
ಬುಮ್ರಾ

ಭಾರತದ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆಯನ್ನು ಬುಮ್ರಾ ನಿರ್ಮಿಸಿದ್ದಾರೆ. ಅವರು ಇಲ್ಲಿಯವರೆಗೆ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವಿಷಯದಲ್ಲಿ ಸಯೀದ್ ಅಜ್ಮಲ್ ಮೊದಲ ಸ್ಥಾನದಲ್ಲಿದ್ದು, ಅವರು ಆಸೀಸ್ ವಿರುದ್ಧ 19 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.

ಇವರ ಬಳಿಕ ಮೊಹಮ್ಮದ್ ಅಮೀರ್ 17 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಉಮರ್ ಗುಲ್ ಮತ್ತು ಇಶ್ ಸೋಧಿ ತಲಾ 16 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ಅಜ್ಮಲ್ ದಾಖಲೆಯನ್ನು ಬುಮ್ರಾ ಮುರಿಯುವ ಸಾಧ್ಯತೆಯಿದೆ. ಆದರೆ, ಬುಮ್ರಾಗೆ ಇದರಲ್ಲಿ 5 ವಿಕೆಟ್‌ಗಳ ಅಗತ್ಯವಿದೆ.

Jasprit Bumrah

ಬುಮ್ರಾ ಜೊತೆಗೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹಾರ್ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಅವಕಾಶ ಪಡೆದಿದ್ದಾರೆ. ಮೊಹಮ್ಮದ್ ಶಮಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ಶಮಿಯನ್ನು ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.