- Kannada News Photo gallery Cricket photos Sachin Tendulkar shares million dollar image asks fans to guess how many runs and wickets in one pic
Sachin Tendulkar: ಸಚಿನ್ ಕೇಳಿದ ಪ್ರಶ್ನೆಗೆ ನೀವು ಉತ್ತರಿಸಬಲ್ಲಿರಾ? ಸಾಧ್ಯವಾದರೆ ಪ್ರಯತ್ನಿಸಿ
Sachin Tendulkar: ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಮೂಲಕ, ಪ್ರಪಂಚದಾದ್ಯಂತದ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ತಾರೆಯರನ್ನು ಮತ್ತೆ ಆಕ್ಷನ್‌ನಲ್ಲಿ ನೋಡುವ ಅವಕಾಶವನ್ನು ಪಡೆಯುತ್ತಿದ್ದಾರೆ.
Updated on: Sep 17, 2022 | 7:30 AM

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪ್ರಸ್ತುತ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸರಣಿಯಲ್ಲಿ ಆಡುತ್ತಿರುವ ಲೆಜೆಂಡ್ ಆಟಗಾರರಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಸಚಿನ್, ಅಭಿಮಾನಿಗಳು ಉತ್ತರಿಸಲು ಕಷ್ಟವಾಗುವಂತಹ ಪ್ರಶ್ನೆಯೊಂದನ್ನು ಎಲ್ಲರ ಮುಂದಿಟ್ಟಿದ್ದಾರೆ.

ಅವರಲ್ಲದೆ, ಯುವರಾಜ್ ಸಿಂಗ್, ಆಸ್ಟ್ರೇಲಿಯಾದ ಬ್ರೆಟ್ ಲೀ, ಶೇನ್ ವ್ಯಾಟ್ಸನ್ ಸಚಿನ್ ಹಂಚಿಕೊಂಡಿರುವ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಎಷ್ಟು ರನ್ ಮತ್ತು ವಿಕೆಟ್‌ಗಳಿವೆ ಎಂಬುದನ್ನು ನೀವು ಹೇಳಬಲ್ಲಿರಾ ಎಂದು ಸಚಿನ್ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಮೂಲಕ, ಪ್ರಪಂಚದಾದ್ಯಂತದ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ತಾರೆಯರನ್ನು ಮತ್ತೆ ಆಕ್ಷನ್‌ನಲ್ಲಿ ನೋಡುವ ಅವಕಾಶವನ್ನು ಪಡೆಯುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಬ್ರಿಯಾನ್ ಲಾರಾ, ಬ್ರೆಟ್ ಲೀ ಮುಂತಾದ ದಿಗ್ಗಜರು ಈ ಸರಣಿಯ ಭಾಗವಾಗಿದ್ದಾರೆ.

ಭಾರತದ ಇಂಡಿಯಾ ಲೆಜೆಂಡ್ಸ್ ತಂಡವು ಹಾಲಿ ಚಾಂಪಿಯನ್ ಆಗಿದ್ದು, ಸಚಿನ್ ತೆಂಡೂಲ್ಕರ್ ನಾಯಕತ್ವ ವಹಿಸಿದ್ದಾರೆ. ಭಾರತವಲ್ಲದೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಸರಣಿಯಲ್ಲಿ ಭಾಗಿಯಾಗಿವೆ. ಇದು ಸರಣಿಯ ಎರಡನೇ ಸೀಸನ್ ಆಗಿದೆ.

ಇಂಡಿಯನ್ ಲೆಜೆಂಡ್ಸ್ ಬುಧವಾರ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಮಳೆಯಿಂದಾಗಿ ಪಂದ್ಯದಲ್ಲಿ ಒಂದೇ ಒಂದು ಎಸೆತವನ್ನು ಎಸೆಯಲಾಗಲಿಲ್ಲ. ಇದಾದ ಬಳಿಕ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಪಂದ್ಯಗಳ ದಿನಾಂಕದ ಜೊತೆಗೆ ಸ್ಥಳವನ್ನೂ ಸಹ ಬದಲಾಯಿಸಲಾಗಿದೆ.









