IND vs AUS, 2nd Test: 91 ರನ್ಗೆ ಆಲೌಟ್: ತಂಡದಿಂದ ಡೇವಿಡ್ ವಾರ್ನರ್ ತಲೆದಂಡ?
TV9 Web | Updated By: ಝಾಹಿರ್ ಯೂಸುಫ್
Updated on:
Feb 12, 2023 | 7:24 PM
India vs Australia 2nd Test: ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕರಿಬ್ಬರು ಕಳಪೆ ಪ್ರದರ್ಶನ ನೀಡಿದ್ದರು. ಅದರಲ್ಲೂ ಅನುಭವಿ ಆಟಗಾರ ಡೇವಿಡ್ ವಾರ್ನರ್ ಮೊದಲ ಇನಿಂಗ್ಸ್ನಲ್ಲಿ 1 ರನ್ಗಳಿಸಿ ಔಟಾದರೆ, 2ನೇ ಇನಿಂಗ್ಸ್ನಲ್ಲಿ 10 ರನ್ಗಳಿಸಿ ಹೊರನಡೆದರು.
1 / 8
India vs Australia 4th Test
2 / 8
ಹೌದು, ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕರಿಬ್ಬರು ಕಳಪೆ ಪ್ರದರ್ಶನ ನೀಡಿದ್ದರು. ಅದರಲ್ಲೂ ಅನುಭವಿ ಆಟಗಾರ ಡೇವಿಡ್ ವಾರ್ನರ್ ಮೊದಲ ಇನಿಂಗ್ಸ್ನಲ್ಲಿ 1 ರನ್ಗಳಿಸಿ ಔಟಾದರೆ, 2ನೇ ಇನಿಂಗ್ಸ್ನಲ್ಲಿ 10 ರನ್ಗಳಿಸಿ ಹೊರನಡೆದರು.
3 / 8
ಆರಂಭದಲ್ಲೇ ಪ್ರಮುಖ ಆಟಗಾರ ಕೈಕೊಟ್ಟ ಪರಿಣಾಮ ಆಸ್ಟ್ರೇಲಿಯಾ ತಂಡವು 2ನೇ ಇನಿಂಗ್ಸ್ನಲ್ಲಿ 91 ರನ್ಗಳಿಗೆ ಆಲೌಟ್ ಆಗಿತ್ತು. ಇದೀಗ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಡೇವಿಡ್ ವಾರ್ನರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಕಲ್ಪಿಸಿರುವ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆಗಳನ್ನೆತ್ತಿದ್ದಾರೆ.
4 / 8
ಏಕೆಂದರೆ ಡೇವಿಡ್ ವಾರ್ನರ್ ಕಳೆದ 10 ಟೆಸ್ಟ್ ಇನಿಂಗ್ಸ್ಗಳಲ್ಲಿ ಸತತ ವೈಫಲ್ಯ ಹೊಂದಿದ್ದಾರೆ. ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದರು. ಇದನ್ನು ಬಿಟ್ಟರೆ ಇನ್ನುಳಿದ 5 ಇನಿಂಗ್ಸ್ನಲ್ಲಿ ವಾರ್ನರ್ ಅವರ ವೈಯುಕ್ತಿಕ ಸ್ಕೋರ್ 28 ದಾಟಿಲ್ಲ ಎಂಬುದೇ ಅಚ್ಚರಿ. ಹೀಗಾಗಿಯೇ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
5 / 8
ಮತ್ತೊಂದೆಡೆ ಡೇವಿಡ್ ವಾರ್ನರ್ಗೆ ಅವಕಾಶ ನೀಡಿದ ಪರಿಣಾಮ ಪ್ರಸ್ತುತ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನದಲ್ಲಿರುವ ಟ್ರಾವಿಸ್ ಹೆಡ್ ಹೊರಗುಳಿಯಬೇಕಾಯಿತು. ಇದೀಗ 2ನೇ ಪಂದ್ಯದಲ್ಲಿ ಹೆಡ್ ಅವರನ್ನು ಕಣಕ್ಕಿಳಿಸಲು ಆಸ್ಟ್ರೇಲಿಯಾ ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ ಎಂದು ವರದಿಯಾಗಿದೆ.
6 / 8
ಇತ್ತ ಟ್ರಾವಿಸ್ ಹೆಡ್ಗೆ ಅವಕಾಶ ನೀಡಬೇಕಿದ್ದರೆ ಓರ್ವ ಬ್ಯಾಟರ್ ಅನ್ನು ಕೈ ಬಿಡಲೇಬೇಕು. ಈ ಪಟ್ಟಿಯಲ್ಲಿ ಕಳಪೆ ಫಾರ್ಮ್ನಲ್ಲಿರುವ ಡೇವಿಡ್ ವಾರ್ನರ್ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ 2ನೇ ಪಂದ್ಯಕ್ಕೂ ಮುನ್ನವೇ ವಾರ್ನರ್ ಅವರ ತಲೆದಂಡವಾಗುವುದು ಖಚಿತ ಎಂದು ಹೇಳಲಾಗುತ್ತಿದೆ.
7 / 8
ಅದರಂತೆ ದೆಹಲಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುವುದು ಅನುಮಾನ. ಒಂದು ವೇಳೆ ವಾರ್ನರ್ಗೆ ಚಾನ್ಸ್ ನೀಡಿದ್ರೆ ಉಸ್ಮಾನ್ ಖ್ವಾಜಾ ಹೊರಬೀಳಲಿದ್ದಾರೆ. ಒಟ್ಟಿನಲ್ಲಿ 91 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡವು 2ನೇ ಪಂದ್ಯಕ್ಕಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವುದಂತು ಖಚಿತ.
8 / 8
ಹೀಗಾಗಿ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.