- Kannada News Photo gallery Cricket photos India Defeat England, Virender Sehwag Shares PM Modi’s Photo
Virender Sehwag: ಭಾರತದ ಗೆಲುವಿನ ಬೆನ್ನಲ್ಲೇ ಪ್ರಧಾನಿ ಮೋದಿ ಫೋಟೋ ಹಂಚಿಕೊಂಡು ಕಾಲೆಳೆದ ಸೆಹ್ವಾಗ್
India vs England Test: ಸದ್ಯ ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದ್ದು, ಒಂದು ಪಂದ್ಯ ಮಾತ್ರ ಉಳಿದಿದೆ.
Updated on: Sep 07, 2021 | 5:04 PM

ಲೀಡ್ಸ್ ಟೆಸ್ಟ್ (ಭಾರತ vs ಇಂಗ್ಲೆಂಡ್, 4 ನೇ ಟೆಸ್ಟ್) ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಪುಟಿದೇಳಿದೆ. ಓವಲ್ ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯವನ್ನು 157 ರನ್ಗಳಿಂದ ಜಯಿಸುವ ಮೂಲಕ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್ ಹಿನ್ನಡೆ ಅನುಭವಿಸಿದ್ದ, ಭಾರತ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.

ಕೂ ಆಪ್ಗೆ ಎಂಟ್ರಿಕೊಟ್ಟ ವೀರೇಂದ್ರ ಸೆಹ್ವಾಗ್

ಆದರೆ ಸೆಹ್ವಾಗ್ ವಿಭಿನ್ನವಾಗಿ ಅಭಿನಂದಿಸಿರುವುದು ವಿಶೇಷ. ಅದು ಕೂಡ ಟೀಕಾಗಾರರಿಗೆ ಉತ್ತರ ನೀಡುವ ಮೂಲಕ ಎಂಬುದು ಮತ್ತೊಂದು ವಿಶೇಷ. ಹೌದು, ಇಂಗ್ಲೆಂಡ್ ವಿರುದ್ದ ಭಾರತ ಗೆಲ್ಲುತ್ತಿದ್ದಂತೆ ವೀರು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ- ನೀವು ಅಳುವುದನ್ನು ನಿಲ್ಲಿಸಿ ಎಂದು ಬರೆದಿದ್ದು, ಈ ಮೂಲಕ ಇಂಗ್ಲೆಂಡ್ ತಂಡವನ್ನು ಕಾಲೆಳೆದಿದ್ದಾರೆ. ಅಷ್ಟೇ ಅಲ್ಲದೆ ಈ ತಂಡವು ಟರ್ನಿಂಗ್ ಪಿಚ್ ನಲ್ಲಿ ಮಾತ್ರ ಗೆಲ್ಲಬಹುದು ಎಂದು ಭಾವಿಸುವವರಿಗೆ ಟೀಮ್ ಇಂಡಿಯಾ ತಕ್ಕ ಉತ್ತರ ನೀಡಿದೆ ಎಂದು ಟೀಕಾಗಾರರನ್ನು ಸೆಹ್ವಾಗ್ ಕುಟುಕಿದ್ದಾರೆ. ವೀರು ಅವರ ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದ್ದು, ಒಂದು ಪಂದ್ಯ ಮಾತ್ರ ಉಳಿದಿದೆ. ಮ್ಯಾಂಚೆಸ್ಟರ್ನಲ್ಲಿ ಸೆಪ್ಟೆಂಬರ್ 10 ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಸರಣಿ ಭಾರತದ ವಶವಾಗಲಿದೆ.

ಸಂಕ್ಷಿಪ್ತ ಸ್ಕೋರ್ ವಿವರ: ಭಾರತ ಮೊದಲ ಇನ್ನಿಂಗ್ಸ್: 191/10 (61.3) (ಶಾರ್ದೂಲ್ ಠಾಕೂರ್ 57). ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 290/10 (84) (ಓಲಿ ಪೋಪ್ 81, ಉಮೇಶ್ ಯಾದವ್ 76/3). ಭಾರತ ಎರಡನೇ ಇನ್ನಿಂಗ್ಸ್: 466/10 (148.2) (ರೋಹಿತ್ ಶರ್ಮಾ 127, ಶಾರ್ದೂಲ್ ಠಾಕೂರ್ 60). ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 210/10 (92.2) (ಹಸೀಬ್ ಹಮೀದ್ 63, ಉಮೇಶ್ ಯಾದವ್ 60/3, ಜಸ್ಪ್ರೀತ್ ಬುಮ್ರಾ 27/2)




