ ಮೂರನೇ ಸಿಕ್ಸರ್ ಸಿಡಿಸುವ ಮೊದಲು 23 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು.
3 / 10
ಈ ಸಿಕ್ಸರ್ ಜೊತೆಗೆ ಸೂರ್ಯ ತಮ್ಮ ಸಿಕ್ಸರ್ಗಳ ಶತಕವನ್ನು ಪೂರೈಸಿದ್ದಲ್ಲದೆ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು. ತಮ್ಮ 49 ಇನ್ನಿಂಗ್ಸ್‌ನಲ್ಲಿ ಸಿಕ್ಸರ್ಗಳ ಶತಕ ಸಿಡಿಸಿದ ಸೂರ್ಯ, ವಿಶ್ವಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎನಿಸಿಕೊಂಡರು.
4 / 10
ತಮ್ಮ 49ನೇ ಟಿ20 ಪಂದ್ಯದಲ್ಲಿ ನೂರನೇ ಸಿಕ್ಸರ್ ಸಿಡಿಸಿದ ಸೂರ್ಯ, ಈ ವಿಚಾರದಲ್ಲಿ ಕ್ರಿಸ್ ಗೇಲ್ರನ್ನು ಸರಿಗಟ್ಟಿದರೆ, ಕೇವಲ 42 ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್ ಸಿಡಿಸಿರುವ ಎವಿನ್ ಲೆವಿಸ್ ನಂತರ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
5 / 10
ಇನ್ನು ಚೆಂಡುಗಳ ಸಂಖ್ಯೆಗೆ ಸಂಬಂಧಿಸಿದಂತೆ, ಸೂರ್ಯ 1007 ಎಸೆತಗಳಲ್ಲಿ ಶತಕದ ಸಿಕ್ಸರ್ ಸಿಡಿಸಿದ ಕಾರಣ ಲೂಯಿಸ್ (789) ಮತ್ತು ಕಾಲಿನ್ ಮುನ್ರೊ (963) ನಂತರ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ಗೇಲ್ (1071) ಇದ್ದಾರೆ
6 / 10
ಇನ್ನು ಭಾರತದ ಪರ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯನ್ನು ನೋಡುವುದಾದರೆ.. ಈ ಪಟ್ಟಿಯಲ್ಲಿ 140 ಇನ್ನಿಂಗ್ಸ್‌ಗಳಲ್ಲಿ 182 ಸಿಕ್ಸರ್ಗಳನ್ನು ಸಿಡಿಸಿರುವ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.
7 / 10
107 ಇನ್ನಿಂಗ್ಸ್‌ಗಳಲ್ಲಿ 117 ಸಿಕ್ಸರ್ ಸಿಡಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
8 / 10
ಮೂರನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ 49 ಇನ್ನಿಂಗ್ಸ್ಗಳಿಂದ 101* ಸಿಕ್ಸರ್ ಸಿಡಿಸಿದ್ದಾರೆ.
9 / 10
68 ಇನ್ನಿಂಗ್ಸ್‌ಗಳಲ್ಲಿ 99 ಸಿಕ್ಸರ್ ಸಿಡಿಸಿರುವ ಕೆಎಲ್ ರಾಹುಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
10 / 10
ಮಾಜಿ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ 51 ಇನ್ನಿಂಗ್ಸ್‌ಗಳಲ್ಲಿ 74 ಸಿಕ್ಸರ್ ಸಿಡಿಸಿ ಐದನೇ ಸ್ಥಾನದಲ್ಲಿದ್ದಾರೆ.