೩೭ ವರ್ಷಗಳ ಬಳಿಕ ಟೀಮ್ ಇಂಡಿಯಾದ ‘ಗರ್ವಭಂಗ’

Updated on: Jan 19, 2026 | 7:54 AM

India vs New Zealand: ಭಾರತ ತಂಡವು ತವರಿನಲ್ಲಿ ಒಮ್ಮೆಯೂ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿ ಸೋತಿರಲಿಲ್ಲ. ಇದೀಗ ಬರೋಬ್ಬರಿ ಮೂವತ್ತೇಳು ವರ್ಷಗಳ ಭಾರತದ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಈ ಮೂಲಕ ನ್ಯೂಝಿಲೆಂಡ್ ತಂಡ ಹೊಸ ಇತಿಹಾಸ ನಿರ್ಮಿಸಿದ್ದಾರೆ.

1 / 5
ಟೀಮ್ ಇಂಡಿಯಾದ 37 ವರ್ಷಗಳ ಗೆಲುವಿನ ನಾಗಾಲೋಟ ಕೊನೆಗೂ ಕೊನೆಗೊಂಡಿದೆ. ಅದು ಸಹ ಹೀನಾಯ ಸೋಲಿನೊಂದಿಗೆ. ಅಂದರೆ ಭಾರತ ತಂಡವು ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಸೋತಿದೆ.

2 / 5
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸರಣಿ ಶುರುವಾಗಿದ್ದು 1988 ರಲ್ಲಿ. ಮೊದಲ ಸರಣಿಯಲ್ಲೇ ಟೀಮ್ ಇಂಡಿಯಾ ಕಿವೀಸ್ ಪಡೆಯನ್ನು 4-0 ಅಂತರದಿಂದ ಸೋಲಿಸಿದ್ದರು. ಇದಾದ ಬಳಿಕ ಭಾರತಕ್ಕೆ ಆಗಮಿಸಿದ ನ್ಯೂಝಿಲೆಂಡ್ 2-3 (1995) 2-3 (1999), 0-5 (2010), 2-3 (2016), 1-2 (2017), 0-3 (2023) ಅಂತರದಿಂದ ಸರಣಿಗಳನ್ನು ಸೋತಿದ್ದರು.

3 / 5
ಆದರೆ ಈ ಬಾರಿ ಬಲಿಷ್ಠ ಭಾರತ ತಂಡದ ಲೆಕ್ಕಾಚಾರಗಳನ್ನು ಪ್ರವಾಸಿ ತಂಡ ತಲೆಕೆಳಗಾಗಿಸಿದೆ. ಅಷ್ಟೇ ಅಲ್ಲದೆ 2 ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಚೊಚ್ಚಲ ಬಾರಿ ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

4 / 5
ಈ ಸರಣಿಯ ಮೊದಲ ಸರಣಿಯಲ್ಲಿ ಭಾರತ ತಂಡ 4 ವಿಕೆಟ್​ಗಳ ಜಯ ಸಾಧಿಸಿತ್ತು. ಆದರೆ ರಾಜ್​ಕೋಟ್ ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡಕ್ಕೆ 7 ವಿಕೆಟ್‌ಗಳ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿತ್ತು. ಇದೀಗ ಇಂದೋರ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 41 ರನ್ ಗಳಿಂದ ಟೀಮ್ ಇಂಡಿಯಾವನ್ನು ಬಗ್ಗು ಬಡಿದಿದೆ.

5 / 5
ಈ ಭರ್ಜರಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡವು 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತದಲ್ಲಿ ಏಕದಿನ ಸರಣಿ ಗೆಲ್ಲುವ ಮೂರು ದಶಕಗಳ ಕನಸನ್ನು ಕೊನೆಗೂ ಕಿವೀಸ್ ಪಡೆ ಈಡೇರಿಸಿಕೊಂಡಿದೆ.