Rinku Singh: ಟಿ20 ಸರಣಿಗೆ ರಿಂಕು ಸಿಂಗ್ ಆಯ್ಕೆ ಆಗದಿರಲು ಕಾರಣ ಬಹಿರಂಗ: ಯಾಕೆ ಗೊತ್ತೇ?
IND vs WI T20 Series: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟ ಮಾಡಿದಾಗ ಅದರಲ್ಲಿ ರಿಂಕು ಸಿಂಗ್ ಹೆಸರು ಇರಲಿಲ್ಲ. ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನ ತೋರಿ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ರಿಂಕು ಆಯ್ಕೆ ಆಗದೆ ಇದ್ದಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.
1 / 7
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ದಿನಗಣನೆ ಆರಂಭವಾಗಿದೆ. ಜುಲೈ 12 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
2 / 7
ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಮೂರೂ ಮಾದರಿಯ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟ ಮಾಡಿದೆ. ಎರಡು ದಿನಗಳ ಹಿಂದೆಯಷ್ಟೆ ಟಿ20 ಸರಣಿಗೆ ತಂಡವನ್ನು ಹೆಸರಿಸಲಾಗಿತ್ತು.
3 / 7
ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟ ಮಾಡಿದಾಗ ಅದರಲ್ಲಿ ರಿಂಕು ಸಿಂಗ್ ಹೆಸರು ಇರಲಿಲ್ಲ. ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನ ತೋರಿ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ರಿಂಕು ಆಯ್ಕೆ ಆಗದೆ ಇದ್ದಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.
4 / 7
ಆದರೆ, ಇದೀಗ ರಿಂಕು ಯಾಕೆ ಆಯ್ಕೆ ಆಗಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಟೀಮ್ ಇಂಡಿಯಾದಲ್ಲಿ ಎಡಗೈ ಬ್ಯಾಟರ್ಗಳ ದಂಡೇ ಇದೆ. ರಿಂಕು ಸಿಂಗ್ ಕೂಡ ಲೆಫ್ಟ್-ಹ್ಯಾಂಡ್ ಬ್ಯಾಟರ್. ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಮಾತ್ರವಲ್ಲದೆ ತಿಲಕ್ ವರ್ಮಾ ಕೂಡ ಎಡಗೈ ಬ್ಯಾಟರ್ ಆಗಿದ್ದಾರೆ.
5 / 7
ಇಶಾನ್ ಕಿಶನ್ ಹಾಗೂ ಯಶಸ್ವಿ ಜೈಸ್ವಾಲ್ ಆಯ್ಕೆ ಮೊದಲೇ ಖಚಿತವಾಗಿತ್ತು. ಆದರೆ, ತಿಲಕ್ ವರ್ಮಾ ಹಾಗೂ ರಿಂಕು ನಡುವೆ ಯಾರಿಗೆ ಮಣೆ ಹಾಕಬೇಕು ಎಂಬುದನ್ನು ನೋಡಿದಾಗ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಸತತ ಉತ್ತಮ ಪ್ರದರ್ಶನ ತೋರಿದ ತಿಲಕ್ಗೆ ಅವಕಾಶ ನೀಡಲಾಗಿದೆ.
6 / 7
ರಿಂಕು ಸಿಂಗ್ ಐಪಿಎಲ್ 2023 ರಲ್ಲಿ ಆಡಿದ 14 ಪಂದ್ಯಗಳಲ್ಲಿ 474 ರನ್ ಗಳಿಸಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅದರಲ್ಲೂ 20ನೇ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು.
7 / 7
ಭಾರತ ಟಿ20 ತಂಡ : ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ನಾಯಕ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.