- Kannada News Photo gallery Cricket photos Nicholas Pooran has been fined 15 per cent of his match fee after IND vs WI 2nd T20I
ವೆಸ್ಟ್ ಇಂಡೀಸ್ಗೆ ಗೆಲುವು ತಂದುಕೊಟ್ಟ ನಿಕೋಲಸ್ ಪೂರನ್‌ಗೆ ಬಿತ್ತು ಭಾರೀ ದಂಡ
Nicholas Pooran, IND vs WI T20I: ಐಸಿಸಿ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ನಿಕೋಲಸ್ ಪೂರನ್‌ಗೆ ಈ ದಂಡನೆ ವಿಧಿಸಲಾಗಿದ್ದು, ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವುದನ್ನು ಈ ಕಾನೂನು ಬಿಂಬಿಸುತ್ತದೆ.
Updated on: Aug 08, 2023 | 10:15 AM

ಭಾರತ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 6 ಫೋರ್, 4 ಸಿಕ್ಸರ್ನೊಂದಿಗೆ 67 ರನ್ ಚಚ್ಚಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದುಕೊಟ್ಟ ನಿಕೋಲಸ್ ಪೂರನ್‌ಗೆ ಭಾರೀ ದಂಡ ವಿಧಿಸಲಾಗಿದೆ.

ಗಯಾನಾದಲ್ಲಿ ಭಾರತ ವಿರುದ್ಧದ ಎರಡನೇ ಟಿ20 ಸಂದರ್ಭದ ಐಸಿಸಿ ನೀತಿ ಸಂಹಿತೆಯ 1 ನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ವೆಸ್ಟ್ ಇಂಡೀಸ್‌ನ ವಿಕೆಟ್ ಕೀಪರ್ ನಿಕೋಲಸ್ ಪೂರನ್‌ಗೆ ಪಂದ್ಯದ ಶುಲ್ಕದ 15 ಪ್ರತಿಶತ ದಂಡ ವಿಧಿಸಲಾಗಿದೆ.

ಐಸಿಸಿ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ನಿಕೋಲಸ್ ಪೂರನ್‌ಗೆ ಈ ದಂಡನೆ ವಿಧಿಸಲಾಗಿದ್ದು, ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವುದನ್ನು ಈ ಕಾನೂನು ಬಿಂಬಿಸುತ್ತದೆ.

ಪೂರನ್ ಈ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮತ್ತು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಪ್ರಸ್ತಾಪಿಸಿದ ವಾಗ್ದಂಡನೆಯ ಅನುಮತಿಯನ್ನು ಒಪ್ಪಿಕೊಂಡ ಪರಿಣಾಮ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ. ಇದರ ಜೊತೆಗೆ, ಪೂರನ್ ಅವರ ಈ ನಡತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ, ಇದು 24 ತಿಂಗಳ ಅವಧಿಯಲ್ಲಿ ಇವರ ಮೊದಲ ಅಪರಾಧವಾಗಿದೆ.

ಭಾರತ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ನಿರ್ಧಾರವನ್ನು ಪರಿಶೀಲಿಸಿದ ನಂತರ ಈ ಘಟನೆ ಸಂಭವಿಸಿದೆ. ನಿಕೋಲಸ್ ಪೂರನ್ ಇಲ್ಲಿ ತಪ್ಪೆಸಗಿದ್ದು, ಎಲ್ ಬಿಡಬ್ಲ್ಯು ತೀರ್ಪು ನೀಡದ ಅಂಪೈರ್ ಗಳೊಂದಿಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಐಸಿಸಿ ಈ ಕ್ರಮ ಕೈಗೊಂಡಿದೆ.

ಪ್ರತಿ ಪಂದ್ಯವನ್ನು ಸೂಕ್ಷ್ಮವಾಗಿ ಗಮನಿಸುವ ಐಸಿಸಿ ಆಟಗಾರರು ಅಶಿಸ್ತು ತೋರಿದರೆ ದಂಡ ವಿಧಿಸುತ್ತದೆ. ನೀತಿ ಸಂಹಿತೆ ಲೆವೆಲ್ 1 ನಿಯಮವನ್ನು ಉಲ್ಲಂಘಿಸಿದರೆ ಕನಿಷ್ಠ ದಂಡನೆ ರೂಪದಲ್ಲಿ ಪಂದ್ಯದ ಸಂಭಾವನೆಯ ಶೇ.15ವರೆಗೆ ದಂಡ ವಿಧಿಸಬಹುದು. ಇದರಲ್ಲಿ ಗರಿಷ್ಠ ದಂಡದ ಎಂದರೆ ಶೇ.50 ರಷ್ಟು ಮತ್ತು 1 ಅಥವಾ 2 ಡಿಮೆರಿಟ್ ಶಿಕ್ಷೆ ನೀಡಬಹುದು.

ದ್ವಿತೀಯ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದ ಪರಿಣಾಮ ಭಾರತ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಮೂರೂ ಪಂದ್ಯ ಗೆಲ್ಲಲೇ ಬೇಕಿದೆ. ಈ ಪೈಕಿ ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ.

ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ವೆಸ್ಟ್ ಇಂಡೀಸ್ ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ.
