Asia Cup 2025:​ ಭಾರತ ತಂಡದಲ್ಲಿ ಮೂವರಿಗಿಲ್ಲ ಚಾನ್ಸ್​..!

Updated on: Aug 12, 2025 | 10:55 AM

India Asia Cup 2025 Squad: ಏಷ್ಯಾಕಪ್​ಗಾಗಿ ಶೀಘ್ರದಲ್ಲೇ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ. ಈ ತಂಡದಲ್ಲಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಮೂವರು ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ಅಂದರೆ ಈ ಹಿಂದೆ ಭಾರತ ಟಿ20 ತಂಡವನ್ನು ಪ್ರತಿನಿಧಿಸಿದ್ದ ಮೂವರು ಆಟಗಾರರು ಏಷ್ಯಾಕಪ್​ಗೆ ಆಯ್ಕೆಯಾಗುವುದಿಲ್ಲ.

1 / 5
Asia Cup 2025: ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನಕ್ಕಾಗಿ ಮುಂದಿನ ವಾರ ಟೀಮ್ ಇಂಡಿಯಾವನ್ನು ಪ್ರಕಟಿಸಲಿದ್ದಾರೆ. 15 ಸದಸ್ಯರ ಈ ತಂಡದಲ್ಲಿ ಮೂವರು ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ಅವರೆಂದರೆ...

Asia Cup 2025: ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನಕ್ಕಾಗಿ ಮುಂದಿನ ವಾರ ಟೀಮ್ ಇಂಡಿಯಾವನ್ನು ಪ್ರಕಟಿಸಲಿದ್ದಾರೆ. 15 ಸದಸ್ಯರ ಈ ತಂಡದಲ್ಲಿ ಮೂವರು ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ಅವರೆಂದರೆ...

2 / 5

ಯಶಸ್ವಿ ಜೈಸ್ವಾಲ್: ಟೀಮ್ ಇಂಡಿಯಾದಲ್ಲಿ ಆರಂಭಿಕ ದಾಂಡಿಗರ ದಂಡೇ ಇದೆ. ಏಷ್ಯಾಕಪ್​ ತಂಡದಲ್ಲಿ ಆರಂಭಿಕರಾಗಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಶುಭ್​ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಅವರನ್ನು ಏಷ್ಯಾಕಪ್​ಗೆ ಪರಿಗಣಿಸುವುದಿಲ್ಲ ಎಂದು ತಿಳಿದು ಬಂದಿದೆ.

3 / 5

ರಿಷಭ್ ಪಂತ್: ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಪಂದ್ಯದ ವೇಳೆ ಗಾಯಗೊಂಡಿರುವ ರಿಷಭ್ ಪಂತ್ ಅವರನ್ನು ಸಹ ಏಷ್ಯಾಕಪ್​ನಿಂದ ಹೊರಗಿಡಲು ಬಿಸಿಸಿಐ ಚಿಂತಿಸಿದೆ. ಪಂತ್ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಲು ಸಮಯವಕಾಶ ಬೇಕಿದ್ದು, ಹೀಗಾಗಿ ರಿಷಭ್ ಅವರ ಬದಲಿಗೆ ಮತ್ತೋರ್ವ ವಿಕೆಟ್ ಕೀಪರ್​ಗೆ ಚಾನ್ಸ್ ನೀಡುವ ಸಾಧ್ಯತೆಯಿದೆ.

4 / 5

ಕೆಎಲ್ ರಾಹುಲ್: ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳ ಖಾಯಂ ಸದಸ್ಯರಾಗಿರುವ ಕೆಎಲ್ ರಾಹುಲ್ ಅವರನ್ನು ಸಹ ಏಷ್ಯಾಕಪ್​ಗೆ ಪರಿಗಣಿಸುವುದಿಲ್ಲ ಎಂದು ತಿಳಿದು ಬಂದಿದೆ. ಮೊದಲೇ ಹೇಳಿದಂತೆ ಆರಂಭಿಕರಾಗಿ ತಂಡದಲ್ಲಿ ಮೂವರು ಆಟಗಾರರಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲೂ ಬಲಿಷ್ಠ ದಾಂಡಿಗರ ದಂಡೇ ಇದೆ. ಹೀಗಾಗಿ ಕೆಎಲ್ ರಾಹುಲ್ ಅವರನ್ನು ಸಹ ಏಷ್ಯಾಕಪ್​ಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

5 / 5

ಇನ್ನು ರಿಷಭ್ ಪಂತ್ ಹೊರಗುಳಿದರೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿರ್ವಹಿಸಲಿದ್ದಾರೆ. ಇನ್ನು 2ನೇ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಅಥವಾ ಜಿತೇಶ್ ಶರ್ಮಾ ಆಯ್ಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿಯ ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಪರ ಯುವ ದಾಂಡಿಗರ ದಂಡೇ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

Loading...
Unable to load recommendations.
Follow Us