ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್

ಬ್ಯಾಪ್​ಚೈಲ್ಡ್ ಕ್ರಿಕೆಟ್​ ಕ್ಲಬ್ ಹಾಗೂ ಬೊರ್ಸ್ಟಲ್ ಕ್ರಿಕೆಟ್ ಕ್ಲಬ್ ನಡುವಣ ಏಕದಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ಮೂಡಿಬಂದಿದೆ. ಟಾಸ್ ಗೆದ್ದ ಬ್ಯಾಪ್‌ಚೈಲ್ಡ್ ಕ್ಲಬ್ ತಂಡವು 46.1 ಓವರ್‌ಗಳಲ್ಲಿ 165 ರನ್ ಗಳಿಸಿ ಆಲೌಟ್ ಆಯಿತು.

1/5
ಕ್ರಿಕೆಟ್ ಅಂಗಳದಲ್ಲಿ ನೀವು ನಾನಾ ರೀತಿಯ ದಾಖಲೆಗಳನ್ನು ನೋಡಿರುತ್ತೀರಿ. ಅದರಲ್ಲಿ ಮುಖ್ಯವಾಗಿ ಬ್ಯಾಟ್ಸ್​ಮನ್​ಗಳ ವೇಗದ ಶತಕ ಹಾಗೂ ಬೌಲರುಗಳ ಹ್ಯಾಟ್ರಿಕ್ ವಿಕೆಟ್ ಹೆಚ್ಚು ಗಮನ ಸೆಳೆಯುತ್ತದೆ. ಆದರೆ ಇಲ್ಲೊಬ್ಬರು ಬೌಲರ್ ಬರೀ ಓವರ್​ ಮೂಲಕವೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

2/5
ಹೌದು, ಕ್ರಿಕೆಟ್ ಇತಿಹಾಸದಲ್ಲಿ 10 ಓವರ್​ಗಳನ್ನು ಮೇಡನ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ ಕೇಶ ರಾಜದುರೈ. ಲಂಡನ್​ನಲ್ಲಿ ನಡೆಯುತ್ತಿರುವ ಕ್ಲಬ್ ಕ್ರಿಕೆಟ್​ ಲೀಗ್​ ಇಂತಹದೊಂದು ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.

3/5
ಬ್ಯಾಪ್​ಚೈಲ್ಡ್ ಕ್ರಿಕೆಟ್​ ಕ್ಲಬ್ ಹಾಗೂ ಬೊರ್ಸ್ಟಲ್ ಕ್ರಿಕೆಟ್ ಕ್ಲಬ್ ನಡುವಣ ಏಕದಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ಮೂಡಿಬಂದಿದೆ.  ಟಾಸ್ ಗೆದ್ದ ಬ್ಯಾಪ್‌ಚೈಲ್ಡ್ ಕ್ಲಬ್ ತಂಡವು 46.1 ಓವರ್‌ಗಳಲ್ಲಿ 165 ರನ್ ಗಳಿಸಿ ಆಲೌಟ್ ಆಯಿತು. 108 ಎಸೆತಗಳನ್ನು ಎದುರಿಸಿದ ರಿಕಿ ಡೇಲ್ 47 ರನ್​ ಬಾರಿಸಿದರೆ, ಕ್ಯಾಲಮ್ ಲಿಯರಿ 43 ರನ್ ಗಳಿಸಿದರು. ಬೊರ್ಸ್ಟಲ್ ತಂಡದ ಐವರು ಬೌಲರುಗಳು ತಲಾ 2 ವಿಕೆಟ್ ಪಡೆದು ಮಿಂಚಿದರು.

4/5
166 ರನ್​ಗಳ ಗುರಿಯನ್ನು ಬೆನ್ನತ್ತಿದ ಬೊರ್ಸ್ಟಲ್ ಮೊದಲ ವಿಕೆಟ್​ಗೆ 56 ರನ್​ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಯಾವಾಗ ಕೇಶ ರಾಜದುರೈ ದಾಳಿಗಿಳಿದರೋ ಇಡೀ ಪಂದ್ಯದ ಚಿತ್ರಣ ಬದಲಾಯಿತು. ತಮ್ಮ ಆಫ್​ ಸ್ಪಿನ್ ಮೋಡಿ ಮೂಲಕ ಬ್ಯಾಟ್ಸ್​ಮನ್​ಗಳನ್ನು ಇಕ್ಕಟಿಗೆ ಸಿಲುಕಿಸಿದ ರಾಜದುರೈ ಒಂದೇ ಒಂದು ರನ್ ನೀಡಲಿಲ್ಲ.

5/5
ಅದರಂತೆ ಅಂತಿಮವಾಗಿ ಕೇಶ ರಾಜದುರೈ ತಮ್ಮ 10 ಓವರ್‌ಗಳನ್ನು ಪೂರೈಸಿದರು. ಆದರೆ ಒಂದೇ ಒಂದು ರನ್ ನೀಡಿರಲಿಲ್ಲ ಎಂಬುದು ಇಲ್ಲಿ ವಿಶೇಷ. ಅಂದರೆ, 60 ಎಸೆತಗಳಲ್ಲಿ ಬ್ಯಾಟ್ಸ್‌ಮನ್  ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇನ್ನು 10 ಮೇಡನ್ ಓವರ್ ನಡುವೆ 2 ವಿಕೆಟ್ ಪಡೆದು ಸಹ ಮಿಂಚಿದರು. ರಾಜದುರೈಯ ಸ್ಪಿನ್ ಮೋಡಿಗೆ ಸಿಲುಕಿದ ಬೊರ್ಸ್ಟಲ್ ತಂಡವು  44.4 ಓವರ್‌ಗಳಲ್ಲಿ 121 ರನ್​ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಬ್ಯಾಪ್‌ಚೈಲ್ಡ್ ತಂಡವು 44 ರನ್​ಗಳ ಜಯ ಸಾಧಿಸಿತು.

Click on your DTH Provider to Add TV9 Kannada