Twitter Account Hacked: ಮಾಜಿ ಆರ್ಸಿಬಿ ಆಟಗಾರನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್..!
Twitter Account Hacked: ಟೀಂ ಇಂಡಿಯಾದ ಯುವ ಕ್ರಿಕೆಟಿಗ ಹಾಗೂ ಆರ್ಸಿಬಿ ತಂಡದ ಮಾಜಿ ಆಟಗಾರ ವಾಷಿಂಗ್ಟನ್ ಸುಂದರ್ ಅವರ ಅಧಿಕೃತ ಟ್ವಿಟರ್ ಖಾತೆ ಸೋಮವಾರ ಬೆಳಗ್ಗೆ ಹ್ಯಾಕ್ ಆಗಿದೆ ಎಂದು ವರದಿಯಾಗಿದೆ.
1 / 6
ಟೀಂ ಇಂಡಿಯಾದ ಯುವ ಕ್ರಿಕೆಟಿಗ ಹಾಗೂ ಆರ್ಸಿಬಿ ತಂಡದ ಮಾಜಿ ಆಟಗಾರ ವಾಷಿಂಗ್ಟನ್ ಸುಂದರ್ ಅವರ ಅಧಿಕೃತ ಟ್ವಿಟರ್ ಖಾತೆ ಸೋಮವಾರ ಬೆಳಗ್ಗೆ ಹ್ಯಾಕ್ ಆಗಿದೆ ಎಂದು ವರದಿಯಾಗಿದೆ.
2 / 6
ವಾಷಿಂಗ್ಟನ್ ಸುಂದರ್ ಬಳಸುತ್ತಿರುವ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಇದರಲ್ಲಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಮಾಹಿತಿ ಹಾಗೂ ಅದರ ಲಿಂಕ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
3 / 6
ಹ್ಯಾಕ್ ಮಾಡಿದ ಬಳಿಕ ಇದುವರೆಗೆ ವಾಷಿಂಗ್ಟನ್ ಸುಂದರ್ ಅವರ ಖಾತೆಯಿಂದ 3 ಪೋಸ್ಟ್‌ಗಳನ್ನು ಮಾಡಲಾಗಿದೆ. ಇದೀಗ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಖಚಿತವಾದ ಬಳಿಕ ಸುಂದರ್ ಅವರ ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳನ್ನು ನಿರ್ಬಂಧಿಸಲಾಗಿದೆ.
4 / 6
ಕ್ರಿಕೆಟ್ ಸಂಬಂಧಿತ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಹ್ಯಾಂಡಲ್ ಅನ್ನು 2021 ರಲ್ಲಿ ಒಮ್ಮೆ ಮತ್ತು ಇತ್ತೀಚೆಗೆ ಈ ವರ್ಷದ ಜನವರಿಯಲ್ಲಿ ಎರಡು ಬಾರಿ ಹ್ಯಾಕ್ ಮಾಡಲಾಗಿತ್ತು.
5 / 6
ಹಾಗೆಯೇ 2022 ರಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಅದರಲ್ಲಿ ಬಿಟ್‌ಕಾಯಿನ್ ಬಗ್ಗೆ ಮಾಹಿತಿ ನೀಡುವ ಲಿಂಗ್ಗಳನ್ನು ಅಪ್ಡೇಟ್ ಮಾಡಿದ್ದರು.
6 / 6
ಇನ್ನು ವಾಷಿಂಗ್ಟನ್ ಸುಂದರ್ ಅವರ ವೃತ್ತಿಜೀವನದ ಬಗ್ಗೆ ಹೇಳಬೇಕೆಂದರೆ ಸದ್ಯ ಸನ್ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುತ್ತಿರುವ ಸುಂದರ್, ಮಂಡಿರಜ್ಜು ಗಾಯದಿಂದಾಗಿ ಈ ಬಾರಿಯ ಐಪಿಎಲ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ ಆಡಿದ ಕೇವಲ ಏಳು ಪಂದ್ಯಗಳಲ್ಲಿ 8.26 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಸುಂದರ್ ಕೇವಲ ಮೂರು ವಿಕೆಟ್ಗಳನ್ನು ಮಾತ್ರ ಪಡೆದರು. ಇನ್ನು ಬ್ಯಾಟಿಂಗ್ನಲ್ಲಿ 15 ಸರಾಸರಿಯಲ್ಲಿ 60 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು.