Virender Sehwag: ಭಾರತದ ಗೆಲುವಿನ ಬೆನ್ನಲ್ಲೇ ಪ್ರಧಾನಿ ಮೋದಿ ಫೋಟೋ ಹಂಚಿಕೊಂಡು ಕಾಲೆಳೆದ ಸೆಹ್ವಾಗ್

| Updated By: ಝಾಹಿರ್ ಯೂಸುಫ್

Updated on: Sep 07, 2021 | 5:04 PM

India vs England Test: ಸದ್ಯ ಇಂಗ್ಲೆಂಡ್​ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದ್ದು, ಒಂದು ಪಂದ್ಯ ಮಾತ್ರ ಉಳಿದಿದೆ.

1 / 5
ಲೀಡ್ಸ್ ಟೆಸ್ಟ್ (ಭಾರತ vs ಇಂಗ್ಲೆಂಡ್, 4 ನೇ ಟೆಸ್ಟ್) ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್​ ವಿರುದ್ದ ಪುಟಿದೇಳಿದೆ.  ಓವಲ್ ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯವನ್ನು 157 ರನ್​ಗಳಿಂದ ಜಯಿಸುವ ಮೂಲಕ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್ ಹಿನ್ನಡೆ ಅನುಭವಿಸಿದ್ದ, ಭಾರತ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.

2 / 5
ಕೂ ಆಪ್​ಗೆ ಎಂಟ್ರಿಕೊಟ್ಟ ವೀರೇಂದ್ರ ಸೆಹ್ವಾಗ್

ಕೂ ಆಪ್​ಗೆ ಎಂಟ್ರಿಕೊಟ್ಟ ವೀರೇಂದ್ರ ಸೆಹ್ವಾಗ್

3 / 5
ಆದರೆ ಸೆಹ್ವಾಗ್ ವಿಭಿನ್ನವಾಗಿ ಅಭಿನಂದಿಸಿರುವುದು ವಿಶೇಷ. ಅದು ಕೂಡ ಟೀಕಾಗಾರರಿಗೆ ಉತ್ತರ ನೀಡುವ ಮೂಲಕ ಎಂಬುದು ಮತ್ತೊಂದು ವಿಶೇಷ. ಹೌದು, ಇಂಗ್ಲೆಂಡ್​ ವಿರುದ್ದ ಭಾರತ ಗೆಲ್ಲುತ್ತಿದ್ದಂತೆ ವೀರು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ- ನೀವು ಅಳುವುದನ್ನು ನಿಲ್ಲಿಸಿ ಎಂದು ಬರೆದಿದ್ದು, ಈ ಮೂಲಕ ಇಂಗ್ಲೆಂಡ್ ತಂಡವನ್ನು ಕಾಲೆಳೆದಿದ್ದಾರೆ. ಅಷ್ಟೇ ಅಲ್ಲದೆ ಈ ತಂಡವು ಟರ್ನಿಂಗ್ ಪಿಚ್ ನಲ್ಲಿ ಮಾತ್ರ ಗೆಲ್ಲಬಹುದು ಎಂದು ಭಾವಿಸುವವರಿಗೆ  ಟೀಮ್ ಇಂಡಿಯಾ ತಕ್ಕ ಉತ್ತರ ನೀಡಿದೆ ಎಂದು ಟೀಕಾಗಾರರನ್ನು ಸೆಹ್ವಾಗ್ ಕುಟುಕಿದ್ದಾರೆ. ವೀರು ಅವರ ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

4 / 5
 ಸದ್ಯ ಇಂಗ್ಲೆಂಡ್​ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದ್ದು, ಒಂದು ಪಂದ್ಯ ಮಾತ್ರ ಉಳಿದಿದೆ. ಮ್ಯಾಂಚೆಸ್ಟರ್​ನಲ್ಲಿ ಸೆಪ್ಟೆಂಬರ್ 10 ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಸರಣಿ ಭಾರತದ ವಶವಾಗಲಿದೆ.

5 / 5
ಸಂಕ್ಷಿಪ್ತ ಸ್ಕೋರ್ ವಿವರ: ಭಾರತ ಮೊದಲ ಇನ್ನಿಂಗ್ಸ್: 191/10 (61.3) (ಶಾರ್ದೂಲ್ ಠಾಕೂರ್ 57).  ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 290/10 (84) (ಓಲಿ ಪೋಪ್ 81, ಉಮೇಶ್ ಯಾದವ್ 76/3).  ಭಾರತ ಎರಡನೇ ಇನ್ನಿಂಗ್ಸ್: 466/10 (148.2) (ರೋಹಿತ್ ಶರ್ಮಾ 127, ಶಾರ್ದೂಲ್ ಠಾಕೂರ್ 60).  ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 210/10 (92.2) (ಹಸೀಬ್ ಹಮೀದ್ 63, ಉಮೇಶ್ ಯಾದವ್ 60/3, ಜಸ್​ಪ್ರೀತ್ ಬುಮ್ರಾ 27/2)