
ODI ಮುಗಿದಿದೆ. ಈಗ ಟಿ20 ಚಮತ್ಕಾರ ಶುರುವಾಗಲಿದೆ. ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಪಂದ್ಯ. ಈ ಪಂದ್ಯವಷ್ಟೇ ಅಲ್ಲ, ಇಡೀ ಸರಣಿಯಲ್ಲಿ ಟೀಂ ಇಂಡಿಯಾದ ಮೇಲುಗೈ ಸಾಧಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳು ಈಡನ್ ಗಾರ್ಡನ್‌ನಲ್ಲಿ ನಡೆಯಬೇಕಿರುವುದು ಇದಕ್ಕೆ ದೊಡ್ಡ ಕಾರಣ. ಅಲ್ಲದೆ, ಭಾರತ ಸರಣಿ ಗೆಲ್ಲುವುದನ್ನು ಸಾಭೀತು ಪಡಿಸಲು ಒಟ್ಟು 5 ಕಾರಣಗಳಿದ್ದು, ಟಿ20 ಸರಣಿಯಲ್ಲಿ ಭಾರತ ಗೆಲುವು ಖಚಿತವಾಗಿದೆ.

ಮೊದಲ ಕಾರಣವೆಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದುವರೆಗೆ ನಡೆದ 17 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, 10 ಭಾರತ ಗೆದ್ದಿದೆ, 6 ವೆಸ್ಟ್ ಇಂಡೀಸ್, 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ಎರಡನೆಯ ದೊಡ್ಡ ಕಾರಣವೆಂದರೆ ಈಡನ್ ಗಾರ್ಡನ್ಸ್‌ನಲ್ಲಿನ ಪ್ರದರ್ಶನ. ಇದಕ್ಕೂ ಮುನ್ನ ಈಡನ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಕೇವಲ 1 ಟಿ20 ಪಂದ್ಯ ನಡೆದಿದ್ದು, ಇದರಲ್ಲಿ ಭಾರತ ಗೆಲುವು ಸಾಧಿಸಿತ್ತು.

ಭಾರತ ಮತ್ತು ವೆಸ್ಟ್ ಇಂಡೀಸ್ ಅನ್ನು ಶ್ರೇಯಾಂಕದಲ್ಲಿ ತೂಗಿದರೂ, ಆತಿಥೇಯ ತಂಡವು ಮೇಲುಗೈ ಸಾಧಿಸಿದೆ. ಭಾರತ ತಂಡ ಟಿ20 ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ವೆಸ್ಟ್ ಇಂಡೀಸ್ 7 ನೇ ಸ್ಥಾನದಲ್ಲಿದೆ.

ಜುಲೈ 2017 ಮತ್ತು ಡಿಸೆಂಬರ್ 2019 ರ ನಡುವೆ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಒಟ್ಟು 10 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ ಭಾರತ 8 ರಲ್ಲಿ ಗೆದ್ದಿದೆ. ಅಂದರೆ, ಕಳೆದ 10 ಪಂದ್ಯಗಳಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಪಾರುಪತ್ಯ ಸಾಧಿಸಿದೆ.

ರೋಹಿತ್ ಶರ್ಮಾ ಅವರ ನಾಯಕತ್ವದ ಅಂಕಿಅಂಶಗಳಿಗೆ ವೆಸ್ಟ್ ಇಂಡೀಸ್ ಕೂಡ ಭಯಪಡಬೇಕು. ರೋಹಿತ್ 22 ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ 18 ಪಂದ್ಯಗಳನ್ನು ಗೆದ್ದು, 4 ರಲ್ಲಿ ಸೋತಿದ್ದಾರೆ. ನಾಯಕ ರೋಹಿತ್ ಗೆಲುವಿನ ಶೇಕಡಾವಾರು 81.81 ಆಗಿದೆ, ಇದು ಕನಿಷ್ಠ 5 T20 ಅಥವಾ ಅದಕ್ಕಿಂತ ಹೆಚ್ಚು ನಾಯಕತ್ವ ವಹಿಸಿರುವ ಭಾರತೀಯ ನಾಯಕರಲ್ಲಿ ಅತ್ಯಧಿಕವಾಗಿದೆ.