ENG vs IND: ಭಾರತ-ಇಂಗ್ಲೆಂಡ್ 2ನೇ ಟಿ20ಗೆ ಇದೆಯೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ
TV9 Web | Updated By: Vinay Bhat
Updated on:
Jul 09, 2022 | 8:40 AM
Edgbaston Weather: ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಮೈದಾನದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡುವುದಿಲ್ಲ. ಹವಾಮಾನ ವರದಿ ಪ್ರಕಾರ 40% ಮೋಡ ಕವಿದ ವಾತಾವರಣವಿರಲಿದ್ದು, ಪಂದ್ಯದ ಸಮಯದಲ್ಲಿ 21° ಉಷ್ಣಾಂಶವಿರಲಿದೆ ಹಾಗೂ ಯಾವುದೇ ಮಳೆಯ ಸಂಭವ ಇರುವುದಿಲ್ಲ.
1 / 7
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 50 ರನ್ಗಳ ಅಮೋಘ ಗೆಲುವು ಕಂಡಿದ್ದ ಭಾರತ (India vs England) ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು (ಜು. 9) ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದ್ದು ಟೀಮ್ ಇಂಡಿಯಾ (Team India) ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
2 / 7
ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ವೇಗಿ ಜಸ್ ಪ್ರೀತ್ ಬುಮ್ರಾ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಭಾರತ ಗೆದ್ದಿದ್ದರೂ ಇಂದಿನ ಮ್ಯಾಚ್ ಗೆ ಮುಖ್ಯ ಬದಲಾವಣೆ ಆಗುವುದು ಖಚಿತ.
3 / 7
ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಇಂಗ್ಲೆಂಡ್ ಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯುಂಟಾಗಿದ್ದ ಕಾರಣ ಈ ಪಂದ್ಯದಲ್ಲೂ ಮಳೆ ಅಡ್ಡಿಯನ್ನುಂಟು ಮಾಡುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡುವುದಿಲ್ಲ. ಹವಾಮಾನ ವರದಿ ಪ್ರಕಾರ 40% ಮೋಡ ಕವಿದ ವಾತಾವರಣವಿರಲಿದ್ದು, ಪಂದ್ಯದ ಸಮಯದಲ್ಲಿ 21° ಉಷ್ಣಾಂಶವಿರಲಿದೆ ಹಾಗೂ ಯಾವುದೇ ಮಳೆಯ ಸಂಭವ ಇರುವುದಿಲ್ಲ.
4 / 7
ಬರ್ಮಿಂಗ್ ಹ್ಯಾಮ್ ನ ಎಜ್ಬಾಸ್ಟನ್ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚಾಗಿ ಸಹಕರಿಸಲಿದ್ದು, ಬೌಲರ್ ಗಳಿಗೆ ತಲೆನೋವಾಗಲಿದೆ. ಕ್ರೀಡಾಂಗಣದ ಸ್ಟ್ರೈಟ್ ಮತ್ತು ಸೈಡ್ ಬೌಂಡರಿಗಳು 59-60 ಮೀಟರ್ ಉದ್ದದಷ್ಟು ಇರಲಿದ್ದು, ಸ್ಕ್ವೇರ್ ಬೌಂಡರಿ 50 ಮೀಟರ್ ಗಿಂತ ಕಡಿಮೆ ಇದೆ.
5 / 7
ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿತ್ತು.
6 / 7
ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 19.3 ಓವರ್ಗಳಲ್ಲಿ 148 ರನ್ ಕಲೆಹಾಕಿ 50 ರನ್ಗಳ ಹೀನಾಯ ಸೋಲನ್ನು ಕಂಡಿತು. ಭಾರತ ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
7 / 7
ಇಂದು ನಡೆಯಲಿರುವ ಎರಡನೇ ಟಿ20 ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಸೋನಿ ನೆಟ್ ವರ್ಕ್ ಚಾನೆಲ್ ಹಾಗೂ ಸೋನಿ ಲೀವ್ ಅಪ್ಲಿಕೇಶನ್ ನಲ್ಲಿ ಲೈವ್ ವೀಕ್ಷಿಸಬಹುದು.
Published On - 8:40 am, Sat, 9 July 22