IND vs ENG: 2ನೇ ಏಕದಿನದಲ್ಲಿ ಕಣಕ್ಕಿಳಿದ ಕೂಡಲೇ ವಿಶೇಷ ಶತಕ ಪೂರೈಸಿದ ಕೊಹ್ಲಿ

Updated on: Jul 16, 2026 | 5:35 PM

Virat Kohli's Historic 100th ODI in SENA Countries: ಭಾರತ-ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ SENA ದೇಶಗಳಲ್ಲಿ 100 ಏಕದಿನ ಪಂದ್ಯಗಳನ್ನು ಆಡಿದ ಸಾಧನೆ ಮಾಡಿದರು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಈ ಸಾಧನೆ ಮಾಡಿದ ಕೊಹ್ಲಿ, ಅಲ್ಲಿ 10 ಶತಕಗಳೊಂದಿಗೆ 4,344 ರನ್ ಗಳಿಸಿದ್ದಾರೆ.

1 / 5
ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಪ್ರಸ್ತುತ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸಿತ್ತು. ಆದರೆ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ ವಿಶೇಷ ಶತಕವನ್ನು ಪೂರೈಸಿದ್ದಾರೆ (PC-PTI).

2 / 5
ಕಾರ್ಡಿಫ್ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿದ ತಕ್ಷಣ ವಿರಾಟ್ ಕೊಹ್ಲಿ SENA ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) 100 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು(PC-PTI).

3 / 5
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 20, ನ್ಯೂಜಿಲೆಂಡ್‌ನಲ್ಲಿ 13 ಮತ್ತು ಆಸ್ಟ್ರೇಲಿಯಾದಲ್ಲಿ 32 ಪಂದ್ಯಗಳನ್ನು ಆಡಿದ್ದಾರೆ. ಇಂದು ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯ ಇಂಗ್ಲೆಂಡ್‌ ವಿರುದ್ಧ ಕಿಂಗ್ ಕೊಹ್ಲಿಯ 35 ನೇ ಏಕದಿನ ಪಂದ್ಯವಾಗಿದೆ. ಈ ಮೂಲಕ ಕೊಹ್ಲಿ ಸೆನಾ ದೇಶಗಳಲ್ಲಿ 100 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ್ದಾರೆ(PC-PTI).

4 / 5
ಸೆನಾ ದೇಶಗಳಲ್ಲಿ ರನ್ ಗಳಿಸಲು ದಿಗ್ಗಜ ಬ್ಯಾಟ್ಸ್‌ಮನ್‌ಗಳು ಸಹ ಸಾಮಾನ್ಯವಾಗಿ ಕಷ್ಟಪಡುತ್ತಾರೆ, ಆದರೆ ವಿರಾಟ್ ಕೊಹ್ಲಿ ಈ ನಾಲ್ಕು ದೇಶಗಳಲ್ಲಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಅವರು ಸೆನಾ ದೇಶಗಳಲ್ಲಿ 10 ಶತಕಗಳು ಸೇರಿದಂತೆ 4,344 ರನ್ ಗಳಿಸಿದ್ದಾರೆ. ಅವರ ಸರಾಸರಿ ಪ್ರತಿ ಪಂದ್ಯಕ್ಕೆ 54.3 ಆಗಿದೆ(PC-PTI).

5 / 5
ಆದಾಗ್ಯೂ ಎರಡನೇ ಏಕದಿನ ಪಂದ್ಯ ನಡೆಯುತ್ತಿರುವ ಕಾರ್ಡಿಫ್‌ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಅಂಕಿ ಅಂಶಗಳು ಅಷ್ಟು ಉತ್ತಮವಾಗಿಲ್ಲ. 12 ವರ್ಷಗಳ ಹಿಂದೆ ಕೊಹ್ಲಿ ಕೊನೆಯ ಬಾರಿಗೆ ಕಾರ್ಡಿಫ್‌ನಲ್ಲಿ ಏಕದಿನ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ ಅವರು ಖಾತೆಯನ್ನೇ ತೆರೆಯದೆ ಔಟಾಗಿದ್ದರು. ಹೀಗಾಗಿ ಈ ಬಾರಿ ಕೊಹ್ಲಿ ಕಾರ್ಡಿಫ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಎದುರು ನೋಡುತ್ತಿದ್ದಾರೆ(PC-PTI).

Follow Us