
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಈ ಪಂದ್ಯದಲ್ಲಿ ಒಂದು ವಿಶಿಷ್ಟ ಘಟನೆ ನಡೆದಿದೆ. ವಾಸ್ತವವಾಗಿ, ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ 3 ಶತಕಗಳ ಜೊತೆಯಾಟ ಕಂಡುಬಂದಿದೆ. ಮಹಿಳಾ ವಿಶ್ವಕಪ್‌ನಲ್ಲಿ ಈ ಹಿಂದೆ ಯಾವ ಪಂದ್ಯದಲ್ಲೂ ಹೀಗಾಗಿರಲಿಲ್ಲ.

ಮೊದಲು ಪಾಲುದಾರಿಕೆ ಬಗ್ಗೆ ಮಾತನಾಡುವುದಾದರೆ, ಆಸ್ಟ್ರೇಲಿಯಾದ ಗೆಲುವಿಗೆ ಅಡಿಪಾಯ ಹಾಕಿದ ಶತಕದ ಜೊತೆಯಾಟವು ರಾಚೆಲ್ ಹೈನ್ಸ್ ಮತ್ತು ಅಲಿಸ್ಸಾ ಹೀಲಿ ನಡುವೆ ಇತ್ತು. ಇವರಿಬ್ಬರ ನಡುವೆ 117 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟವಿತ್ತು.


Published On - 3:13 pm, Sat, 19 March 22