IND vs PAK: ಟಾಸ್ ಗೆದ್ದವನೇ ಬಾಸ್; ಫೈನಲ್ ಪಂದ್ಯಕ್ಕೆ ಮಳೆಕಾಟ? ಪಿಚ್ ರಿಪೋರ್ಟ್​ ಹೇಳುವುದೇನು? ಇಲ್ಲಿದೆ ವಿವರ

| Updated By: ಪೃಥ್ವಿಶಂಕರ

Updated on: Jul 23, 2023 | 10:47 AM

India A vs Pakistan A Emerging Teams Asia Cup 2023 final: ಚಾಂಪಿಯನ್​ ಪಟ್ಟಕ್ಕಾಗಿ ಸೆಣಸಾಡಲು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಸಿದ್ಧವಾಗಿವೆ.

1 / 7
ಎಸಿಸಿ ಉದಯೋನ್ಮುಖ ತಂಡಗಳ ಏಷ್ಯಾಕಪ್ ಫೈನಲ್ ಪಂದ್ಯ ಇಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುತ್ತಿದೆ. ಚಾಂಪಿಯನ್​ ಪಟ್ಟಕ್ಕಾಗಿ ಸೆಣಸಾಡಲು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಸಿದ್ಧವಾಗಿವೆ.

2 / 7
ಲೀಗ್ ಹಂತದಲ್ಲಿ ಟೀಂ ಇಂಡಿಯಾ ಎದುರು 8 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ, ಫೈನಲ್ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಇತ್ತ ಬರೋಬ್ಬರಿ 10 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದೆ.

3 / 7
ಯುವ ಪಡೆಯನ್ನೇ ತುಂಬಿಕೊಂಡಿರುವ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿ ಕಾಣುತ್ತಿದೆ. ಇತ್ತ ಅನುಭವಿಗಳ ಮಿಶ್ರಣದಿಂದ ಕೂಡಿರುವ ಪಾಕ್ ಪಡೆಗೆ ಟಾಪ್ ಆರ್ಡರ್ ಕೈಹಿಡಿಯಬೇಕಿದೆ.

4 / 7
ಇನ್ನು ಉಭಯ ತಂಡಗಳ ಫೈನಲ್ ಫೈಟ್​ಗೆ ಆತಿಥ್ಯವಹಿಸುತ್ತಿರುವ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಸ್ವಲ್ಪ ಅನುಕೂಲವಾಗಿದೆ. ಹೀಗಾಗಿ ಉಭಯ ತಂಡಗಳು ಕ್ವಾಲಿಟಿ ಸ್ಪಿನ್ನರ್‌ಗಳನ್ನು ಹೊಂದಿದ್ದು, ಜಿದ್ದಾಜಿದ್ದಿನ ಕಾಳಗ ನಿರೀಕ್ಷಿಸಬಹುದಾಗಿದೆ. ಈ ಮೈದಾನದಲ್ಲಿ ಸರಾಸರಿ ಸ್ಕೋರ್ 240-250 ಆಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡವು 250 ಅಥವಾ ಅದಕ್ಕಿಂತ ಹೆಚ್ಚಿನ ರನ್ ಬಾರಿಸಿದರೆ, ಪಂದ್ಯದಲ್ಲಿ ಮೇಲುಗೈ ಸಾಧಿಸಬಹುದು.

5 / 7
ಪಂದ್ಯದ ದಿನದಂದು ಮುಂಜಾನೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಆದಾಗ್ಯೂ, ಅಕ್ಯುವೆದರ್ ಪ್ರಕಾರ ಸಂಜೆ ವೇಳೆಗೆ ಶೇಕಡಾ 100 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಪಂದ್ಯ ರದ್ದಾಗುವ ಸಾಧ್ಯತೆಗಳಿವೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ.

6 / 7
ಭಾರತ ಎ ತಂಡ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್(ನಾಯಕ), ನಿಶಾಂತ್ ಸಿಂಧು, ರಿಯಾನ್ ಪರಾಗ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ಮಾನವ್ ಸುತಾರ್, ಆರ್ ಎಸ್ ಹಂಗರ್ಗೇಕರ್, ಯುವರಾಜ್ ಸಿಂಗ್ ದೋಡಿಯಾ

7 / 7
ಪಾಕಿಸ್ತಾನ ಎ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಒಮೈರ್ ಯೂಸುಫ್, ತಯ್ಯಬ್ ತಾಹಿರ್, ಖಾಸಿಮ್ ಅಕ್ರಮ್, ಮೊಹಮ್ಮದ್ ಹ್ಯಾರಿಸ್(ನಾಯಕ), ಮುಬಾಸಿರ್ ಖಾನ್, ಅಮದ್ ಬಟ್, ಮೊಹಮ್ಮದ್ ವಾಸಿಮ್ ಜೂನಿಯರ್, ಸುಫಿಯಾನ್ ಮುಖೀಮ್, ಅರ್ಷದ್ ಇಕ್ಬಾಲ್

Published On - 10:46 am, Sun, 23 July 23