IND vs WI: ರುತುರಾಜ್, ಶ್ರೇಯಸ್ಗೆ ಸಿಗುತ್ತಾ ಅವಕಾಶ? 2ನೇ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ
TV9 Web | Updated By: ಪೃಥ್ವಿಶಂಕರ
Updated on:
Feb 17, 2022 | 8:11 PM
IND vs WI: ODI ಸರಣಿಯಲ್ಲಿ ಗಾಯಕ್ವಾಡ್ ಸಹ ಟೀಮ್ ಇಂಡಿಯಾದ ಭಾಗವಾಗಿದ್ದರು ಆದರೆ ಅವರಿಗೆ ಅವಕಾಶ ಸಿಗಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಕೊರೊನಾದಿಂದ ಆಡಲು ಸಾಧ್ಯವಾಗದೆ ಮೂರನೇ ಪಂದ್ಯದಲ್ಲಿ ಬೆಂಚ್‌ನಲ್ಲಿಯೇ ಕುಳಿತಿದ್ದರು.
1 / 5
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯ ಶುಕ್ರವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸೋತಿರುವ ವೆಸ್ಟ್ ಇಂಡೀಸ್ಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಎರಡನೇ ಪಂದ್ಯದಲ್ಲೂ ಮೊದಲ ಗೆಲುವನ್ನು ಪುನರಾವರ್ತಿಸಲು ಟೀಂ ಇಂಡಿಯಾ ಬಯಸಿದ್ದು, ಸರಣಿ ವಶಪಡಿಸಿಕೊಳ್ಳಲು ಬಯಸಿದೆ. ಆದರೆ, ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಏನಾದರೂ ಬದಲಾವಣೆಯಾಗಲಿದೆಯೇ ಎಂಬುದೇ ಪ್ರಶ್ನೆ. ರಿತುರಾಜ್ ಗಾಯಕ್ವಾಡ್ ಮತ್ತು ಅವೇಶ್ ಖಾನ್‌ಗೆ ಅವಕಾಶ ಸಿಗುತ್ತದೆಯೇ ಎಂಬುದು ಪ್ರಶ್ನೆ.
2 / 5
ODI ಸರಣಿಯಲ್ಲಿ ಗಾಯಕ್ವಾಡ್ ಸಹ ಟೀಮ್ ಇಂಡಿಯಾದ ಭಾಗವಾಗಿದ್ದರು ಆದರೆ ಅವರಿಗೆ ಅವಕಾಶ ಸಿಗಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಕೊರೊನಾದಿಂದ ಆಡಲು ಸಾಧ್ಯವಾಗದೆ ಮೂರನೇ ಪಂದ್ಯದಲ್ಲಿ ಬೆಂಚ್‌ನಲ್ಲಿಯೇ ಕುಳಿತಿದ್ದರು. ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಗಾಯಕ್ವಾಡ್‌ಗೆ ಅವಕಾಶ ಸಿಗಲಿಲ್ಲ. ಗಾಯಕ್ವಾಡ್ ಅವರ ಫಾರ್ಮ್ ಅದ್ಭುತವಾಗಿದೆ ಆದರೆ ಅವರು ಬೆಂಚ್ ಮೇಲೆ ಕುಳಿತಿದ್ದಾರೆ. ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ 35 ರನ್‌ಗಳ ನಿಧಾನಗತಿಯ ಇನ್ನಿಂಗ್ಸ್ ಆಡಿದರೆ, ನಾಯಕ ರೋಹಿತ್ ಶರ್ಮಾ ತಮ್ಮ ಆರಂಭಿಕ ಪಾಲುದಾರನನ್ನು ಬದಲಾಯಿಸುತ್ತಾರೆಯೇ ಎಂಬುದು ಇಲ್ಲಿ ಪ್ರಶ್ನೆ.
3 / 5
ಅಂದರೆ, ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶಕ್ಕಾಗಿ ಕಾಯುತ್ತಿರುವ ಅವೇಶ್ ಖಾನ್ ಬಗ್ಗೆಯೂ ಪ್ರಶ್ನೆ ಇದೆ. ಏಕದಿನ ಸರಣಿಯಲ್ಲೂ ಅವಕಾಶ ಸಿಗದ ಅವರು ಮೊದಲ ಟಿ20ಯಲ್ಲೂ ಆಡಿರಲಿಲ್ಲ. ಅವೇಶ್ ಖಾನ್‌ಗೆ ಅವಕಾಶ ಸಿಗುತ್ತಾ ಎಂಬುದೇ ಪ್ರಶ್ನೆ. ಅಥವಾ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ದೀಪಕ್ ಚಹಾರ್ ಮೂವರ ಜೊತೆ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೇಯಾ ಎಂಬುದೆ ಪ್ರಶ್ನೆ.
4 / 5
ರೋಹಿತ್ ಶರ್ಮಾ ಯಾವುದೇ ಬದಲಾವಣೆಗಳಿಲ್ಲದೆ ಎರಡನೇ ಟಿ 20 ಗೆ ಹೋಗಬಹುದು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ಹರ್ಷಲ್ ಪಟೇಲ್ ಅವರಿಗೆ ಹೆಚ್ಚಿನ ಅವಕಾಶಗಳು ಅಗತ್ಯ. ಬೆಂಚ್ ಮೇಲೆ ಕುಳಿತಿರುವ ಆಟಗಾರರನ್ನು ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಪ್ರಯೋಗಿಸಬಹುದು.
5 / 5
ಭಾರತದ ಸಂಭಾವ್ಯ ಪ್ಲೇಯಿಂಗ್ XI - ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್.