WTC Final 2023: ಭಾರತ ಗೆಲ್ಲಲು ಸಾಧ್ಯವೇ ಇಲ್ಲ: ರಿಕಿ ಪಾಂಟಿಂಗ್
TV9 Web | Updated By: ಝಾಹಿರ್ ಯೂಸುಫ್
Updated on:
Jun 08, 2023 | 11:23 PM
WTC Final 2023: ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. 15 ರನ್ಗಳಿಸಿ ರೋಹಿತ್ ಶರ್ಮಾ ಔಟಾದರೆ, 13 ರನ್ಗಳಿಸಿ ಶುಭ್ಮನ್ ಗಿಲ್ ವಿಕೆಟ್ ಒಪ್ಪಿಸಿದರು.
1 / 6
WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು.
2 / 6
ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (163) ಹಾಗೂ ಸ್ಟೀವ್ ಸ್ಮಿತ್ (121) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 469 ರನ್ಗಳಿಸಿ ಆಲೌಟ್ ಆಯಿತು.
3 / 6
ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. 15 ರನ್ಗಳಿಸಿ ರೋಹಿತ್ ಶರ್ಮಾ ಔಟಾದರೆ, 13 ರನ್ಗಳಿಸಿ ಶುಭ್ಮನ್ ಗಿಲ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಔಟಾದರು.
4 / 6
ಇತ್ತ ಟೀಮ್ ಇಂಡಿಯಾ ಆರಂಭಿಕ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದಂತೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಮಾಜಿ ನಾಯಕ ರಿಕಿ ಪಾಂಟಿಂಗ್. ಈ ಬಗ್ಗೆ ಮಾತನಾಡಿದ ಪಾಂಟಿಂಗ್, ಇಂತಹ ಪರಿಸ್ಥಿತಿಯಿಂದ ಕಂಬ್ಯಾಕ್ ಮಾಡಿ ಭಾರತ ಗೆಲ್ಲಲು ಸಾಧ್ಯವೇ ಇಲ್ಲ. ಇದೀಗ ಇಡೀ ಪಂದ್ಯ ಆಸ್ಟ್ರೇಲಿಯಾ ತೆಕ್ಕೆಗೆ ಜಾರಿದೆ ಎಂದು ಅಭಿಪ್ರಾಯಪಟ್ಟರು.
5 / 6
ಈಗಾಗಲೇ ಭಾರತ ತಂಡವು ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡಿದೆ. ಇಲ್ಲಿಂದ ಕಂಬ್ಯಾಕ್ ಮಾಡಿ ಗೆಲ್ಲುವ ಅವಕಾಶವಿಲ್ಲ. ಅತ್ತ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ ಗೆಲ್ಲಲಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
6 / 6
ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು 5 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿದೆ. ಅಜಿಂಕ್ಯ ರಹಾನೆ (29) ಹಾಗೂ ಶ್ರೀಕರ್ ಭರತ್ (5) ಕ್ರೀಸ್ನಲ್ಲಿದ್ದಾರೆ.