- Kannada News Photo gallery Cricket photos India vs England Highlights 4th Test India beat England by 157 runs at The Oval Photos
IND vs ENG: ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ ನೋಡಿ
ಲಂಡನ್ನ ಓವಲ್ ಕ್ರೀಡಾಂಗಣದಲ್ಲಿ ದಾಖಲೆ ಬರೆದ ಕೊಹ್ಲಿ (Virat Kohli) ಪಡೆ 157 ರನ್ಗಳ ಭರ್ಜರಿ ಜಯ ಸಾಧಿಸಿತು. 50 ವರ್ಷಗಳ ಬಳಿಕ ಓವಲ್ (Oval) ಕ್ರೀಡಾಂಗಣದಲ್ಲಿ ಭಾರತಕ್ಕೆ ಒಲಿದ ಟೆಸ್ಟ್ ಗೆಲುವು ಇದಾಗಿದೆ.
Updated on: Sep 07, 2021 | 9:02 AM

ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಅಮೋಘ ಗೆಲುವು ಕಂಡು ದಾಖಲೆ ಬರೆದಿದೆ. 157 ರನ್ಗಳ ಭರ್ಜರಿ ಜಯದೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂಕಗಳ ಮುನ್ನಡೆ ಪಡೆದುಕೊಂಡಿದೆ.

ಪಂದ್ಯ ಆರಂಭವಾಗುವುದಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸೂಚಿಸಸುತ್ತಿರುವ ಟೀಮ್ ಇಂಡಿಯಾ ಆಟಗಾರರು.

50 ವರ್ಷಗಳ ಬಳಿಕ ಭಾರತ ತಂಡವು (Team India) ಓವಲ್ ಮೈದಾನದಲ್ಲಿ ಗೆಲುವಿನ ರುಚಿ ನೋಡಿದೆ. ಈ ಮೈದಾನದಲ್ಲಿ ಕೊನೆಯ ಬಾರಿ ಭಾರತ ಗೆದ್ದಿದ್ದು 1971 ರಲ್ಲಿ.

ಚೆಂಡನ್ನು ಬೌಂಡರಿಗೆ ಅಟ್ಟುತ್ತಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ವೈಖರಿ.

ಶಾರ್ದೂಲ್ ಠಾಕೂರ್ 4ನೇ ಟೆಸ್ಟ್ನ ಎರಡೂ ಇನ್ನಿಂಗ್ಸ್ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದರು.

ಭರ್ಜರಿ ಶತಕ ಸಿಡಿಸಿ ತಂಡಕ್ಕೆ ನೆರವಾದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಗೆಲುವಿಗೆ 368 ರನ್ನುಗಳ ಕಠಿನ ಗುರಿ ಪಡೆದಿದ್ದ ಇಂಗ್ಲೆಂಡ್, ಲಾರ್ಡ್ಸ್ ಟೆಸ್ಟ್ ರೀತಿಯಲ್ಲೇ ನಾಟಕೀಯ ಕುಸಿತ ಅನುಭವಿಸಿ 210 ರನ್ಗೆ ಸರ್ವಪತನ ಕಂಡಿತು.

ಗೆಲುವಿನ ಸಂಭ್ರಮದಲ್ಲಿ ಟೀಮ್ ಇಂಡಿಯಾ ಆಟಗಾರರು.

ಪಂದ್ಯವನ್ನು ಕೈಚೆಲ್ಲಿದ ವೇಳೆ ಬೇಸರದಲ್ಲಿರುವ ಇಂಗ್ಲೆಂಡ್ ನಾಯಕ ಜೋ ರೂಟ್.
